Mann Ki Baat 100th Episode: ಜನಸಾಮಾನ್ಯರಿಗಾಗಿ ಮನ್ ಕಿ ಬಾತ್; 100 ನೇ ಸಂಚಿಕೆ ಮುಟ್ಟಲಿರುವ ಮೋದಿ ಶೋ

ಮನ್ ಕಿ ಬಾತ್ ಕಾರ್ಯಕ್ರಮವು ದೇಶದ ಜನಸಾಮಾನ್ಯರಿಗೆ (Citizens) ಪ್ರಧಾನ ಮಂತ್ರಿಯವರ ಧ್ವನಿಯನ್ನು ತಲುಪಿಸುವ ಗುರಿಯನ್ನು ಹೊಂದಿದೆ. ಭಾರತದ ಹಲವಾರು ಪ್ರತ್ಯೇಕ ಪ್ರದೇಶಗಳಲ್ಲಿ ದೂರದರ್ಶನ ಸೌಲಭ್ಯವಿಲ್ಲವಾದುದರಿಂದ, ರೇಡಿಯೊವನ್ನು ಸಂವಹನ ಮಾಧ್ಯಮವಾಗಿ ಆಯ್ಕೆಮಾಡಲಾಗಿದೆ.

Mann Ki Baat 100th Episode: ಜನಸಾಮಾನ್ಯರಿಗಾಗಿ ಮನ್ ಕಿ ಬಾತ್; 100 ನೇ ಸಂಚಿಕೆ ಮುಟ್ಟಲಿರುವ ಮೋದಿ ಶೋ
ಮನ್ ಕಿ ಬಾತ್ 100 ನೇ ಸಂಚಿಕೆ Image Credit source: Blitz India
Follow us
|

Updated on:Apr 12, 2023 | 12:59 PM

ಹಿಂದೆಂದೂ ಭಾರತ ಕಾಣದ ವಿನೂತನ ಮನ್ ಕಿ ಬಾತ್ (Mann Ki Baat) ರೇಡಿಯೋ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು (PM Narendra Modi) ನಿರೂಪಣೆ ಮಾಡುತ್ತಾರೆ. ಅದೆಷ್ಟೋ ವರ್ಷ ಜನರು ಭಾರತದ ಪ್ರಧಾನಿಗಳನ್ನು ಹೇಗೆ ಸಂಪರ್ಕಿಸುವುದು ಎಂಬ ಗೊಂದಲದಲ್ಲಿದ್ದರು. ಆದರೆ ಮೋದಿಯವರ ಮನ್ ಕಿ ಬಾತ್ ಭಾರತದ ಹಳ್ಳಿ-ಹಳ್ಳಿಗಳಿಗೂ ತಲುಪುತ್ತಿದೆ. ಕಾರ್ಯಕ್ರಮವು ದೇಶದ ಜನಸಾಮಾನ್ಯರಿಗೆ (Citizens) ಪ್ರಧಾನ ಮಂತ್ರಿಯವರ ಧ್ವನಿಯನ್ನು ತಲುಪಿಸುವ ಗುರಿಯನ್ನು ಹೊಂದಿದೆ. ಭಾರತದ ಹಲವಾರು ಪ್ರತ್ಯೇಕ ಪ್ರದೇಶಗಳಲ್ಲಿ ದೂರದರ್ಶನ ಸೌಲಭ್ಯವಿಲ್ಲವಾದುದರಿಂದ, ರೇಡಿಯೊವನ್ನು ಸಂವಹನ ಮಾಧ್ಯಮವಾಗಿ ಆಯ್ಕೆಮಾಡಲಾಗಿದೆ. ಏಪ್ರಿಲ್ 30, 2023 ರಂದು ಮನ್ ಕಿ ಬಾತ್ 100 ನೇ ಸಂಚಿಕೆ (100th Episode) ಪ್ರಸಾರವಾಗಲಿದೆ. ಇದರ ಪ್ರಯುಕ್ತ ರಸ ಪ್ರಶ್ನೆ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.

ಮನ್ ಕಿ ಬಾತ್ ಮಾಧ್ಯಮದ ಮೂಲಕ ನಾಗರಿಕರೊಂದಿಗೆ ಪ್ರಧಾನ ಮಂತ್ರಿಯವರ ಅನನ್ಯ ಮತ್ತು ನೇರ ಸಂವಹನವು ಸ್ವಚ್ಛ ಭಾರತ, ಬೇಟಿ ಬಚಾವೋ ಬೇಟಿ ಪಢಾವೋ, ಜಲ ಸಂರಕ್ಷಣೆ, ಸ್ಥಳೀಯರಿಗೆ ಗಾಯನ ಮುಂತಾದ ಸಾಮಾಜಿಕ ಬದಲಾವಣೆಗಳ ಯಶಸ್ಸಿಗೆ ಮೂಲ ಕಾರಣವಾಗಿದೆ. ಈ ಕಾರ್ಯಕ್ರಮ ಅಕ್ಟೋಬರ್ 3, 2014 ರಂದು ವಿಜಯದಶಮಿಯ ಶುಭ ಸಂದರ್ಭದಲ್ಲಿ ಪ್ರಾರಂಭವಾಯಿತು, ಇಲ್ಲಿಯವರೆಗೆ ತನ್ನ 99 ಆವೃತ್ತಿಗಳನ್ನು ಪೂರ್ಣಗೊಳಿಸಿದೆ.

ಇದು ಖಾದಿ, ಭಾರತೀಯ ಆಟಿಕೆ ಉದ್ಯಮ, ಆರೋಗ್ಯ, ಆಯುಷ್, ಬಾಹ್ಯಾಕಾಶ ಇತ್ಯಾದಿಗಳಲ್ಲಿ ಸ್ಟಾರ್ಟ್‌ಅಪ್‌ಗಳಂತಹ ಕೈಗಾರಿಕೆಗಳ ಮೇಲೆ ಮಹತ್ತರವಾದ ಪ್ರಭಾವವನ್ನು ತೋರಿಸಿದೆ. ಅದರ ನವೀನ ಮತ್ತು ವಿಶಿಷ್ಟವಾದ ಸಂವಾದಾತ್ಮಕ ಪ್ರಸ್ತುತಿ ಶೈಲಿಯೊಂದಿಗೆ, ಕಾರ್ಯಕ್ರಮವು ಸಂವಹನದ ವಿಶಿಷ್ಟ ಮಾದರಿಯಾಗಿ ತನ್ನದೇ ಆದ ಛಾಪನ್ನು ಮೂಡಿಸಿದೆ.

ಭಾರತದ ಹಳ್ಳಿ ಹಳ್ಳಿಗಳಲ್ಲಿ ವಿಶಿಷ್ಟ ರೀತಿಯ ವ್ಯಾಪಾರ, ಕೆಲಸ ಅಥವಾ ಜನ ಸೇವೆ ಮಾಡುವವರನ್ನು ಮೋದಿಯವರು ಮನ್ ಕಿ ಬಾತ್ ಕಾರ್ಯಕ್ರಮದ ಮೂಲಕ ಗುರುತಿಸಿದ್ದಾರೆ. ಈ ಹಿಂದೆ 2022 ರಲ್ಲಿ ವೀಳ್ಯದೆಲೆ ನಾರಿನ ಬಳಕೆಯ ಕುರಿತು ಶಿವಮೊಗ್ಗ ಮೂಲದ ದಂಪತಿಯೊಬ್ಬರ ವಿನೂತನ ಐಡಿಯಾವನ್ನು ಮೋದಿಯವರು ಈ ಕಾರ್ಯಕ್ರಮದ ಮೂಲಕ ಮೆಚ್ಚಿದರು, ಅಷ್ಟೇ ಅಲ್ಲದೆ ಮೇಕ್ ಇನ್ ಇಂಡಿಯಾವನ್ನು ಪ್ರೋತ್ಸಾಹಿಸುವಾಗ ಚನ್ನಪಟ್ಟಣದ ಬಾಂಬಗಳ ಕುರಿತು ಮಾತನಾಡಿದ್ದರು. ಹೀಗೆ ದೇಶದ ವಿವಿಧ ಹಳ್ಳಿಗರ, ಅವರ ಸ್ಪೂರ್ತಿದಾಯಕ ಕಥೆಗಳನ್ನು ಜನತೆಯ ಜೊತೆ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಮನ್ ಕಿ ಬಾತ್ 100 ನೇ ಸಂಚಿಕೆ ಪ್ರಯುಕ್ತ ರಸಪ್ರಶ್ನೆ ಸ್ಪರ್ಧೆ; ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಪ್ರಧಾನಿ ಮೋದಿ ಕರೆ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮನ್ ಕಿ ಬಾತ್ 50 ನೇ ಸಂಚಿಕೆಯಲ್ಲಿ ಮಾತನಾಡುವಾಗ, “‘ಮನ್ ಕಿ ಬಾತ್’ ನಿಂದ ಉದ್ದೇಶಪೂರ್ವಕವಾಗಿ “ರಾಜಕೀಯ” ವನ್ನು ಹೊರಗಿಟ್ಟಿದ್ದೇನೆ, ಏಕೆಂದರೆ ಕಾರ್ಯಕ್ರಮವು ಜನರ ಆಕಾಂಕ್ಷೆಗಳಿಗೆ ಸಂಬಂಧಿಸಿದೆ ಹೊರತು ಸರ್ಕಾರದ ಸಾಧನೆಗಳನ್ನು ಪ್ರಚಾರ ಮಾಡುವುದಕ್ಕಲ್ಲ.” ಎಂದು ಹೇಳಿದ್ದರು. ಅವರ ಮಾತಿನಂತೆ ಅಂದಿನಿಂದ ಇಂದಿನ ವರೆಗೂ ದೇಶದ ಅಭಿವೃದ್ಧಿ, ಜನರಿಗೆ ಉಪಯೋಗವಾಗುವ ಯೋಜನೆ ಮತ್ತು ಸ್ಪೂರ್ತಿ ಕಥೆಗಳನ್ನು ಮೋದಿಯವರು ಹಂಚಿಕೊಳ್ಳುತ್ತ ಬಂದಿದ್ದಾರೆ. ಇನ್ನೇನು ಇದೆ ತಿಂಗಳು 100ನೇ ಸಂಚಿಕೆ ಬರುತ್ತಿದ್ದು, ಪ್ರಧಾನಿಯವರು ಯಾವುದರ ಬಗ್ಗೆ ಮಾತನಾಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

Published On - 12:59 pm, Wed, 12 April 23