ಮೋದಿಗೆ ಮೋದಿಯೇ ಸರಿಸಾಟಿ: ಭಾರತದ ಪ್ರಧಾನಿಯನ್ನು ಹೊಗಳಿದ ಅಂತಾರಾಷ್ಟ್ರೀಯ ಘಟಾನುಗಟಿ ನಾಯಕರು
ಪ್ರಧಾನಿ ನರೇಂದ್ರ ಮೋದಿ ವಿಶ್ವ ಕಂಡ ಶ್ರೇಷ್ಠ ನಾಯಕ. ವಿಶ್ವ ನಾಯಕರು ಮತ್ತು ಅಂತಾರಾಷ್ಟ್ರೀಯ ಖ್ಯಾತಿ ಹೊಂದಿರುವ ವ್ಯಕ್ತಿಗಳು ಪ್ರಧಾನಿ ಮೋದಿ ನಾಯಕತ್ವಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ (PM Narendra Modi)ವಿಶ್ವ ಕಂಡ ಶ್ರೇಷ್ಠ ನಾಯಕ. ವಿಶ್ವದ ಜನಪ್ರಿಯ ನಾಯಕ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ. ಇತ್ತೀಚೆಗೆ ಅಮೆರಿಕ ಮೂಲದ ಸಲಹಾ ಸಂಸ್ಥೆ ಮಾರ್ನಿಂಗ್ ಕನ್ಸಲ್ಟ್ ನಡೆಸಿದ ಸಮೀಕ್ಷಯಲ್ಲಿ ಪ್ರಕಾರ ಪ್ರಧಾನಿ ಮೋದಿ ಅವರು ಶೇ 78 ರಷ್ಟು ಅನುಮೋದನೆಯೊಂದಿಗೆ ವಿಶ್ವದ ಅತ್ಯಂತ ಜನಪ್ರಿಯ ನಾಯಕ ಎಂದು ಹೊರಹೊಮ್ಮಿದ್ದಾರೆ. ಸದ್ಯ ಪ್ರಧಾನಿ ಮೋದಿಯವರ ನಾಯಕತ್ವಕ್ಕೆ ಅನೇಕರು ಮಾರು ಹೋಗಿದ್ದಾರೆ ಎಂದರೆ ತಪ್ಪಾಗಲಾರದು. ಅಂತೆಯೇ ಅನೇಕ ವಿಶ್ವ ನಾಯಕರು ಮತ್ತು ಅಂತಾರಾಷ್ಟ್ರೀಯ ಖ್ಯಾತಿ ಹೊಂದಿರುವ ವ್ಯಕ್ತಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸರಿಸಾಟಿಯಿಲ್ಲದ ಪ್ರಧಾನಿ ಮೋದಿ ನಾಯಕತ್ವವನ್ನು ಶ್ಲಾಘಿಸಿದ್ದಾರೆ. ಜೊತೆಗೆ ಕಳೆದ ಎರಡು ವಾರಗಳಲ್ಲಿ, ಅನೇಕ ಅಂತಾರಾಷ್ಟ್ರೀಯ ಸಂಸ್ಥೆಗಳು, ಹೂಡಿಕೆದಾರರು ಮತ್ತು ಪ್ರಸಿದ್ಧ ವ್ಯಕ್ತಿಗಳು ಭಾರತ ಮತ್ತು ಪ್ರಧಾನಿ ಮೋದಿಯವರನ್ನು ಬಣ್ಣಿಸಿದ್ದಾರೆ. ಆ ಕುರಿತು ಒಂದು ವರದಿ ಇಲ್ಲಿದೆ.
ಪ್ರಧಾನಿ ಮೋದಿ ಕೊಂಡಾಡಿದ ಬ್ರಿಟನ್ ಹಿರಿಯ ಸಂಸದ ನಿಕೋಲಸ್ ಸ್ಟರ್ನ್
ಪ್ರಧಾನಿ ಮೋದಿ ಅವರು ಬೆಳವಣಿಗೆ ಮತ್ತು ಅಭಿವೃದ್ಧಿಯೂ ಸಂಪೂರ್ಣ ಹೊಸತನಕ್ಕೆ ನಾಂದಿ ಹಾಡಿದೆ. ನವೆಂಬರ್ 2021ರ ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಕುರಿತ ಸಮ್ಮೇಳನವಾದ ಕಾಪ್-26 ನಲ್ಲಿ ಅವರ ಭಾಷಣವನ್ನು ನಾನು ಬಹಳ ಗಮನವಿಟ್ಟು ಕೇಳಿದ್ದೇನೆ. ಸ್ಟರ್ನ್ ವಿಶ್ವ ಬ್ಯಾಂಕ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಣಷ ಮಾಡಿದ್ದು, ಸುಸ್ಥಿರ ಸ್ಥಿತಿಸ್ಥಾಪಕತ್ವ ಮತ್ತು ಅಂತರ್ಗತ ಬೆಳವಣಿಗೆ ಹೇಗಿರುತ್ತದೆ ಎಂಬುದನ್ನು ತಿಳಿಸಿದ್ದರು ಎಂದು ಬ್ರಿಟನ್ ಹಿರಿಯ ಸಂಸದ ಹಾಗೂ ಖ್ಯಾತ ಆರ್ಥಿಕ ತಜ್ಞ ಲಾರ್ಟ್ ನಿಕೋಲಸ್ ಸ್ಟರ್ನ್ ಹೇಳಿದ್ದಾರೆ. ಪ್ರಧಾನಿ ಮೋದಿಯವರ ಸ್ಪಷ್ಟತೆ ಮತ್ತು ಬದ್ಧತೆ ನಿರ್ಣಾಯಕವಾಗಿದ್ದು, ಇದು ಜಿ 20 ನಾಯಕತ್ವದಲ್ಲೂ ಪ್ರತಿಧ್ವನಿಸಿದೆ ಎಂದು ಕೊಂಡಾಡಿದ್ದಾರೆ.
ಪ್ರಧಾನಿ ಮೋದಿ ಸ್ನೇಹಿತ ಎಂದ ಉಗಾಂಡಾ ಹೈ ಕಮಿಷನರ್
ಪ್ರಧಾನಿ ನರೇಂದ್ರ ಮೋದಿ ಅವರನ್ನು ನಾವು ಸ್ನೇಹಿತರಂತೆ ಕಾಣುತ್ತೇವೆ ಎಂದು ಉಗಾಂಡಾ ಹೈ ಕಮಿಷನರ್ ಜಾಯ್ಸ್ ಕಾಕುರಾಮತ್ಸಿ ಕಿಕಾಫುಂಡಾ ಹೇಳಿದ್ದಾರೆ. ಕೋವಿಡ್ -19 ಸಮಯದಲ್ಲಿ ನೆರವಾದ ಭಾರತದ ಸಹಾಯವನ್ನು ಎಂದಿಗೂ ನಾವು ಮರೆಯುವುದಿಲ್ಲ ಎಂದು ಭಾರತದ ಕುರಿತಾಗಿ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ. ಪ್ರಧಾನಿ ಮೋದಿ ಮೊದಲು ನಮ್ಮಲಿರುವ ಸಮಸ್ಯೆಗಳನ್ನು ಗುರುತಿಸುತ್ತಾರೆ. ಬಳಿಕ ಆ ಸಮಸ್ಯೆಗಳಿಗೆ ಅವರು ಸ್ಪಂದಿಸುತ್ತಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: PM Modi Popularity: ಪ್ರಧಾನಿ ನರೇಂದ್ರ ಮೋದಿಯನ್ನು ಹೊಗಳಿದ ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಗಿನಾ ರೈಮಂಡೊ
ಐಎಂಎಫ್ ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಲಿನಾ ಜಾರ್ಜಿವಾ ಮಾತನಾಡಿ, ಜಿ -20ರ ಕೆಲಸವನ್ನು ಹೆಚ್ಚು ಮುಖ್ಯವಾದ ವಿಷಯಗಳ ಮೇಲೆ ಕೇಂದ್ರೀಕರಿಸುವಲ್ಲಿ ಭಾರತವು ಅತ್ಯುತ್ತಮ ಕೆಲಸವನ್ನು ಮಾಡುತ್ತಿದೆ. ಅತ್ಯಂತ ಸಂಕೀರ್ಣವಾದ ನೀತಿ ಸವಾಲುಗಳ ಮೂಲಕ ಸಾಗುವುದು, ಸರಿಯಾದ ನೀತಿ ಕ್ರಮಗಳು ಕೈಗೊಳ್ಳುವುದು ಅತ್ಯಂತ ಮುಖ್ಯವಾಗಿದೆ ಎಂದು ಹೇಳಿದ್ದಾರೆ.
ಭಾರತ ವಿಶ್ವಗುರು ಎಂದ ಉಕ್ರೇನ್ ವಿದೇಶಾಂಗ ಸಚಿವೆ
ಪ್ರಧಾನಿ ಮೋದಿಯವರು ತಮ್ಮ 3ಡಿ ನೀತಿಯ ಪ್ರಜಾಪ್ರಭುತ್ವ ಮತ್ತು ಅವರ ಸಂವಾದ ನನ್ನ ಜ್ಞಾನವನ್ನು ಮತ್ತಷ್ಟು ಹೆಚ್ಚಿಸಿದೆ. ಭಾರತ ಜಾಗತಿಕ ಆಟಗಾರ ಎಂದು ನಾನು ಭಾವಿಸುತ್ತೇನೆ. ಭಾರತ ನಿಜವಾಗಿಯೂ ಜಗತ್ತಿನ ವಿಶ್ವಗುರು ಎಂದು ಉಕ್ರೇನ್‌ನ ಉಪ ವಿದೇಶಾಂಗ ಸಚಿವೆ ಎಮಿನ್ ಡಿಜೆಪ್ಪರ್ ಹೇಳಿದ್ದಾರೆ.
ಇದನ್ನೂ ಓದಿ: PM Narendra Modi: ಕಾಶಿಗೆ ಭೇಟಿ ನೀಡಲು 10 ಕಾರಣ ಹೇಳಿದ ಪ್ರಧಾನಿ ನರೇಂದ್ರ ಮೋದಿ
ಭಾರತ ಮಹಿಳಾ ಸಬಲೀಕರಣದಲ್ಲಿ ದಾಪುಗಾಲು ಹಾಕುತ್ತಿದೆ. ವಿಶೇಷವಾಗಿ ಪ್ರಧಾನಿ ಮೋದಿ ಅವರು ಈ ವಿಚಾರವಾಗಿ ಆಳವಾದ ಮತ್ತು ಕಾಳಜಿ ಹೊಂದಿದ್ದಾರೆ ಎಂದು ವಿಶ್ವ ಬ್ಯಾಂಕ್ ಅಧ್ಯಕ್ಷ ಡೇವಿಡ್ ಮಾಲ್ಪಾಸ್ ಹೇಳಿದ್ದಾರೆ.
ಜಾಗತಿಕ ಮಟ್ಟದಲ್ಲಿ ಪ್ರಕಾಶಿಸುತ್ತಿರುವ ಭಾರತ ಆಂಥೋನಿ ಕ್ಯಾಪಿಲನೋ
ಮ್ಯಾರಿಯಟ್ ಇಂಟರ್ನ್ಯಾಷನಲ್ ಸಿಇಒ ಆಂಥೋನಿ ಕ್ಯಾಪಿಲನೋ ಭಾರತದ ಕುರಿತಾಗಿ ಪ್ರತಿಕ್ರಿಯೆ ನೀಡಿದ್ದು, ನಮ್ಮ ಜಾಗತಿಕ ಚೇತರಿಕೆಯಲ್ಲಿ ನಾವು ಹೊಂದಿರುವ ಪ್ರಕಾಶಮಾನವಾದ ಹೊಳಪಿನಲ್ಲಿ ಭಾರತವೂ ಒಂದಾಗಿದೆ. ಪ್ರಧಾನಿ ಮೋದಿ ಅವರು ಭಾರತದಲ್ಲಿ ಆತಿಥ್ಯ ಉದ್ಯಮದ ಮುಂದುವರಿದ ಬೆಳವಣಿಗೆಯ ಮೇಲೆ ಹೆಚ್ಚಿನ ಗಮನಹರಿಸಿದ್ದಾರೆ ಎಂದು ಹೇಳಿದರು.
ಮೋದಿ ವನ್ಯಜೀವಿಗಳ ಮೇಲಿನ ಪ್ರೀತಿಯನ್ನು ಬಣ್ಣಿಸಿದ ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗ
ಪ್ರಧಾನಿ ಮೋದಿ ಅವರ ವನ್ಯಜೀವಿಗಳ ಮೇಲಿನ ಪ್ರೀತಿಯನ್ನು ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್ ಇತ್ತೀಚೆಗೆ ಟ್ವೀಟ್ ಮಾಡುವ ಮೂಲಕ ಶ್ಲಾಘಿಸಿದ್ದರು. ಜೊತೆಗೆ ಇದು ಎಲ್ಲರಿಗೂ ಆದರ್ಶಪ್ರಾಯವಾಗಿದೆ ಎಂದು ಬಣ್ಣಿಸಿದ್ದರು.
ಭಾರತವು ವಿಶ್ವದ ಅತ್ಯಂತ ಶ್ರೇಷ್ಠ ಪ್ರಜಾಪ್ರಭುತ್ವ
ಭಾರತವು ವಿಶ್ವದ ಅತ್ಯಂತ ಶ್ರೇಷ್ಠ ಪ್ರಜಾಪ್ರಭುತ್ವವನ್ನು ಹೊಂದಿದೆ. ಸ್ವಾತಂತ್ರ್ಯ, ಸಹಿಷ್ಣುತೆ ಮತ್ತು ಲಿಂಗ ಸಮಾನತೆಗೆ ಸಂಬಂಧಿಸಿದೆ ಎಂದು ಪೋರ್ಚುಗಲ್‌ನ ಸಂಸದ ಮಿಗುಯೆಲ್ ಕೋಸ್ಟಾ ಮ್ಯಾಟೋಸ್ ಅವರು ಭಾರತವನ್ನು ಹೊಗಳಿದ್ದಾರೆ.
ಭಾರತ ಆರ್ಥಿಕವಾಗಿ ಬಲಿಷ್ಠ
ಭಾರತವು ಮುಂದಿನ 25 ವರ್ಷಗಳಲ್ಲಿ 3.5 ಟ್ರಿಲಿಯನ್ ಡಾಲರ್ ಆರ್ಥಿಕತೆಯಿಂದ 75 ಟ್ರಿಲಿಯನ್ ಡಾಲರ್ ಆರ್ಥಿಕತೆಗೆ ತಲುಪಲಿದೆ. ಇದು ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ದೊಡ್ಡ ಆರ್ಥಿಕತೆಯಾಗಿದೆ ಎಂದು ನಯಾರಾ ಎನರ್ಜಿಯ ಸಿಇಒ ಅಲೋಯಿಸ್ ವಿರಾಗ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:42 pm, Sun, 16 April 23