ಮೋದಿ ಸರ್ಕಾರದ ಡಿಜಿಟಲ್ ಯೋಜನೆ 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುತ್ತದೆ: ಅಭಯ್ ಭೂತಾಡ

|

Updated on: Feb 25, 2024 | 7:18 PM

What India Thinks Today: ಇಂದು ದೆಹಲಿಯ ಅಶೋಕ್ ಹೋಟೆಲ್‌ನಲ್ಲಿ ವಾಟ್ ಇಂಡಿಯಾ ಟುಡೇ ಥಿಂಕ್ಸ್' ಜಾಗತಿಕ ಶೃಂಗಸಭೆಯನ್ನು ಪ್ರಾರಂಭವಾಗಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಟಿವಿ9 ನೆಟ್‌ವರ್ಕ್‌ನ ಎಂಡಿ ಮತ್ತು ಸಿಇಒ ಬರುನ್ ದಾಸ್ ಎಲ್ಲರನ್ನು ಸ್ವಾಗತಿಸಿದರು. ಎರಡು ದಿನಗಳ ಕಾಲ ಭಾರತ ಮತ್ತು ವಿದೇಶದ ಅನೇಕ ಗಣ್ಯ ವ್ಯಕ್ತಿಗಳು ಭಾರತದ ಭವಿಷ್ಯದ ಬಗ್ಗೆ ಮತ್ತು ಪ್ರಪಂಚದಲ್ಲಿ ಬೆಳೆಯುತ್ತಿರುವ ಸಾಫ್ಟ್ ಪವರ್ ಖ್ಯಾತಿಯ ಬಗ್ಗೆ ಮಾತನಾಡಲಿದ್ದಾರೆ ಎಂದು ಹೇಳಿದರು.

ಮೋದಿ ಸರ್ಕಾರದ ಡಿಜಿಟಲ್ ಯೋಜನೆ 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುತ್ತದೆ: ಅಭಯ್ ಭೂತಾಡ
Follow us on

ಪ್ರಧಾನಿ ನರೇಂದ್ರ ಮೋದಿ (Narendra Modi) ಸರ್ಕಾರದ ಡಿಜಿಟಲ್ ಯೋಜನೆ 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವ ಗುರಿಯನ್ನು ಸಾಧಿಸಲು ಸಹಾಯ ಮಾಡುತ್ತದೆ ಎಂದು ಪೂನಾವಾಲಾ ಫಿನ್‌ಕಾರ್ಪ್ ಎಂಡಿ ಅಭಯ್ ಭೂತಾಡ ಹೇಳುತ್ತಾರೆ. ಸರ್ಕಾರದ ಡಿಜಿಟಲ್ ಪಾವತಿ ಈಗ ದೇಶದ ಸಾಮಾನ್ಯ ಜನರಿಗೂ ತಲುಪಿದೆ. ಅವರು ಸಹ ರಾಷ್ಟ್ರ ನಿರ್ಮಾಣದಲ್ಲಿ ತಮ್ಮ ಪಾತ್ರವನ್ನು ವಹಿಸಲು ಸಮರ್ಥರಾಗಿದ್ದಾರೆ. ಇದು ಮೋದಿ ಸರ್ಕಾರದ ಏಳಿಗೆಯ ಗುರಿಯನ್ನು ಸಾಧಿಸಲು ಸಹಾಯ ಮಾಡುತ್ತದೆ. ದೇಶದ ನಂಬರ್-1 ನ್ಯೂಸ್ ನೆಟ್‌ವರ್ಕ್ ಟಿವಿ9ನ ‘ವಾಟ್ ಇಂಡಿಯಾ ಟುಡೇ ಥಿಂಕ್ಸ್’ ಜಾಗತಿಕ ಶೃಂಗಸಭೆಯ ಉದ್ಘಾಟನಾ ಅಧಿವೇಶನವನ್ನು ಉದ್ದೇಶಿಸಿ ಅಭಯ ಭೂತಾಡ  ಮಾತನಾಡುತ್ತಿದ್ದರು.

ಇಂದು ದೆಹಲಿಯ ಅಶೋಕ್ ಹೋಟೆಲ್‌ನಲ್ಲಿ ವಾಟ್ ಇಂಡಿಯಾ ಟುಡೇ ಥಿಂಕ್ಸ್’ (What India Thinks Today) ಜಾಗತಿಕ ಶೃಂಗಸಭೆ ಪ್ರಾರಂಭವಾಗಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಟಿವಿ9 ನೆಟ್‌ವರ್ಕ್‌ನ ಎಂಡಿ ಮತ್ತು ಸಿಇಒ ಬರುನ್ ದಾಸ್ ಎಲ್ಲರನ್ನು ಸ್ವಾಗತಿಸಿದರು. ಎರಡು ದಿನಗಳ ಕಾಲ ಭಾರತ ಮತ್ತು ವಿದೇಶದ ಅನೇಕ ಗಣ್ಯ ವ್ಯಕ್ತಿಗಳು ಭಾರತದ ಭವಿಷ್ಯದ ಬಗ್ಗೆ ಮತ್ತು ಪ್ರಪಂಚದಲ್ಲಿ ಬೆಳೆಯುತ್ತಿರುವ ಸಾಫ್ಟ್ ಪವರ್ ಖ್ಯಾತಿಯ ಬಗ್ಗೆ ಮಾತನಾಡಲಿದ್ದಾರೆ ಎಂದು ಹೇಳಿದರು.

ಪೂನಾವಾಲಾ ಫಿನ್‌ಕಾರ್ಪ್ ಎಂಡಿ ಅಭಯ್ ಭೂತಾಡ ಅವರು ಮಾತನಾಡುತ್ತ ಭಾರತದಲ್ಲಿ ಎಷ್ಟರ ಮಟ್ಟಿಗೆ ಡಿಜಿಟಿಲ್​​ ಬದಲಾವಣೆಗಳು ನಡೆದಿದೆ ಎಂಬ ಬಗ್ಗೆ ಒಂದು ಉದಾಹರಣೆ ತಿಳಿಸಿ ಹೇಳಿದ್ದಾರೆ. ಲಾತೂರ್‌ನಂತಹ ಸಣ್ಣ ಪಟ್ಟಣದಲ್ಲಿಯೂ ಈಗ ಬದಲಾವಣೆ ನಡೆಯುತ್ತಿದೆ. ಇದು ನನ್ನ ನಗರ ಮತ್ತು ಇಲ್ಲಿ ಬದಲಾಗುತ್ತಿರುವ ವಿಷಯಗಳನ್ನು ನಾನು ನೋಡಿದ್ದೇನೆ. ದೇಶದಲ್ಲಿ ನಡೆಯುತ್ತಿರುವ ಡಿಜಿಟಲ್ ಕ್ರಾಂತಿಯು ಸಣ್ಣ ಪಟ್ಟಣಗಳಲ್ಲಿ ವಾಸಿಸುವ ಜನರಿಗೆ ಅನೇಕ ಅಡೆತಡೆಗಳನ್ನು ನಿವಾರಿಸಿದೆ. ಇದು ನಮ್ಮ ರಾಷ್ಟ್ರ ನಿರ್ಮಾಣದ ಮಹತ್ವದ ಬದಲಾವಣೆಯನ್ನು ತರಲಿದೆ ಎಂದು ಹೇಳಿದ್ದಾರೆ.

ದೇಶದಲ್ಲಿ ‘ಡಿಜಿಟಲ್ ವ್ಯವಹಾರ’ಗಳ ಹೊಸ ಮಾರುಕಟ್ಟೆ ಸೃಷ್ಟಿಯಾಗಿದೆ:

ಪ್ರಸ್ತುತ ಭಾರತದಲ್ಲಿ ಡಿಜಿಟಲ್ ಕ್ರಾಂತಿ ನಡೆಯುತ್ತಿದೆ. ಇದು ದೇಶದಲ್ಲಿ ಡಿಜಿಟಲ್ ಮತ್ತು ಟೆಕ್ ಬದಲಾವಣೆಗಳಿಗೆ ಹೊಸ ಮಾರುಕಟ್ಟೆಯನ್ನು ಸೃಷ್ಟಿಸಿದೆ. ಭಾರತ ಸರ್ಕಾರದ ಪ್ರಧಾನ ಮಂತ್ರಿ ಜನ್ ಧನ್ ಖಾತೆ ಯೋಜನೆ, UPI ಮತ್ತು BHIM ನಂತಹ ತಂತ್ರಗಳು ಜನರಿಗೆ ಹೆಚ್ಚು ಸುಲಭವಾಗಿ ಹಣ ಪಾವತಿ ಮಾಡುವಂತೆ ಮಾಡಿದೆ. ಅಷ್ಟೇ ಅಲ್ಲ, ದೇಶದಲ್ಲಿ ಡಿಜಿಟಲ್ ಪಾವತಿಯ ನೆಲೆಯೂ ಹೆಚ್ಚಿದೆ. ಸಾರ್ವಜನಿಕ ಮೂಲಸೌಕರ್ಯಗಳ ಸೃಷ್ಟಿ, ಇ-ಕಾಮರ್ಸ್ ವಿಸ್ತರಣೆ, ಜನರಲ್ಲಿ ಫೋನ್ ಬಳಕೆ ಇಂತಹ ಮಹತ್ವದ ಬದಲಾವಣೆಯನ್ನು ತಂದಿದೆ.

ಇದನ್ನೂ ಓದಿ:  ಕ್ರಿಕೆಟ್ ಹೊರತಾದ ಕ್ರೀಡೆಗಳಲ್ಲೂ ಮಿಂಚುತ್ತಿರುವ ಭಾರತೀಯರು: ಅನುರಾಗ್ ಠಾಕೂರ್

ಇದರ ಜತೆಗೆ ಡಿಜಿಟಲ್ ಸಶಕ್ತ ಸಮಾಜ ಮತ್ತು ಜ್ಞಾನ ಆರ್ಥಿಕವಾಗಿ ಪರಿವರ್ತಿಸಿದೆ. ಹಾಗೂ ಉದ್ಯೋಗ ಸೃಷ್ಟಿ ಮತ್ತು ಆರ್ಥಿಕ ಬೆಳವಣಿಗೆಗೆ ಹೆಚ್ಚುತ್ತಿದೆ ಎಂದು ಹೇಳಿದರು. ಇನ್ನು ಅನುಕೂಲಕರ ವ್ಯಾಪಾರ ವಾತಾವರಣವನ್ನು ಒದಗಿಸುವುದರ ಜತೆಗೆ ವ್ಯಕ್ತಿಗಳ ಸುರಕ್ಷತೆ ಮತ್ತು ಭದ್ರತೆ ಬಹಳ ಮುಖ್ಯ. ದೃಢವಾದ ಕಾನೂನು ಮತ್ತು ಸುವ್ಯವಸ್ಥೆ ಇಲ್ಲದೆ ಯಾವುದೇ ರಾಷ್ಟ್ರವು ಪ್ರಗತಿ ಸಾಧಿಸಲು ಸಾಧ್ಯವಿಲ್ಲ. ಭದ್ರತೆ, ಶಾಂತಿ ಮತ್ತು ಸೌಹಾರ್ದತೆಯ ನಿರ್ವಹಣೆಗಾಗಿ ರಾಷ್ಟ್ರ ಮತ್ತು ಅದರ ನಾಗರಿಕರನ್ನು ರಕ್ಷಿಸಲು ದೇಶದ ಕೇಂದ್ರ ಸಚಿವ ಅಮಿತ್ ಶಾ ಜಿ ಅವರ ದಿಟ್ಟ ಹೆಜ್ಜೆಗಳನ್ನು ಇಟ್ಟಿದ್ದಾರೆ ಎಂದರು.

ಇನ್ನಷ್ಟು ಡಬ್ಲ್ಯುಐಟಿಟಿ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:26 pm, Sun, 25 February 24