‘ಮೋದಿ ಎಲ್ಲೂ ಹೋಗಲ್ಲ ಬ್ರೋ’; ಖರ್ಗೆಯ ಲೇವಡಿಗೆ ರ‍್ಯಾಪ್ ಸಾಂಗನ್ನೇ ಸೃಷ್ಟಿಸಿದ ಬಿಜೆಪಿ!

ಮೊನ್ನೆಯಷ್ಟೇ ಪಾಟ್ನಾದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಮೋದಿಯ ಅಪ್ಪನ ಬಗ್ಗೆ ಮಾತನಾಡಿ ರಾಜಕೀಯ ವಿವಾದಕ್ಕೀಡಾಗಿದ್ದರು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಇದೀಗ ಮಲ್ಲಿಕಾರ್ಜುನ ಖರ್ಗೆಯವರನ್ನು ಕೆರಳಿಸಿದ ಆ ವ್ಯಕ್ತಿಯ ಮಾತನ್ನೇ ರ‍್ಯಾಪ್ ಸಾಂಗ್ ಆಗಿ ಪರಿವರ್ತಿಸಿರುವ ಜೆನ್​-ಜಿಗಳು "ಮೋದಿ ಕಹಿ ನಹಿ ಜಾಯೇಗ (ಮೋದಿ ಎಲ್ಲೂ ಹೋಗೋದಿಲ್ಲ)" ಎಂಬ ಹಾಡೊಂದನ್ನು ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಈ ಹಾಡನ್ನು ಬಿಜೆಪಿಯ ನಾಯಕರು, ಕೇಂದ್ರ ಸಚಿವರು, ಮೋದಿ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುವುದರಿಂದ ಈ ವಿಡಿಯೋ ಸಾಂಗ್ ಇದೀಗ ಭಾರೀ ಟ್ರೆಂಡಿಂಗ್​ನಲ್ಲಿದೆ.

ಮೋದಿ ಎಲ್ಲೂ ಹೋಗಲ್ಲ ಬ್ರೋ; ಖರ್ಗೆಯ ಲೇವಡಿಗೆ ರ‍್ಯಾಪ್ ಸಾಂಗನ್ನೇ ಸೃಷ್ಟಿಸಿದ ಬಿಜೆಪಿ!
ಪ್ರಧಾನಿ ಮೋದಿ
Image Credit source: TV9

Updated on: Oct 27, 2026 | 6:51 PM

ನವದೆಹಲಿ, ಅಕ್ಟೋಬರ್ 27: ಭಾನುವಾರ ಬಿಹಾರದ ಪಾಟ್ನಾದಲ್ಲಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸದ್ಯದಲ್ಲೇ ನರೇಂದ್ರ ಮೋದಿ ಅಧಿಕಾರದಿಂದ ಕೆಳಗಿಳಿಯಬೇಕಾಗುತ್ತದೆ ಎಂದು ಹೇಳಿದ್ದರು. ಆಗ ಅಲ್ಲಿದ್ದ ಮೋದಿ ಅಭಿಮಾನಿಯೊಬ್ಬರು ಸಭಾಂಗಣದ ಮಧ್ಯ ನಿಂತು “ಮೋದಿ ಕಹಿ ನಹಿ ಜಾಯೇಗ (ಮೋದಿ ಅಧಿಕಾರದಿಂದ ಕೆಳಗಿಳಿಯೋದಿಲ್ಲ) ” ಎಂದು ಹೇಳಿದ್ದರು. ಇದನ್ನು ಕೇಳಿ ರೊಚ್ಚಿಗೆದ್ದಿದ್ದ ಮಲ್ಲಿಕಾರ್ಜುನ ಖರ್ಗೆ, “ಮೋದಿಯೂ ಅಧಿಕಾರದಿಂದ ಕೆಳಗಿಳಿಯುತ್ತಾರೆ, ಅವರಪ್ಪನೂ ಇಳಿಯುತ್ತಾರೆ” ಎಂದು ಹೇಳಿದ್ದರು. ರಾಜಕೀಯ ಭಾಷಣದ ವೇಳೆ ಪ್ರಧಾನಿ ಮೋದಿಯವರ ದಿವಂಗತ ತಂದೆಯನ್ನು ಎಳೆದುತಂದಿದ್ದಕ್ಕೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು. ಆ ದಿನ ಆ ಮೋದಿ ಅಭಿಮಾನಿ ಹೇಳಿದ್ದ ವಾಕ್ಯವನ್ನೇ ಇದೀಗ ಬಿಜೆಪಿಯ ಜೆನ್​-ಜಿಗಳು ರ‍್ಯಾಪ್ ಸಾಂಗ್ ಆಗಿ ಮಾಡಿದ್ದಾರೆ.

ಮೋದಿ ಕಹಿ ನಹಿ ಜಾಯೇಗ ಎಂಬ ಹಾಡು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ಒಂದೆಡೆ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಅವಹೇಳನಕಾರಿ ಹೇಳಿಕೆಗಳನ್ನು ನೀಡಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ರಾಜಕೀಯ ಉದ್ವಿಗ್ನತೆ ಹೆಚ್ಚಾಗಿದೆ. ಪಾಟ್ನಾ, ದೆಹಲಿ ಮತ್ತು ಜೈಪುರ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಇನ್ನೊಂದೆಡೆ, ಈ ಹಾಡನ್ನು ತಮ್ಮ ಎಕ್ಸ್​ ಪೇಜಿನಲ್ಲಿ ಹಂಚಿಕೊಳ್ಳುವ ಮೂಲಕ ಕೇಂದ್ರ ಸಚಿವ ಪಿಯೂಶ್ ಗೋಯಲ್ ಸೇರಿದಂತೆ ಅನೇಕ ಬಿಜೆಪಿ ನಾಯಕರು ಖರ್ಗೆ ಅವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ: ‘ಮೋದಿ ಅಪ್ಪನೂ ಅಧಿಕಾರದಿಂದ ಇಳಿಯುತ್ತಾರೆ’ ಎಂಬ ಖರ್ಗೆ ಹೇಳಿಕೆಗೆ ಆಕ್ರೋಶ; ಕಾಂಗ್ರೆಸ್ ಮಾಫಿಯಾ ಗ್ಯಾಂಗ್ ಎಂದ ಬಿಜೆಪಿ

‘ಪ್ರಧಾನಿ ಮೋದಿ ದೇಶದ ಜೊತೆಗಿದ್ದಾರೆ, ದೇಶದ ಜನರು ಮೋದಿಯವರ ಜೊತೆಗಿದ್ದಾರೆ’ ಎಂಬ ಕ್ಯಾಪ್ಷನ್ ನೀಡಿ ಕೇಂದ್ರ ಸಚಿವ ಪಿಯೂಶ್ ಗೋಯಲ್ ಕೂಡ ಈ ವಿಡಿಯೋ ಹಂಚಿಕೊಂಡಿದ್ದಾರೆ.


“ಎಲ್ಲ ಮುಗಿದಿದೆ, ಬ್ರೋ… ಮೋದಿ ಎಲ್ಲಿಗೂ ಹೋಗುವುದಿಲ್ಲ” ಎಂದು ಹಲವರು ಈ ರ‍್ಯಾಪ್ ಸಾಂಗನ್ನು ಹಂಚಿಕೊಂಡಿದ್ದಾರೆ. ಈಗಾಗಲೇ ಫೇಸ್​ಬುಕ್, ಎಕ್ಸ್​ನಲ್ಲಿ ಈ #ModiKahiNahiJayega ಹ್ಯಾಶ್​​ಟ್ಯಾಗ್ ಟ್ರೆಂಡಿಂಗ್​ನಲ್ಲಿದೆ. ಈ ಹಾಡಿಗೆ ಸಾವಿರಾರು ಜನರು ವೀಡಿಯೊಗಳು, ಮೀಮ್‌ಗಳು, ಪೋಸ್ಟರ್‌ಗಳು ಮತ್ತು ರೀಲ್ಸ್​ ಕೂಡ ಮಾಡುತ್ತಿದ್ದಾರೆ. ಹಿಂದಿ ಭಾಷೆಯಲ್ಲಿರುವ ಈ ಹಾಡಿನಲ್ಲಿ ಪ್ರಧಾನಿ ಮೋದಿಯವರ ಸಾಧನೆಗಳನ್ನು ಕೂಡ ಪ್ರಸ್ತಾಪಿಸಲಾಗಿದೆ.

ಇದನ್ನೂ ಓದಿ: ಮೋದಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಭಾರತೀಯ ರಾಜಕೀಯ ಸಂಸ್ಕೃತಿಯನ್ನ ಖರ್ಗೆ ನಾಶಪಡಿಸುತ್ತಿದ್ದಾರೆ ಎಂದ ಜೋಶಿ

ಸೋಷಿಯಲ್ ಮೀಡಿಯಾವನ್ನು ಯಶಸ್ವಿಯಾಗಿ ಬಳಸಿಕೊಳ್ಳುವುದರಲ್ಲಿ ಸಿದ್ಧಹಸ್ತರು ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿರುವ ಬಿಜೆಪಿ ‘ಮೋದಿ ಕಹೀ ನಹೀ ಜಾಯೇಗಾ’ ಹಾಡಿನ ಮೂಲಕ ಮತ್ತೊಮ್ಮೆ ಪ್ರಧಾನಿ ಮೋದಿಯವರ ಜನಪರ ಕಾರ್ಯಗಳನ್ನು ಪ್ರಚಾರ ಮಾಡುತ್ತಿದ್ದಾರೆ. ಖರ್ಗೆಯವರ ಟೀಕೆಯನ್ನೂ ಬಿಜೆಪಿ ತಮ್ಮ ಪ್ರಚಾರಕ್ಕೆ ಅನುಗುಣವಾಗುವಂತೆ ಮಾರ್ಪಡಿಸಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್​ನಲ್ಲಿದೆ.

 

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:50 pm, Tue, 27 October 26

ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
Loading...
Unable to load recommendations.
Follow Us