
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಇಂದು ಟ್ವಿಟರ್ನಲ್ಲಿ (Tweet) ಹಂಚಿಕೊಂಡಿರುವ ವಂದೇ ಭಾರತ್ ಎಕ್ಸ್ಪ್ರೆಸ್ ಹಾಗೂ ಮೈಸೂರು-ಬೆಂಗಳೂರು ದಶಪಥ ರಸ್ತೆಯ ವಿಡಿಯೋಗೆ ಪ್ರಧಾನಮಂತ್ರಿ ನರೇಂದ್ರ ಮೋದಿ(Narendra Modi) ಪ್ರತಿಕ್ರಿಯೆ ನೀಡಿದ್ದಾರೆ. ಕರ್ನಾಟಕದಲ್ಲಿ ವಿಶ್ವದರ್ಜೆಯ ಮೂಲ ಸೌಕರ್ಯ ಹಾಗೂ ಬೆಳವಣಿಗೆಯ ಅದ್ಭತ ದೃಶ್ಯ. ಡಬಲ್ ಇಂಜಿನ್ ಸರ್ಕಾರ ರಾಜ್ಯದಲ್ಲಿ ಚಮತ್ಕಾರ ಮಾಡಿದೆ ಎಂದು ಬೊಮ್ಮಾಯಿ ವಿಡಿಯೋದೊಂದಿಗೆ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಮೋದಿ ಸಹ ಟ್ವೀಟ್ ಮಾಡಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: 500 ವಿಮಾನ ಖರೀದಿ ಒಪ್ಪಂದ ಅಂತಿಮಗೊಳಿಸಿದ ಏರ್ ಇಂಡಿಯಾ
ಸಿಎಂ ಅವರ ಈ ಟ್ವೀಟ್ ಅನ್ನು ಮೋದಿ ರೀಟ್ವೀಟ್ ಮಾಡಿದ್ದು, “ನಮ್ಮ ಜನರಿಗೆ ಉತ್ತಮ ಮೂಲಭೂತ ಸೌಕರ್ಯದ ಅವಶ್ಯಕತೆಯಿದೆ, ಅದನ್ನು ಒದಗಿಸಲು ನಮ್ಮ ಸರ್ಕಾರ ಯಾವಾಗಲೂ ಶ್ರಮಿಸುತ್ತದೆ. ನಮ್ಮ ಉತ್ತಮ ಮೂಲಭೂತ ಸೌಕರ್ಯದ ಯೋಜನೆಗಳು ವ್ಯಾಪಕವಾಗಿ ಶ್ಲಾಘಿಸಲ್ಪಟ್ಟಿದೆ.” ಎಂದು ಪ್ರಶಂಸಿಸಿದ್ದಾರೆ.
ಬೆಂಗಳೂರು – ಮೈಸೂರು ರಾಷ್ಟ್ರೀಯ ಹೆದ್ದಾರಿ (Bengaluru-Mysuru) 118 ಕಿಲೋಮೀಟರ್ ಇದೆ. ಇದರಲ್ಲಿ 61.104 ಕಿಲೋಮೀಟರ್ ಮಂಡ್ಯ ಜಿಲ್ಲೆಯಲ್ಲೇ ಹಾದು ಹೋಗಲಿದೆ. ಈ ಯೋಜನೆಗಾಗಿ 11,000 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ಈಗಾಗಲೇ ವಾಹನಗಳು ಈ ರಸ್ತೆ ಮೇಲೆ ಸಂಚರಿಸುತ್ತಿದೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಒಂದು ಅದ್ಭುತ ವಿಡಿಯೋ ವೈರಲ್ ಆಗಿದೆ, ಅದರಲ್ಲಿ ಒಂದೆಡೆ ದಶಪಥ ಹೆದ್ದಾರಿ ಬೃಹತ್ತಾಕಾರದಲ್ಲಿ ಸಾಗುತ್ತಿದ್ದರೆ ಹೆದ್ದಾರಿಯ ಕೆಳ ಭಾಗದಲ್ಲಿ ವಂದೇ ಮಾತರಂ ರೈಲು ಚಲಿಸುತ್ತಿದೆ.
ಈ ಅತೀ ಸುಂದರವಾದ ವಿಡಿಯೋವನ್ನು ಸಿಎಂ ಬಸವರಾಜ ಬೊಮ್ಮಾಯಿಯವರು (CM Basavaraj Bommai) ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅದರ ಜೊತೆ “ಅದ್ಭುತ ನೋಟ! ವಿಶ್ವದರ್ಜೆಯ ಮೂಲಸೌಕರ್ಯ ಮತ್ತು ಕರ್ನಾಟಕದ ಅಭೂತಪೂರ್ವ ಬೆಳವಣಿಗೆಯನ್ನು ಬಿಂಬಿಸುವ ವಂದೇ ಭಾರತ್ ಎಕ್ಸ್ಪ್ರೆಸ್ ಜೊತೆಗೆ 10-ಲೇನ್ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇ ದೃಶ್ಯ. ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ಅವರ ನೇತೃತ್ವದಲ್ಲಿ, ನಮ್ಮ ಡಬಲ್ ಇಂಜಿನ್ ಸರ್ಕಾರವು ರಾಜ್ಯದಲ್ಲಿ ಅದ್ಭುತಗಳನ್ನು ಮಾಡುತ್ತಿದೆ.” ಎಂದು ಟ್ವೀಟ್ ಮಾಡಿದ್ದರು.
Published On - 3:50 pm, Sat, 11 February 23