AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೋದಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಭಾರತೀಯ ರಾಜಕೀಯ ಸಂಸ್ಕೃತಿಯನ್ನ ಖರ್ಗೆ ನಾಶಪಡಿಸುತ್ತಿದ್ದಾರೆ ಎಂದ ಜೋಶಿ

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಮೋದಿ ವಿರುದ್ಧ ಆಡಿರುವ ಆಕ್ಷೇಪಾರ್ಹ ಹೇಳಿಕೆ ಸದ್ಯ ರಾಷ್ಟ್ರ ರಾಜಕಾರಣದಲ್ಲಿ ತೀವ್ರ ವಿವಾದ ಸೃಷ್ಟಿಸಿದೆ. ಖರ್ಗೆ ಹೇಳಿಕೆ ಖಂಡಿಸಿ ಬಿಜೆಪಿ ದೇಶಾದ್ಯಂತ ಪ್ರತಿಭಟನೆ ನಡೆಸಲಿದೆ. ಇನ್ನು ಕುರಿತಾಗಿ ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಕಿಡಿಕಾಡಿದ್ದು, ಕಾಂಗ್ರೆಸ್ ಭಾರತೀಯ ರಾಜಕೀಯ ಸಂಸ್ಕೃತಿಯನ್ನು ನಾಶಪಡಿಸುತ್ತಿದೆ ಎಂದು ವಾಗ್ದಾಳಿ ಮಾಡಿದ್ದಾರೆ.

ಮೋದಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಭಾರತೀಯ ರಾಜಕೀಯ ಸಂಸ್ಕೃತಿಯನ್ನ ಖರ್ಗೆ ನಾಶಪಡಿಸುತ್ತಿದ್ದಾರೆ ಎಂದ ಜೋಶಿ
ಜೋಶಿ, ಖರ್ಗೆ
ಗಂಗಾಧರ​ ಬ. ಸಾಬೋಜಿ
|

Updated on: Oct 26, 2026 | 3:21 PM

Share

ಮುಖ್ಯಾಂಶಗಳು

  • ಪ್ರಧಾನಿ ಮೋದಿ ವಿರುದ್ಧ ಖರ್ಗೆ ಆಕ್ಷೇಪಾರ್ಹ ಪದ ಬಳಕೆ
  • ಎಐಸಿಸಿ ಅಧ್ಯಕ್ಷ ಖರ್ಗೆ ಹೇಳಿಕೆ ಖಂಡಿಸಿದ ಬಿಜೆಪಿ
  • ಖರ್ಗೆ ವಿರುದ್ಧ ಪ್ರಲ್ಹಾದ್​ ಜೋಶಿ ವಾಗ್ದಾಳಿ

ನವದೆಹಲಿ, ಅಕ್ಟೋಬರ್​ 26: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಮೋದಿ ವಿರುದ್ಧ ಬಳಸಿರುವ ಆಕ್ಷೇಪಾರ್ಹ ಹೇಳಿಕೆ ಸದ್ಯ ರಾಷ್ಟ್ರ ರಾಜಕಾರಣದಲ್ಲಿ ವಿವಾದಕ್ಕೆ ನಾಂದಿ ಹಾಡಿದೆ. ಇದು ಬಿಜೆಪಿ ನಾಯಕರ ಆಕ್ರೋಶಕ್ಕೂ ಕಾರಣವಾಗಿದ್ದು, ಬಹಿರಂಗ ಕ್ಷಮೆಗೂ ಆಗ್ರಹ ಕೇಳಿಬಂದಿದೆ. ಸದ್ಯ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಯನ್ನು ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಖಂಡಿಸಿದ್ದು, ‘ಭಾರತೀಯ ರಾಜಕೀಯ ಸಂಸ್ಕೃತಿಯನ್ನು ಕಾಂಗ್ರೆಸ್ ನಾಶಪಡಿಸುತ್ತಿದೆ’ ಎಂದು ತೀವ್ರ ವಾಗ್ದಾಳಿ ಮಾಡಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ಖಂಡಿಸಿದ ಪ್ರಲ್ಹಾದ್​ ಜೋಶಿ 

ದೆಹಲಿ ಮಾಧ್ಯಮದವರೊಂದಿಗೆ ಮಾತನಾಡಿರುವ ಪ್ರಲ್ಹಾದ್​ ಜೋಶಿ, ‘ಕಾಂಗ್ರೆಸ್​​ ಪಕ್ಷದಲ್ಲಿ ರಾಹುಲ್​ ಗಾಂಧಿ ಮಾತ್ರ ಇನ್​ಮೆಚೂರ್ ಎಂದು ನಾವು ಭಾವಿಸಿದ್ದೆವು. ಆದರೆ ಅವರೊಂದಿಗೆ ಸೇರಿಕೊಂಡು, ಈಗ ಎಲ್ಲರೂ ಇನ್​ಮೆಚೂರ್​ ಆಗಿದ್ದಾರೆ, ಹತಾಶರಾಗಿದ್ದಾರೆ ಮತ್ತು ನಿರಾಶೆಗೊಂಡಿದ್ದಾರೆ. ಇಷ್ಟು ಕೆಳಮಟ್ಟಕ್ಕೆ ಇಳಿಯುವ ಮೂಲಕ ಅವರು ಭಾರತದ ರಾಜಕೀಯ ಸಂಸ್ಕೃತಿಯನ್ನು ಅಥವಾ ತಮ್ಮ ಕ್ಷೇತ್ರದ ಸಂಸ್ಕೃತಿಯನ್ನು ನಾಶಪಡಿಸುತ್ತಿದ್ದಾರೆ’ ಎಂದು ಜೋಶಿ ಹೇಳಿರುವುದಾಗಿ ಸುದ್ದಿ ಸಂಸ್ಥೆ ಐಎಎನ್​​ಎಸ್​ ವರದಿ ಮಾಡಿದೆ.

ಇದನ್ನೂ ಓದಿ: ಖರ್ಗೆ ಆಕ್ರೋಶದ ಹೇಳಿಕೆಗೆ ತಪ್ಪು ತಿಳುವಳಿಕೆಯೇ ಕಾರಣ?: ಥಳಿತಕ್ಕೊಳಗಾದ ವ್ಯಕ್ತಿಯಿಂದ ಸ್ಫೋಟಕ ಸತ್ಯ ಬಹಿರಂಗ

ಇನ್ನು ಮುಂದುವರೆದು ಮಾತನಾಡಿರುವ ಜೋಶಿ, ‘ರಾಹುಲ್ ಗಾಂಧಿ ಒಡನಾಟದಲ್ಲಿರುವುದರಿಂದ, ರಾಷ್ಟ್ರೀಯ ಅಧ್ಯಕ್ಷರಿಂದ ಹಿಡಿದು ಹಲವು ರಾಜ್ಯಾಧ್ಯಕ್ಷರು ಎಲ್ಲರೂ ಒಂದೇ ರೀತಿಯ ಭಾಷೆಯನ್ನು ಬಳಸುತ್ತಿದ್ದಾರೆ. ಇದಕ್ಕೆ ಕಾರಣವೆಂದರೆ, ಅವರೆಲ್ಲರ ಮೇಲೆ ಪ್ರಭಾವ ಬೀರಿದೆ. ಸದಾ ತಮ್ಮ ನಾಯಕರೊಂದಿಗೆ ಇರುತ್ತಾರೆ ಮತ್ತು ಅವರು ಹೇಳಿದ್ದನ್ನೇ ಫಾಲೋ ಮಾಡುತ್ತಾರೆ. ಇತ್ತೀಚೆಗೆ ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರು ಇದೇ ರೀತಿಯ ಭಾಷೆ ಬಳಸಿದ್ದರು. ಈಗ ಇವರು ಅದೇ ರೀತಿ ಮಾಡುತ್ತಿದ್ದಾರೆ’ ಎಂದು ಅವರು ಹೇಳಿದ್ದಾರೆ.

LIVE TV

ಮಲ್ಲಿಕಾರ್ಜುನ ಖರ್ಗೆ ಹೇಳಿದ್ದೇನು?

ಬಿಹಾರದ ಪಾಟ್ನಾದ ಕಾರ್ಯಕ್ರಮವೊಂದರಲ್ಲಿ ನಿನ್ನೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ SIR ವಿಚಾರ, ಚೋರಿ ವಿಚಾರ ಪ್ರಸ್ತಾಪಿಸಿದ್ದರು. ಮತಗಳ್ಳತನ ಮಾಡಿದವರನ್ನ ಜೈಲಿಗೆ ಕಳುಹಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿದ್ದರು. ಈ ವೇಳೆ ಸಭಿಕರೊಬ್ಬರು ಮೋದಿ ಎಲ್ಲೂ ಹೋಗೋದಿಲ್ಲ ಅಂತಾ ಘೋಷಣೆ ಕೂಗಿದ್ದಾರೆ. ಈ ವೇಳೆ ಆಕ್ರೋಶಗೊಂಡ ಖರ್ಗೆ, ಮೋದಿ ಅವರ ಅಪ್ಪಾನೂ ಹೋಗುತ್ತಾನೆ ಎಂದು ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ. ನವೆಂಬರ್ 1 ರಂದು ದೆಹಲಿಯಲ್ಲಿ ಇಂಡಿಯಾ ಮಿತ್ರಪಕ್ಷಗಳ ಮೆಗಾ ರ‍್ಯಾಲಿಗೂ ಮುನ್ನ ಖರ್ಗೆ ಪ್ರಧಾನಿ ಮೋದಿ ವಿರುದ್ಧ ಬಳಸಿರುವ ಆಕ್ಷೇಪಾರ್ಹ ಹೇಳಿಕೆ ಸದ್ಯ ರಾಜಕೀಯ ವಿವಾದಕ್ಕೆ ನಾಂದಿ ಹಾಡಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ಗಂಗಾಧರ​ ಬ. ಸಾಬೋಜಿ
ಗಂಗಾಧರ​ ಬ. ಸಾಬೋಜಿ

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More
ತಮ್ಮದೇ ಸರ್ಕಾರದ ವಿರುದ್ಧ ವಿಎಸ್ ಉಗ್ರಪ್ಪ ಉಗ್ರ ಸ್ವರೂಪ, ಖಡಕ್ ಎಚ್ಚರಿಕೆ
ತಮ್ಮದೇ ಸರ್ಕಾರದ ವಿರುದ್ಧ ವಿಎಸ್ ಉಗ್ರಪ್ಪ ಉಗ್ರ ಸ್ವರೂಪ, ಖಡಕ್ ಎಚ್ಚರಿಕೆ
ಕಾಮಗಾರಿ ವಿಳಂಬ: ಗುತ್ತಿಗೆದಾರರು, ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್
ಕಾಮಗಾರಿ ವಿಳಂಬ: ಗುತ್ತಿಗೆದಾರರು, ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್
ಹೇಗಿದೆ ಗೊತ್ತಾ ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್​​ ರೈಲು?
ಹೇಗಿದೆ ಗೊತ್ತಾ ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್​​ ರೈಲು?
ವೃದ್ಧೆ ಕೊಂದು ಮನೆಯಲ್ಲಿದ್ದ ಚಿನ್ನಾಭರಣ ದರೋಡೆ ಮಾಡಿದ ದುರುಳರು
ವೃದ್ಧೆ ಕೊಂದು ಮನೆಯಲ್ಲಿದ್ದ ಚಿನ್ನಾಭರಣ ದರೋಡೆ ಮಾಡಿದ ದುರುಳರು
ಸ್ಟಿಂಗ್ ವಿಡಿಯೋದಲ್ಲಿದ್ದ ಮಹಿಳೆ ಹೇಳಿಕೆಗೆ ಯತೀಂದ್ರ ಏನಂದ್ರು ನೋಡಿ
ಸ್ಟಿಂಗ್ ವಿಡಿಯೋದಲ್ಲಿದ್ದ ಮಹಿಳೆ ಹೇಳಿಕೆಗೆ ಯತೀಂದ್ರ ಏನಂದ್ರು ನೋಡಿ
ಕುಮಾರಿ ವೇಸ್ಟ್​ ಪೀಸ್ ಎಂದ ಸೌಂದರ್ಯಾ ಶೆಟ್ಟಿ; ನಡೆಯಿತು ದೊಡ್ಡ ಜಗಳ
ಕುಮಾರಿ ವೇಸ್ಟ್​ ಪೀಸ್ ಎಂದ ಸೌಂದರ್ಯಾ ಶೆಟ್ಟಿ; ನಡೆಯಿತು ದೊಡ್ಡ ಜಗಳ
ಸೀಗೆ ಹುಣ್ಣಿಮೆ: ಕೊಪ್ಪಳ ಹುಲಿಗೆಮ್ಮ ದೇವಸ್ಥಾನಕ್ಕೆ ಭಕ್ತರ ಮಹಾಪೂರ, ಜನಸಾಗರ
ಸೀಗೆ ಹುಣ್ಣಿಮೆ: ಕೊಪ್ಪಳ ಹುಲಿಗೆಮ್ಮ ದೇವಸ್ಥಾನಕ್ಕೆ ಭಕ್ತರ ಮಹಾಪೂರ, ಜನಸಾಗರ
ಇಂದು ಸೀಗೆ ಹುಣ್ಣಿಮೆ; ಈ ರಾಶಿಯವರಿಗೆ ಶುಭ ದಿನ
ಇಂದು ಸೀಗೆ ಹುಣ್ಣಿಮೆ; ಈ ರಾಶಿಯವರಿಗೆ ಶುಭ ದಿನ
ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಇನ್ಮುಂದೆ ರಾಣಿ ಚನ್ನಮ್ಮ ಸಾರಿಗೆ ಸಂಸ್ಥೆ
ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಇನ್ಮುಂದೆ ರಾಣಿ ಚನ್ನಮ್ಮ ಸಾರಿಗೆ ಸಂಸ್ಥೆ
ಭುವನೇಶ್ವರದಲ್ಲಿ ಆರ್‌ಬಿಐನ 169 ಕೋಟಿ ರೂ. ಮೌಲ್ಯದ ಡೇಟಾ ಸೆಂಟರ್ ಉದ್ಘಾಟನೆ
ಭುವನೇಶ್ವರದಲ್ಲಿ ಆರ್‌ಬಿಐನ 169 ಕೋಟಿ ರೂ. ಮೌಲ್ಯದ ಡೇಟಾ ಸೆಂಟರ್ ಉದ್ಘಾಟನೆ