ನರೇಂದ್ರ ಮೋದಿ ಈಗ ಅತಿ ದೀರ್ಘಾವಧಿಯ ಕಾಂಗ್ರೆಸ್ಸೇತರ ಪ್ರಧಾನ ಮಂತ್ರಿ!

ಪ್ರಧಾನ ಮಂತ್ರಿ ನರೇಂದ್ರ ಮೋದಿ ತಮ್ಮ ರಾಜಕೀಯ ಜೀವನದಲ್ಲಿ ಇಂದು ಒಂದು ಹೊಸ ಮೈಲಿಗೈಲನ್ನು ಸ್ಥಾಪಿಸಿದರು. ಒಬ್ಬ ಕಾಂಗ್ರೆಸ್ಸೇತರ ಪ್ರಧಾನ ಮಂತ್ರಿಯಾಗಿ ಭಾರತಕ್ಕೆ ಅತಿ ದೀರ್ಘಕಾಲದವರೆಗೆ ಸೇವೆ ಸಲ್ಲಿಸಿರುವ ನಾಯಕರೆಂಬ ಖ್ಯಾತಿಗೆ ಅವರು ಭಾಜನರಾಗಿದ್ದಾರೆ. ಹೌದು, ಈ ದಾಖಲೆ ಇವತ್ತ್ತಿನವರೆಗೆ, ದಿವಂಗತ ಬಿಜೆಪಿ ನಾಯಕ ಹಾಗೂ ಮೂರು ಅವಧಿಗಳಿಗೆ ರಾಷ್ಟ್ರದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ಅಟಲ ಬಿಹಾರಿ ವಾಜಪೇಯಿ ಅವರ ಹೆಸರಲ್ಲಿತ್ತು. ವಾಜಪೇಯಿ ಅವರು ಒಟ್ಟು 2,268 ದಿನಗಳವರೆಗೆ ಪ್ರಧಾನಿ ಹುದ್ದೆಯನ್ನು ಅಲಂಕರಿಸಿದ್ದರು ಎರಡನೇ ಅವಧಿಗೆ ಪ್ರಧಾನಿಯಾಗಿ […]

ನರೇಂದ್ರ ಮೋದಿ ಈಗ ಅತಿ ದೀರ್ಘಾವಧಿಯ ಕಾಂಗ್ರೆಸ್ಸೇತರ ಪ್ರಧಾನ ಮಂತ್ರಿ!
ಅರುಣ್​ ಕುಮಾರ್​ ಬೆಳ್ಳಿ

Updated on: Aug 13, 2020 | 6:40 PM

ಪ್ರಧಾನ ಮಂತ್ರಿ ನರೇಂದ್ರ ಮೋದಿ ತಮ್ಮ ರಾಜಕೀಯ ಜೀವನದಲ್ಲಿ ಇಂದು ಒಂದು ಹೊಸ ಮೈಲಿಗೈಲನ್ನು ಸ್ಥಾಪಿಸಿದರು. ಒಬ್ಬ ಕಾಂಗ್ರೆಸ್ಸೇತರ ಪ್ರಧಾನ ಮಂತ್ರಿಯಾಗಿ ಭಾರತಕ್ಕೆ ಅತಿ ದೀರ್ಘಕಾಲದವರೆಗೆ ಸೇವೆ ಸಲ್ಲಿಸಿರುವ ನಾಯಕರೆಂಬ ಖ್ಯಾತಿಗೆ ಅವರು ಭಾಜನರಾಗಿದ್ದಾರೆ.

ಹೌದು, ಈ ದಾಖಲೆ ಇವತ್ತ್ತಿನವರೆಗೆ, ದಿವಂಗತ ಬಿಜೆಪಿ ನಾಯಕ ಹಾಗೂ ಮೂರು ಅವಧಿಗಳಿಗೆ ರಾಷ್ಟ್ರದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ಅಟಲ ಬಿಹಾರಿ ವಾಜಪೇಯಿ ಅವರ ಹೆಸರಲ್ಲಿತ್ತು. ವಾಜಪೇಯಿ ಅವರು ಒಟ್ಟು 2,268 ದಿನಗಳವರೆಗೆ ಪ್ರಧಾನಿ ಹುದ್ದೆಯನ್ನು ಅಲಂಕರಿಸಿದ್ದರು ಎರಡನೇ ಅವಧಿಗೆ ಪ್ರಧಾನಿಯಾಗಿ ಆಯ್ಕೆಯಾಗಿರುವ ನರೇಂದ್ರ ಮೋದಿಯವರಿಗೆ ಪ್ರಧಾನ ಮಂತ್ರಿ ಕಚೇರಿಯಲ್ಲಿಂದು 2,269 ನೇ ದಿನ.

1947ರಿಂದೀಚೆಗೆ ಪ್ರಧಾನಿಗಳಾಗಿ ಕಾರ್ಯ ನಿರ್ವಹಿಸಿರುವವರ ಸೇವಾವಧಿಯನ್ನು ನೋಡಿದ್ದೇಯಾದರೆ ಮೋದಿ, ನಾಲ್ಕನೇ ಸ್ಥಾನದಲ್ಲಿದ್ದಾರೆ. ಭಾರತದ ಮೊಟ್ಟ ಪ್ರಧಾನ ಮಂತ್ರಿ ದಿವಂಗತ ಜವಾಹರಲಾಲ ನೆಹರೂ 16 ವರ್ಷ, 286 ದಿನಗಳವರೆಗೆ ಆ ಸ್ಥಾನದಲ್ಲಿ ಕೆಲಸ ಮಾಡಿ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.

ನೆಹರೂ ನಂತರದ ಸ್ಥಾನ ಅವರ ಮಗಳು ದಿವಂಗತ ಶ್ರೀಮತಿ ಇಂದಿರಾ ಗಾಂಧಿಯವರದ್ದು. ಅವರು 11 ವರ್ಷ, 59 ದಿನಗಳವರೆಗೆ ಪ್ರಧಾನಿಯಾಗಿ ಕೆಲಸ ಮಾಡಿದರು. ಮೋದಿಯವರಿಗಿಂತ ಮೊದಲು ಎರಡು ಅವಧಿಗಳಿಗೆ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ 10 ವರ್ಷ ಮತ್ತು 4 ದಿನಗಳ ಕಾಲ ಸೇವೆ ಸಲ್ಲಿಸಿದರು.

2014 ರಲ್ಲಿ ಮೊದಲಬಾರಿಗೆ ಪ್ರಧಾನಿಯಾದ ಮೋದಿ, 2019 ರಲ್ಲಿ ಮತ್ತೊಮ್ಮೆ ಬಿಜೆಪಿ ನೇತೃತ್ವದ ರಾಷ್ಟೀಯ ಸಂಯುಕ್ತ ರಂಗವನ್ನು (ಎನ್​ಡಿಎ) ಭಾರೀ ಬಹಮತದೊಂದಿಗೆ ಗೆಲ್ಲಿಸುವ ಮೂಲಕ ಎರಡನೇ ಬಾರಿಗೆ ಆ ಹುದ್ದೆಯನ್ನಲಂಕರಿಸಿ 6 ವರ್ಷಗಳನ್ನು ಪೂರೈಸಿದ್ದಾರೆ.

Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Follow Us