ಲಕ್ನೋ: ಉತ್ತರ ಪ್ರದೇಶದ ಗೋರಖ್‌ಪುರಕ್ಕೆ 2ನೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಪ್ರಧಾನಿ ಮೋದಿ ಅವರು ಇಂದು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದ್ದಾರೆ. ಇದು ಜೋಧ್‌ಪುರನಿಂದ ಅಹಮದಾಬಾದ್‌ಗೆ ಮತ್ತು ಗೋರಖ್ಪುರ್ನಿಂದ ಲಕ್ನೋಗೆ ರೈಲು ಸಂಚರಿಸಲಿದೆ. ಇದರ ಜತೆಗೆ ಪ್ರಧಾನಿ ಮೋದಿ ಅವರು ಗೋರಖ್‌ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ₹ 498 ಕೋಟಿ ವೆಚ್ಚದ ಗೋರಖ್‌ಪುರ ರೈಲು ನಿಲ್ದಾಣದ ಪುನರಾಭಿವೃದ್ಧಿ ಯೋಜನೆಗೆ ಶಂಕುಸ್ಥಾಪನೆ ಮಾಡಿದ್ದಾರೆ. ಗೋರಖ್‌ಪುರ-ಲಕ್ನೋ ವಂದೇ ಭಾರತ್ ಎಕ್ಸ್‌ಪ್ರೆಸ್ ಅಯೋಧ್ಯೆಯ ಮೂಲಕ ಹಾದುಹೋಗುತ್ತದೆ, ಇದು ಉತ್ತರ ಪ್ರದೇಶದ ಪ್ರವಾಸೋದ್ಯಮಕ್ಕೆ ಪೂರಕವಾಗಿದೆ, ಇದರ ಜತೆಗೆ ವಂದೇ ಭಾರತ್ ಎಕ್ಸ್‌ಪ್ರೆಸ್ ಜೋಧ್‌ಪುರ-ಸಾಬರಮತಿ, ಜೋಧ್‌ಪುರ-ಅಬು ರಸ್ತೆ ಮತ್ತು ಅಹಮದಾಬಾದ್‌ಗೆ ಸಂಪರ್ಕ ಸಾಧಿಸಲಿದೆ
ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಅಹಮದಾಬಾದ್‌ನಿಂದ (ಸಾಬರಮತಿ) ಸಂಜೆ 4:45 ಕ್ಕೆ ಹೊರಟು ಅದೇ ದಿನ ರಾತ್ರಿ 10:55 ಕ್ಕೆ ಜೋಧ್‌ಪುರ ತಲುಪಲಿದೆ. ಮತ್ತೆ ರೈಲು ಜೋಧಪುರದಿಂದ ಬೆಳಿಗ್ಗೆ 05:55 ಕ್ಕೆ ಹೊರಟು ಅಹಮದಾಬಾದ್‌ಗೆ (ಸಾಬರಮತಿ) ಅದೇ ದಿನ ಮಧ್ಯಾಹ್ನ 12:05ಕ್ಕೆ ತಲುಪುತ್ತದೆ.
#WATCH | PM Modi flags off Vande Bharat Express in UP’s Gorakhpur pic.twitter.com/RtUIX21vMK
— ANI (@ANI) July 7, 2023
ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಫೆಬ್ರವರಿ 15, 2019 ರಂದು ಪ್ರಧಾನಿ ಮೋದಿ ಅವರು ನವದೆಹಲಿ ಮತ್ತು ವಾರಣಾಸಿ ನಡುವೆ ಚಾಲನೆ ನೀಡಿದರು. ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ (ICF) ನಲ್ಲಿ ತಯಾರಿಸಲಾದ ಈ ರೈಲು ‘ಮೇಕ್-ಇನ್-ಇಂಡಿಯಾ’ ಪ್ರಮುಖ ಭಾಗವಾಗಿದೆ. ಇದೀಗ ವಂದೇ ಭಾರತ್ ಎಕ್ಸ್‌ಪ್ರೆಸ್ ಅನೇಕ ರಾಜ್ಯಗಳಲ್ಲಿ ಸಂಚರಿಸುತ್ತಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:15 pm, Fri, 7 July 23