AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ ನೂತನ ಮುಖ್ಯಸ್ಥರಾಗಿ ಪ್ರದೀಪ್ ಸಿಂಗ್ ಖರೋಲಾ ನೇಮಕ

ನೀಟ್, ನೆಟ್ ಪರೀಕ್ಷೆಗಳಲ್ಲಿ ಅಕ್ರಮ ನಡೆದಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ಮುಖ್ಯಸ್ಥರಾಗಿದ್ದ ಸುಬೋಧ್ ಕುಮಾರ್ ಸಿಂಗ್ ಅವರನ್ನು ವಜಾಗೊಳಿಸಲಾಗಿದೆ. ಅವರ ಸ್ಥಾನಕ್ಕೆ ಪ್ರದೀಪ್ ಸಿಂಗ್ ಖರೋಲಾ ಅವರನ್ನು ನೇಮಕ ಮಾಡಲಾಗಿದೆ.

ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ ನೂತನ ಮುಖ್ಯಸ್ಥರಾಗಿ ಪ್ರದೀಪ್ ಸಿಂಗ್ ಖರೋಲಾ ನೇಮಕ
ಪ್ರದೀಪ್ ಸಿಂಗ್ ಖರೋಲಾ
ಸುಷ್ಮಾ ಚಕ್ರೆ
|

Updated on: Jun 22, 2024 | 10:50 PM

Share

ನವದೆಹಲಿ: ದೇಶದಲ್ಲಿ ನೀಟ್ (NEET), ನೆಟ್ (NET) ಪರೀಕ್ಷೆಗಳ ವಿರುದ್ಧ ಭಾರೀ ಪ್ರತಿಭಟನೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಈಗಾಗಲೇ ನಾಳೆ (ಭಾನುವಾರ) ನಡೆಯಬೇಕಿದ್ದ ನೀಟ್-ಪಿಜಿ ಪರೀಕ್ಷೆಯನ್ನು (NEET-PG Exam) ಮುಂದೂಡಲಾಗಿದೆ. ಇದರ ನಡುವೆ ಎನ್​ಟಿಎ (ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ) ಮುಖ್ಯಸ್ಥ ಸುಬೋಧ್ ಕುಮಾರ್ (Subodh Kumar Singh) ಅವರನ್ನು ವಜಾಗೊಳಿಸಿ ಅವರ ಸ್ಥಾನಕ್ಕೆ ಹಿರಿಯ ಐಎಎಸ್ ಅಧಿಕಾರಿ ಪ್ರದೀಪ್ ಸಿಂಗ್ ಖರೋಲಾ (Pradeep Singh Kharola) ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

1985ರ ಬ್ಯಾಚ್ ಭಾರತೀಯ ಆಡಳಿತ ಸೇವೆಗಳ (IAS) ಅಧಿಕಾರಿ ಪ್ರದೀಪ್ ಸಿಂಗ್ ಖರೋಲಾ ಅವರನ್ನು ಹೊಸ ಎನ್​ಟಿಎ ಮಹಾನಿರ್ದೇಶಕರಾಗಿ ನೇಮಿಸಲಾಗಿದೆ. ಪರೀಕ್ಷೆಗಳ ಪಾರದರ್ಶಕ, ಸುಗಮ ಮತ್ತು ನ್ಯಾಯೋಚಿತ ನಡವಳಿಕೆಯನ್ನು ಖಚಿತಪಡಿಸಿಕೊಳ್ಳಲು ಇಸ್ರೋ ಮಾಜಿ ಅಧ್ಯಕ್ಷ ಕೆ. ರಾಧಾಕೃಷ್ಣನ್ ನೇತೃತ್ವದ ಉನ್ನತ ಮಟ್ಟದ ಸಮಿತಿಯನ್ನು ರಚಿಸುವುದಾಗಿ ಘೋಷಿಸಿದ ಕೆಲವೇ ಗಂಟೆಗಳ ನಂತರ ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಂಡಿದೆ.

ಇದನ್ನೂ ಓದಿ: NEET-PG Exam: ನೀಟ್-ಪಿಜಿ ಪರೀಕ್ಷೆಯಲ್ಲಿ ಅಕ್ರಮ; ಭಾನುವಾರ ನಡೆಯಬೇಕಿದ್ದ ಎಕ್ಸಾಂ ಮುಂದೂಡಿಕೆ

ಎನ್‌ಟಿಎ ನಡೆಸುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಗಳ ಸುತ್ತಲಿನ ವಿವಾದಗಳ ಮೇಲೆ ನರೇಂದ್ರ ಮೋದಿ ಸರ್ಕಾರವು ಟೀಕೆಗೆ ಒಳಗಾಗಿದೆ. ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್‌ನಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಆಪಾದಿತ ನೀಟ್ ಪೇಪರ್ ಸೋರಿಕೆಯನ್ನು ಬಿಹಾರ ಪೊಲೀಸರು ತನಿಖೆ ನಡೆಸುತ್ತಿದ್ದು, ಡಾರ್ಕ್‌ನೆಟ್‌ನಲ್ಲಿ ಪೇಪರ್ ಸೋರಿಕೆಯಾಗಿದೆ ಎಂದು ಕೇಂದ್ರವು ಯುಜಿಸಿ-ನೆಟ್, ನೀಟ್ ಪರೀಕ್ಷೆಯನ್ನು ರದ್ದುಗೊಳಿಸಿದೆ.

ಶುಕ್ರವಾರ, ಎನ್‌ಟಿಎ ಜೂನಿಯರ್ ರಿಸರ್ಚ್ ಫೆಲೋಶಿಪ್ ಮತ್ತು ವಿಜ್ಞಾನ ಕೋರ್ಸ್‌ಗಳಲ್ಲಿ ಪಿಎಚ್‌ಡಿ ಪ್ರವೇಶಕ್ಕಾಗಿ ನಡೆಸಲಾಗುವ ಸಿಎಸ್‌ಐಆರ್ ಯುಜಿಸಿ-ನೆಟ್ ಪರೀಕ್ಷೆಯನ್ನು ಮುಂದೂಡಿತ್ತು. ಇಂದು ಭಾನುವಾರ ನಡೆಯಬೇಕಿದ್ದ ನೀಟ್-ಪಿಜಿ ಪರೀಕ್ಷೆಯನ್ನು ಕೂಡ ಮುಂದೂಡಿದೆ. ಶೀಘ್ರದಲ್ಲೇ ಹೊಸ ದಿನಾಂಕವನ್ನು ಘೊಷಿಸುವುದಾಗಿ ಆರೋಗ್ಯ ಸಚಿವಾಲಯ ತಿಳಿಸಿದೆ.

ಇದನ್ನೂ ಓದಿ: ನೀಟ್, ನೆಟ್​ ಅಕ್ರಮ; ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ಮುಖ್ಯಸ್ಥ ಸುಬೋಧ್ ಕುಮಾರ್ ವಜಾ

“ಕೆಲವು ಸ್ಪರ್ಧಾತ್ಮಕ ಪರೀಕ್ಷೆಗಳ ಸಮಗ್ರತೆಯ ಬಗ್ಗೆ ಇತ್ತೀಚಿನ ಆರೋಪಗಳ ಘಟನೆಗಳನ್ನು ಪರಿಗಣಿಸಿ, ಆರೋಗ್ಯ ಸಚಿವಾಲಯವು ವೈದ್ಯಕೀಯ ವಿದ್ಯಾರ್ಥಿಗಳ ರಾಷ್ಟ್ರೀಯ ಪರೀಕ್ಷಾ ಮಂಡಳಿಯು ನಡೆಸುವ NEET-PG ಪ್ರವೇಶ ಪರೀಕ್ಷೆಯ ಪ್ರಕ್ರಿಯೆಗಳ ದೃಢತೆಯ ಸಂಪೂರ್ಣ ಮೌಲ್ಯಮಾಪನವನ್ನು ಕೈಗೊಳ್ಳಲು ನಿರ್ಧರಿಸಲಾಗಿದೆ” ಎಂದು ಆರೋಗ್ಯ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ಮುನ್ನೆಚ್ಚರಿಕೆ ಕ್ರಮವಾಗಿ ನಾಳೆ ಅಂದರೆ ಜೂನ್ 23ರಂದು ನಡೆಯಲಿರುವ ನೀಟ್-ಪಿಜಿ ಪ್ರವೇಶ ಪರೀಕ್ಷೆಯನ್ನು ಮುಂದೂಡಲು ನಿರ್ಧರಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ. ಇದರಿಂದ ವಿದ್ಯಾರ್ಥಿಗಳಿಗೆ ಉಂಟಾದ ಅನಾನುಕೂಲತೆಗಾಗಿ ಆರೋಗ್ಯ ಸಚಿವಾಲಯವು ಪ್ರಾಮಾಣಿಕವಾಗಿ ವಿಷಾದಿಸುತ್ತದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮತ್ತು ಪರೀಕ್ಷಾ ಪ್ರಕ್ರಿಯೆಯ ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಪ್ರದೀಪ್ ಸಿಂಗ್ ಖರೋಲಾ ಯಾರು?:

  1. ಕರ್ನಾಟಕ ಕೇಡರ್‌ನ 1985ರ ಬ್ಯಾಚ್ ಐಎಎಸ್ ಅಧಿಕಾರಿ ಪ್ರದೀಪ್ ಸಿಂಗ್ ಖರೋಲಾ ಅವರು ನವೆಂಬರ್ 2017ರಲ್ಲಿ ಏರ್ ಇಂಡಿಯಾದ ಮುಖ್ಯಸ್ಥರಾಗಿ ನೇಮಕಗೊಂಡರು.
  2. ಖರೋಲಾ ಅವರ ಅಧಿಕಾರಾವಧಿಯಲ್ಲಿ, ಏರ್ ಇಂಡಿಯಾವನ್ನು ಖಾಸಗೀಕರಣಗೊಳಿಸುವ ತನ್ನ ಮೊದಲ ಪ್ರಯತ್ನದಲ್ಲಿ ಸರ್ಕಾರ ವಿಫಲವಾಗಿತ್ತು.
  3. 2019ರಲ್ಲಿ ಖರೋಲಾ ಅವರನ್ನು ನೂತನ ನಾಗರಿಕ ವಿಮಾನಯಾನ ಕಾರ್ಯದರ್ಶಿಯಾಗಿ ನೇಮಿಸಲಾಯಿತು.
  4. 2022ರಿಂದ ಪ್ರದೀಪ್ ಸಿಂಗ್ ಖರೋಲಾ ಅವರು ಇಂಡಿಯಾ ಟ್ರೇಡ್ ಪ್ರಮೋಷನ್ ಆರ್ಗನೈಸೇಶನ್ (ITPO) ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
  5. ನಿಯಮಿತ ಪದಾಧಿಕಾರಿಯನ್ನು ನೇಮಿಸುವವರೆಗೆ ಪ್ರದೀಪ್ ಖರೋಲಾ ಅವರಿಗೆ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ ಹೆಚ್ಚುವರಿ ಉಸ್ತುವಾರಿ ವಹಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸಿನಿಮಾ ಸಾಹಸಕ್ಕೆ ಕೈ ಹಾಕಿದ ‘ಅಮೃತಾಂಜನ್’ ಕಿರುಚಿತ್ರದ ಹುಡುಗರು
ಸಿನಿಮಾ ಸಾಹಸಕ್ಕೆ ಕೈ ಹಾಕಿದ ‘ಅಮೃತಾಂಜನ್’ ಕಿರುಚಿತ್ರದ ಹುಡುಗರು
ಬಾನು ಮುಸ್ತಾಕ್ ಮನೆಯಲ್ಲಿ ಕುರಾನ್ ಜತೆ ಭಗವದ್ಗೀತೆ
ಬಾನು ಮುಸ್ತಾಕ್ ಮನೆಯಲ್ಲಿ ಕುರಾನ್ ಜತೆ ಭಗವದ್ಗೀತೆ
ದರ್ಶನ್ ನೋವು ನೋಡಿ ಖುಷಿಪಡುವ ಕೆಲವರು ಇದ್ದಾರೆ: ನಿರ್ದೇಶಕ ಪ್ರೇಮ್
ದರ್ಶನ್ ನೋವು ನೋಡಿ ಖುಷಿಪಡುವ ಕೆಲವರು ಇದ್ದಾರೆ: ನಿರ್ದೇಶಕ ಪ್ರೇಮ್
ಮೈಸೂರು ದಸರಾ ಉದ್ಘಾಟನೆ: ಫಲತಾಂಬೂಲ ನೀಡಿ ಬಾನು ಮುಸ್ತಾಕ್​ಗೆ ಆಹ್ವಾನ
ಮೈಸೂರು ದಸರಾ ಉದ್ಘಾಟನೆ: ಫಲತಾಂಬೂಲ ನೀಡಿ ಬಾನು ಮುಸ್ತಾಕ್​ಗೆ ಆಹ್ವಾನ
ದರ್ಶನ್ ಅವರನ್ನು ಭೇಟಿ ಮಾಡಿದ್ದೆ, ನೋವಿನಿಂದ ನುಡಿದ ಪ್ರೇಮ್
ದರ್ಶನ್ ಅವರನ್ನು ಭೇಟಿ ಮಾಡಿದ್ದೆ, ನೋವಿನಿಂದ ನುಡಿದ ಪ್ರೇಮ್
ಕೇದಾರನಾಥ- ಸೋನ್‌ಪ್ರಯಾಗ ಮಾರ್ಗದಲ್ಲಿ ಭೂಕುಸಿತ; ಹಲವಾರು ವಾಹನಗಳಿಗೆ ಹಾನಿ
ಕೇದಾರನಾಥ- ಸೋನ್‌ಪ್ರಯಾಗ ಮಾರ್ಗದಲ್ಲಿ ಭೂಕುಸಿತ; ಹಲವಾರು ವಾಹನಗಳಿಗೆ ಹಾನಿ
ರಾಧಿಕಾ ಕುಮಾರಸ್ವಾಮಿ ಜತೆಗಿನ ಹಣಕಾಸಿನ ವ್ಯವಹಾರ ಬಗ್ಗೆ ಜಮೀರ್ ಸ್ಪಷ್ಟನೆ
ರಾಧಿಕಾ ಕುಮಾರಸ್ವಾಮಿ ಜತೆಗಿನ ಹಣಕಾಸಿನ ವ್ಯವಹಾರ ಬಗ್ಗೆ ಜಮೀರ್ ಸ್ಪಷ್ಟನೆ
ಜಮೀರ್ ಅಹಮ್ಮದ್​​ ಜೊತೆಗಿನ ಹಣಕಾಸಿನ ವ್ಯವಹಾರ ಬಿಚ್ಚಿಟ್ಟ ಕೆಜಿಎಫ್ ಬಾಬು
ಜಮೀರ್ ಅಹಮ್ಮದ್​​ ಜೊತೆಗಿನ ಹಣಕಾಸಿನ ವ್ಯವಹಾರ ಬಿಚ್ಚಿಟ್ಟ ಕೆಜಿಎಫ್ ಬಾಬು
ಬಿಜೆಪಿ ಸೇರ್ಪಡೆ ಬಗ್ಗೆ ಮಾಜಿ ಸಚಿವ ಕೆಎನ್ ರಾಜಣ್ಣ ಹೇಳಿದ್ದಿಷ್ಟು
ಬಿಜೆಪಿ ಸೇರ್ಪಡೆ ಬಗ್ಗೆ ಮಾಜಿ ಸಚಿವ ಕೆಎನ್ ರಾಜಣ್ಣ ಹೇಳಿದ್ದಿಷ್ಟು
ವಿಷ್ಣು ಸ್ಮಾರಕ: ಸಿಎಂ ಭೇಟಿ ಬಳಿಕ ಹಿರಿಯ ನಟಿ ಭಾರತಿ ಹೇಳಿದ್ದು ಹೀಗೆ
ವಿಷ್ಣು ಸ್ಮಾರಕ: ಸಿಎಂ ಭೇಟಿ ಬಳಿಕ ಹಿರಿಯ ನಟಿ ಭಾರತಿ ಹೇಳಿದ್ದು ಹೀಗೆ