AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಮ್ಮನ್ನು ಹೊಗಳಿದ ಸ್ಯಾಮ್ ಪಿತ್ರೋಡಾಗೆ ಪ್ರಧಾನಿ ದೀಪಾವಳಿ ಶುಭಾಶಯ; ತಮಗೂ ಶುಭಾಶಯ ಬೇಕೆಂದ ನೆಟ್ಟಿಗರಿಗೂ ಅಸ್ತು ಎಂದ ಮೋದಿ

ರಾಜಕೀಯದಲ್ಲಿ ಕಡುವೈರಿಗಳಾದವರು ವೈಯಕ್ತಿಕ ಜೀವನದಲ್ಲೂ ವೈರಿಗಳಾಗಿರಬೇಕೆಂದಿಲ್ಲ. ಇದಕ್ಕೆ ಮೋದಿ ಮತ್ತು ಸ್ಯಾಮ್ ಪಿತ್ರೋಡಾ ಉದಾಹರಣೆ. ಮೋದಿ ಅವರು ವೈಯಕ್ತಿಕವಾಗಿ ತನಗೆ ಸ್ನೇಹಿತರಾಗಿದ್ದಾರೆ. ಅವರ ಜೊತೆ ಸಂಬಂಧ ಉತ್ತಮವಾಗಿದೆ ಎಂದು ಸ್ಯಾಮ್ ಪಿತ್ರೋಡಾ ಹೇಳಿದ್ದಾರೆ. ಮೋದಿ ಅವರು ಪಿತ್ರೋಡಾಗೆ ದೀಪಾವಳಿ ಶುಭಾಶಯ ಹೇಳಿದ್ದಾರೆ. ತಮಗೂ ಶುಭಾಶಯ ಕೋರಬೇಕೆಂದ ನೆಟ್ಟಿಗರ ಬೇಡಿಕೆಗೆ ಅಸ್ತು ಎಂದಿದ್ದಾರೆ ಮೋದಿ.

ತಮ್ಮನ್ನು ಹೊಗಳಿದ ಸ್ಯಾಮ್ ಪಿತ್ರೋಡಾಗೆ ಪ್ರಧಾನಿ ದೀಪಾವಳಿ ಶುಭಾಶಯ; ತಮಗೂ ಶುಭಾಶಯ ಬೇಕೆಂದ ನೆಟ್ಟಿಗರಿಗೂ ಅಸ್ತು ಎಂದ ಮೋದಿ
ನರೇಂದ್ರ ಮೋದಿImage Credit source: Narendra Modi's Youtube
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 12, 2026 | 4:40 PM

Share

ನವದೆಹಲಿ, ನವೆಂಬರ್ 12: ಕಾಂಗ್ರೆಸ್​ನ ವಿದೇಶ ವಿಭಾಗದ ಮುಖ್ಯಸ್ಥ ಸ್ಯಾಮ್ ಪಿತ್ರೋಡಾಗೆ ಪ್ರಧಾನಿ ನರೇಂದ್ರ ಮೋದಿ ದೀಪಾವಳಿ ಶುಭಾಶಯ ತಿಳಿಸಿದ್ದು ಆನ್​ಲೈನ್​ನಲ್ಲಿ ತಮಾಷೆಯ ಚರ್ಚೆಗಳು ಹುಟ್ಟುಹಾಕಿವೆ. ರಾಜಕೀಯ ವಿರೋಧಿಗೆ ಶುಭಾಶಯ ಹೇಳುತ್ತೀರಿ. ತಮಗೂ ಶುಭಾಶಯ ಕೋರಿರಿ ಎಂದು ಹಲವರು ಸೋಷಿಯಲ್ ಮೀಡಿಯಾದಲ್ಲಿ ಪ್ರಧಾನಿಗಳ ಬೆನ್ನುಬಿದ್ದಿದ್ದಾರೆ. ಒಬ್ಬ ಎಕ್ಸ್ ಬಳಕೆದಾರರ ಬೇಡಿಕೆಗೆ ಬಾಗಿದ ನರೇಂದ್ರ ಮೋದಿ, ಅವರಿಗೆ ದೀಪಾವಳಿ ಶುಭಾಶಯ ತಿಳಿಸಿದರು.

‘ನೀವು ಸ್ಯಾಮ್ ಪಿತ್ರೋಡಾಗೆ ಹ್ಯಾಪಿ ದೀಪಾವಳಿ ಎಂದು ಶುಭ ಕೋರಬಲ್ಲಿರಾದರೆ, ನಮಗೂ ಶುಭಾಶಯ ಹೇಳಿ ಮೋದಿ ಜಿ’ ಎಂದು ಮಿಹಿರ್ ಝಾ ಎನ್ನುವ ಎಕ್ಸ್ ಬಳಕೆದಾರರು ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರಧಾನಿ ಮೋದಿ ಸ್ಪಂದಿಸಿ ‘ತಮಗೂ ಹ್ಯಾಪಿ ದೀಪಾವಳಿ ಮಿಹಿರ್ ಭಾಯ್. ಹಬ್ಬದ ಋತು ಮತ್ತು ಮುಂಬರುವ ವರ್ಷ ಚೆನ್ನಾಗಿರಲಿ’ ಎಂದು ಉತ್ತರಿಸಿದರು. ಜೊತೆಗೆ ಒಂದು ಸ್ಮೈಲಿಂಗ್ ಇಮೋಜಿ ಕೂಡ ಹಾಕಿದರು.

ಮಿಹಿರ್ ಝಾ ಅವರಿಗೆ ಶುಭ ಕೋರಿದ ಪ್ರಧಾನಿ

ಇದನ್ನೂ ಓದಿ: ಮೋದಿ ಒಳ್ಳೆಯ ವ್ಯಕ್ತಿ, ಕಠಿಣ ಪರಿಶ್ರಮಿ ಅವರೊಂದಿಗೆ ನನಗೆ ವೈಯಕ್ತಿಕ ದ್ವೇಷವಿಲ್ಲ: ಸ್ಯಾಮ್ ಪಿತ್ರೋಡಾ

ನರೇಂದ್ರ ಮೋದಿಯನ್ನು ಹೊಗಳಿದ ಸ್ಯಾಮ್ ಪಿತ್ರೋಡಾ

ಕಾಂಗ್ರೆಸ್​ನ ವಿದೇಶ ವಿಭಾಗದ ಮುಖ್ಯಸ್ಥ ಸ್ಯಾಮ್ ಪಿತ್ರೋಡಾ ಅವರು ನರೇಂದ್ರ ಮೋದಿ ಅವರನ್ನು ಹೊಗಳಿದ ವಿಡಿಯೋವೊಂದನ್ನು ಐಎಎನ್​ಎಸ್ ಸುದ್ದಿ ಸಂಸ್ಥೆ ಹಂಚಿಕೊಂಡಿದೆ. ‘ಮೋದಿ ನನ್ನ ಗುಜರಾತಿ ಗೆಳೆಯ. ಒಬ್ಬ ವ್ಯಕ್ತಿಯಾಗಿ ಅವರ ಮೇಲೆ ಗೌರವ ಇದೆ. ಪತ್ನಿ ಜೊತೆ ನಾನು ಅವರನ್ನು ಭೇಟಿಯಾಗಿದ್ದೇನೆ. ವೈಯಕ್ತಿಕ ಮಟ್ಟದಲ್ಲಿ ಬಹಳ ಒಳ್ಳೆಯ ವ್ಯಕ್ತಿ. ಬಹಳ ಒಳ್ಳೆಯ ವಾಗ್ಮಿ ಮತ್ತು ಪರಿಶ್ರಮಿ. ನಮ್ಮ ಬಾಂಧವ್ಯ ಚೆನ್ನಾಗಿದೆ’ ಎಂದು ಪಿತ್ರೋಡಾ ಆ ವಿಡಿಯೋದಲ್ಲಿ ಹೇಳಿದ್ದಾರೆ.

‘ಒಬ್ಬ ಗುಜರಾತೀ ನಾಯಕನಾಗಿ, ಸ್ನೇಹಿತನಾಗಿ ಅಥವಾ ಹಿತೈಷಿಯಾಗಿ ಮೋದಿ ಮೇಲೆ ನನಗೇನೂ ಸಮಸ್ಯೆ ಇಲ್ಲ. ನನ್ನೊಂದಿಗೆ ಚೆನ್ನಾಗಿದ್ದಾರೆ. ಅವರ ರಾಜಕೀಯ ವಿಚಾರಗಳಿಗಷ್ಟೇ ನನ್ನ ಅಭ್ಯಂತರ ಇರುವುದು’ ಎಂದು ಸ್ಯಾಮ್ ಪಿತ್ರೋಡಾ ತಿಳಿಸಿದ್ದಾರೆ.

ಇದನ್ನೂ ಓದಿ: ಫ್ಯಾಕ್ಸ್ ಯಂತ್ರದಿಂದ ಇನ್‌ಸ್ಟಾಗ್ರಾಂ ರೀಲ್ಸ್‌ವರೆಗೆ, 25 ವರ್ಷಗಳಲ್ಲಿ ರಾಜಕೀಯ, ಮಾಧ್ಯಮದ ಸ್ವರೂಪ ಬದಲಾಗಿದೆ: ಮೋದಿ

ಈ ವಿಡಿಯೋವನ್ನು ಉಲ್ಲೇಖಿಸಿ ನರೇಂದ್ರ ಮೋದಿ ಅವರು ಎಕ್ಸ್​ನಲ್ಲಿ ಪೋಸ್ಟ್ ಹಾಕಿದರು. ಸ್ಯಾಮ್ ಭಾಯ್ ಮತ್ತು ಅಂಜನಾ ಬೆನ್​ಗೆ ದೀಪಾವಳಿ ಮತ್ತು ಹೊಸ ವರ್ಷದ ಶುಭಾಶಯ ಕೋರಿದರು. ಅದೀಗ ನೆಟ್ಟಿಗರಿಂದ ಸೋಜಿಗದ ಪ್ರತಿಕ್ರಿಯೆಗೂ ಎಡೆ ಮಾಡಿಕೊಟ್ಟಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಯಶಸ್ ವಿರುದ್ಧ ತಿರುಗಿ ಬಿದ್ದ ಆಸಿಯಾ: ಸ್ನೇಹ ಅಂತ್ಯ, ಪೈಪೋಟಿ ಶುರು
ಯಶಸ್ ವಿರುದ್ಧ ತಿರುಗಿ ಬಿದ್ದ ಆಸಿಯಾ: ಸ್ನೇಹ ಅಂತ್ಯ, ಪೈಪೋಟಿ ಶುರು
ಸಚಿವರ ಭಾಷಣಕ್ಕೆ ಕೋಕ್​​: ಕೃಷ್ಣ ಭೈರೇಗೌಡ ಅಸಮಾಧಾನ
ಸಚಿವರ ಭಾಷಣಕ್ಕೆ ಕೋಕ್​​: ಕೃಷ್ಣ ಭೈರೇಗೌಡ ಅಸಮಾಧಾನ
ನಾಳೆ ಪಿಎಂ ಮೋದಿ ಉದ್ಘಾಟಿಸಲಿರೋ ಟಿಲ್ಟೆಡ್ ಎಲ್​ಇಡಿ ಡೋಮ್ ತಾರಾಲಯ ಹೇಗಿದೆ
ನಾಳೆ ಪಿಎಂ ಮೋದಿ ಉದ್ಘಾಟಿಸಲಿರೋ ಟಿಲ್ಟೆಡ್ ಎಲ್​ಇಡಿ ಡೋಮ್ ತಾರಾಲಯ ಹೇಗಿದೆ
ಅರಣ್ಯ ಇಲಾಖೆಯಿಂದ 51 ಕಾವಾಡಿ ಹುದ್ದೆಗೆ ನೇಮಕಾತಿ ಸ್ಥಗಿತ
ಅರಣ್ಯ ಇಲಾಖೆಯಿಂದ 51 ಕಾವಾಡಿ ಹುದ್ದೆಗೆ ನೇಮಕಾತಿ ಸ್ಥಗಿತ
ಮೆಟ್ರೋ ಅನುದಾನ ಜಟಾಪಟಿ: ತೇಜಸ್ವಿ ಸೂರ್ಯ ಪತ್ರಿಕಾಗೋಷ್ಠಿ ಲೈವ್
ಮೆಟ್ರೋ ಅನುದಾನ ಜಟಾಪಟಿ: ತೇಜಸ್ವಿ ಸೂರ್ಯ ಪತ್ರಿಕಾಗೋಷ್ಠಿ ಲೈವ್
ಜೈಲಿನಿಂದ ಪರೋಲ್​​ ಮೇಲೆ ಹೊರಬಂದು ತಲೆಮರೆಸಿಕೊಂಡ ಜೀವಾವಧಿ ಶಿಕ್ಷೆ ಕೈದಿ
ಜೈಲಿನಿಂದ ಪರೋಲ್​​ ಮೇಲೆ ಹೊರಬಂದು ತಲೆಮರೆಸಿಕೊಂಡ ಜೀವಾವಧಿ ಶಿಕ್ಷೆ ಕೈದಿ
ಕೆಎಸ್​ಆರ್​ಟಿಸಿ ಬಸ್ ಟಿಕೆಟ್ ಬೆಲೆ ಹೆಚ್ಚಳ ಆಯ್ತು ಈಗ ಬಾಡಿಗೆ ದರವೂ ಏರಿಕೆ!
ಕೆಎಸ್​ಆರ್​ಟಿಸಿ ಬಸ್ ಟಿಕೆಟ್ ಬೆಲೆ ಹೆಚ್ಚಳ ಆಯ್ತು ಈಗ ಬಾಡಿಗೆ ದರವೂ ಏರಿಕೆ!
ಮೈಸೂರಿನಲ್ಲಿ ಯುವತಿ ಜತೆ ರ್ಯಾಪಿಡೋ ಚಾಲಕ ಅವಾಚ್ಯ ಸಂಭಾಷಣೆ
ಮೈಸೂರಿನಲ್ಲಿ ಯುವತಿ ಜತೆ ರ್ಯಾಪಿಡೋ ಚಾಲಕ ಅವಾಚ್ಯ ಸಂಭಾಷಣೆ
ಸ್ಟಿಂಗ್ ಪ್ರಕರಣ: ವಿಡಿಯೋ ಮಾಡಿದ್ದೇ ಗೊತ್ತಿಲ್ಲವೆಂದ ಕೃಪಾ ಆಳ್ವ!
ಸ್ಟಿಂಗ್ ಪ್ರಕರಣ: ವಿಡಿಯೋ ಮಾಡಿದ್ದೇ ಗೊತ್ತಿಲ್ಲವೆಂದ ಕೃಪಾ ಆಳ್ವ!
ದಾವಣಗೆರೆಯ ಸೂಳೆಕರೆಗೆ ಅಪರೂಪದ ಅತಿಥಿ ಭೇಟಿ! ನೀರುನಾಯಿಗಳು ಪ್ರತ್ಯಕ್ಷ
ದಾವಣಗೆರೆಯ ಸೂಳೆಕರೆಗೆ ಅಪರೂಪದ ಅತಿಥಿ ಭೇಟಿ! ನೀರುನಾಯಿಗಳು ಪ್ರತ್ಯಕ್ಷ