Patna Airport Bomb Threat: ಪಾಟ್ನಾ ಏರ್ಪೋರ್ಟ್ಗೆ ಬಾಂಬ್ ಬೆದರಿಕೆ ಕರೆ, ಶೋಧ ಕಾರ್ಯ ಆರಂಭ
ಪಾಟ್ನಾದ ಜೈಪ್ರಕಾಶ್ ನಾರಾಯಣ್ ವಿಮಾನ ನಿಲ್ದಾಣಕ್ಕೆ ಬುಧವಾರ ಬಾಂಬ್ ಬೆದರಿಕೆ ಕರೆ ಬಂದಿದೆ. ಬೆದರಿಕೆಯ ಮೇರೆಗೆ ವಿಮಾನ ನಿಲ್ದಾಣದ ಅಧಿಕಾರಿಗಳು ಬಾಂಬ್ ಸ್ಕ್ವಾಡ್ ತಂಡವನ್ನು ಕರೆಸಿದ್ದು, ವಿಮಾನ ನಿಲ್ದಾಣದಲ್ಲಿ ತೀವ್ರ ಶೋಧ ಕಾರ್ಯಾಚರಣೆ ನಡೆಯುತ್ತಿದೆ.
ಪಾಟ್ನಾದ ಜೈಪ್ರಕಾಶ್ ನಾರಾಯಣ್ ವಿಮಾನ ನಿಲ್ದಾಣಕ್ಕೆ ಬುಧವಾರ ಬಾಂಬ್ ಬೆದರಿಕೆ ಕರೆ ಬಂದಿದೆ. ಬೆದರಿಕೆಯ ಮೇರೆಗೆ ವಿಮಾನ ನಿಲ್ದಾಣದ ಅಧಿಕಾರಿಗಳು ಬಾಂಬ್ ಸ್ಕ್ವಾಡ್ ತಂಡವನ್ನು ಕರೆಸಿದ್ದು, ವಿಮಾನ ನಿಲ್ದಾಣದಲ್ಲಿ ತೀವ್ರ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಪಾಟ್ನಾ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಕರೆ ಬಂದಿದೆ. ವಿಮಾನ ನಿಲ್ದಾಣ ಬಾಂಬ್ ಬೆದರಿಕೆ ಮೌಲ್ಯಮಾಪನ ಸಮಿತಿಯು ಕರೆ ಬಂದಿರುವುದು ಸತ್ಯವಾಗಿದ್ದರೂ, ಮಾಹಿತಿ ಖಚಿತವಾದಂತೆ ಅನ್ನಿಸುತ್ತಿಲ್ಲ ಎಂದು ಹೇಳಿದೆ. ರಾಜ್ಯ ಬಿಡಿಡಿಎಸ್ ತಂಡವು ಪರಿಶೀಲನೆ ಎಂದು ಪಾಟ್ನಾ ವಿಮಾನ ನಿಲ್ದಾಣದ ನಿರ್ದೇಶಕರು ತಿಳಿಸಿದ್ದಾರೆ.
ಮತ್ತಷ್ಟು ಓದಿ: Bomb Threat To Delhi School: ಶಾಲೆಯ ಆವರಣದಲ್ಲಿ ಬಾಂಬ್ ಇಟ್ಟಿದ್ದೇವೆ ಎಂಬ ಬೆದರಿಕೆಯ ಇ-ಮೇಲ್: ಮಕ್ಕಳ ಸ್ಥಳಾಂತರ
ಇದೇ ರೀತಿಯ ಘಟನೆಯಲ್ಲಿ ಇಂದು ದೆಹಲಿಯ ಶಾಲೆಯೊಂದಕ್ಕೆ ಬಾಂಬ್ ಬೆದರಿಕೆ ಇ-ಮೇಲ್ ಬಂದಿದೆ. ಬೆದರಿಕೆ ಕರೆ ಬಂದ ನಂತರ, ಸಾದಿಕ್ ನಗರದಲ್ಲಿರುವ ಇಂಡಿಯನ್ ಸ್ಕೂಲ್ನಲ್ಲಿದ್ದ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲಾಯಿತು. ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳಕ್ಕೆ ಮಾಹಿತಿ ನೀಡಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.
ಪ್ರಾಥಮಿಕ ತನಿಖೆಯ ಪ್ರಕಾರ, ಇಮೇಲ್ ಅನ್ನು 10.49 AM ಕ್ಕೆ ಸ್ವೀಕರಿಸಲಾಗಿದೆ. ಬಿಆರ್‌ಟಿ ರಸ್ತೆಯ ಇಂಡಿಯನ್ ಸ್ಕೂಲ್‌ನ ಬ್ರಿಜೇಶ್ ಎಂಬ ವ್ಯಕ್ತಿ ಇ-ಮೇಲ್ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಶಾಲೆಯನ್ನು ಸ್ಥಳಾಂತರಿಸಲಾಗಿದೆ ಮತ್ತು ತಂಡದಿಂದ ಸಂಪೂರ್ಣ ತಪಾಸಣೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:19 pm, Wed, 12 April 23