ಮೊದಲು ಮೋದಿಯನ್ನು ಮುಗಿಸಬೇಕು ಎಂದ ಪಂಜಾಬ್ ಮಾಜಿ ಡಿಸಿಎಂ ರಾಂಧವಾ ವಿರುದ್ಧ ಬಿಜೆಪಿ ವಾಗ್ದಾಳಿ

|

Updated on: Mar 13, 2023 | 8:19 PM

Sukhjinder Singh Randhawa ಅದಾನಿ ಮತ್ತು ಅಂಬಾನಿಯನ್ನು ತೊಲಗಿಸಬೇಕಾದರೆ ಮೊದಲು ಮೋದಿಯನ್ನು ಮುಗಿಸಬೇಕು. ನಂತರ ಬಿಜೆಪಿಯನ್ನು ಸೋಲಿಸಬೇಕು ಎಂದು ರಾಂಧವಾ ಹೇಳಿದ್ದಾರೆ.

ಮೊದಲು ಮೋದಿಯನ್ನು ಮುಗಿಸಬೇಕು ಎಂದ ಪಂಜಾಬ್ ಮಾಜಿ ಡಿಸಿಎಂ ರಾಂಧವಾ ವಿರುದ್ಧ ಬಿಜೆಪಿ ವಾಗ್ದಾಳಿ
ಸುಖ್ಜಿಂದರ್ ಸಿಂಗ್ ರಾಂಧವಾ
Follow us on

ಪುಲ್ವಾಮದಲ್ಲಿ (Pulwama) ನಡೆದ ಭಯೋತ್ಪಾದಕ ದಾಳಿಯ ಕುರಿತು ವಿವಾದಾತ್ಮಕ ಹೇಳಿಕೆ ನೀಡಿರುವ ಕಾಂಗ್ರೆಸ್ (Congress)ನಾಯಕ ಮತ್ತು ಪಂಜಾಬ್ ಮಾಜಿ ಉಪಮುಖ್ಯಮಂತ್ರಿ ಸುಖ್ಜಿಂದರ್ ಸಿಂಗ್ ರಾಂಧವಾ (Sukhjinder Singh Randhawa) ಅವರು ಸೈನಿಕರ ಪ್ರಾಣ ತ್ಯಾಗಕ್ಕೆ ಅವಮಾನ ಮಾಡಿದ್ದಾರೆ ಮತ್ತು ಭಾರತದ ಪ್ರಜಾಪ್ರಭುತ್ವವನ್ನು ಅವಮಾನಿಸಿದ್ದಾರೆ ಎಂದು ಬಿಜೆಪಿ ಟೀಕಿಸಿದೆ. 2019 ರ ಪುಲ್ವಾಮಾ ಭಯೋತ್ಪಾದಕ ದಾಳಿಯ ಬಗ್ಗೆ ತನಿಖೆಗೆ ಒತ್ತಾಯಿಸಿ, ರಾಜಸ್ಥಾನದ ಉಸ್ತುವಾರಿ ಪಕ್ಷದ ಪ್ರಧಾನ ಕಾರ್ಯದರ್ಶಿ ರಾಂಧವಾ, “ಇಲ್ಲಿಯವರೆಗೆ, ಯೋಧರು ಹೇಗೆ ಹುತಾತ್ಮರಾದರು ಎಂಬುದು ತಿಳಿದಿಲ್ಲ”. ಇದು”ಚುನಾವಣೆಗಾಗಿ ಮಾಡಲಾಗಿದೆಯೇ ಎಂದು ಕೇಳಿದ್ದರು.

ಇಂತಹ ಹೇಳಿಕೆ ನೀಡುವ ಮೂಲಕ ರಾಂಧವಾ ಸೈನಿಕರ ಪ್ರಾಣ ತ್ಯಾಗ ಮತ್ತು ನಮ್ಮ ಪ್ರಜಾಪ್ರಭುತ್ವಕ್ಕೆ ಅಪಮಾನ ಮಾಡಿದ್ದಾರೆ. ನಮ್ಮ ದೇಶ ಮತ್ತು ಸೈನಿಕರ ವಿರುದ್ಧ ಕಾಂಗ್ರೆಸ್ ಹೇಗೆ ಮಾತನಾಡುತ್ತಿದೆ ಎಂಬುದು ಮತ್ತೊಮ್ಮೆ ಸ್ಪಷ್ಟವಾಗಿದೆ ಎಂದು ರಾಜಸ್ಥಾನ ಬಿಜೆಪಿ ಮುಖ್ಯಸ್ಥ ಸತೀಶ್ ಪೂನಿಯಾ ಹೇಳಿದ್ದಾರೆ.

ಬಿಜೆಪಿ ಸಂಸದ ರಾಜ್ಯವರ್ಧನ್ ರಾಥೋಡ್ ಕೂಡ ರಾಂಧವಾ ವಿರುದ್ಧ ವಾಗ್ದಾಳಿ ನಡೆಸಿ, ಕಾಂಗ್ರೆಸ್ ವರ್ಷಗಳಿಂದ ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದೆ ಎಂದು ಆರೋಪಿಸಿದರು.

ಅವರು ಭಾರತೀಯ ಸೇನೆಯನ್ನು ಮತ್ತೆ ಮತ್ತೆ ಪ್ರಶ್ನಿಸುತ್ತಾರೆ. ಬಿಜೆಪಿಗೆ ಸೈನಿಕರ ತ್ಯಾಗ ಅರ್ಥವಾಗುತ್ತಿಲ್ಲ ಎಂದು ಅವರು ಹೇಳುತ್ತಾರೆ. ಕಾಂಗ್ರೆಸ್ ನಾಯಕರು ಭಾರತೀಯ ಭದ್ರತೆ, ಗುಪ್ತಚರ ಸಂಸ್ಥೆಗಳು ಮತ್ತು ಸೇನೆಯನ್ನು ಪ್ರಶ್ನಿಸುತ್ತಾರೆ. ಅವರ ವಾಸ್ತವ ಈಗ ಗೊತ್ತಾಗುತ್ತಿದೆ ಎಂದು ರಾಥೋಡ್ ಹೇಳಿರುವುದಾಗಿ ಎಎನ್ಐ ವರದಿ ಮಾಡಿದೆ.

ಇದನ್ನೂ ಓದಿ: ರಾಹುಲ್ ಗಾಂಧಿ ಬೈದಿದ್ದು ಬಿಜೆಪಿಯವರನ್ನು, ದೇಶದ ಮಾನ ಹೇಗೆ ಹೋಗುತ್ತದೆ: ಸಿದ್ದರಾಮಯ್ಯ ಪ್ರಶ್ನೆ

ಅದಾನಿ ಗ್ರೂಪ್ ವಿರುದ್ಧ ಅಮೆರಿಕದ ಹಿಂಡೆನ್‌ಬರ್ಗ್ ಸಂಸ್ಥೆ ಮಾಡಿರುವ ಆರೋಪಗಳನ್ನು ಪರಿಶೀಲಿಸಲು ಜಂಟಿ ಸಂಸದೀಯ ಸಮಿತಿಯನ್ನು ರಚಿಸಲು ಒಪ್ಪದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಜೈಪುರದಲ್ಲಿ ನಡೆದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ರಾಂಧವಾ ಮಾತನಾಡಿದರು. ಗೌತಮ್ ಅದಾನಿ ಅವರಂತಹ ಕೈಗಾರಿಕೋದ್ಯಮಿಗಳನ್ನು ತೊಡೆದುಹಾಕಲು ಪ್ರಧಾನಿ ನರೇಂದ್ರ ಮೋದಿ ಅವರನ್ನು “ಸೋಲಿಸಬೇಕು” ಎಂದು ಅವರು ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ಅದಾನಿ ಮತ್ತು ಅಂಬಾನಿಯನ್ನು ತೊಲಗಿಸಬೇಕಾದರೆ ಮೊದಲು ಮೋದಿಯನ್ನು ಮುಗಿಸಬೇಕು. ನಂತರ ಬಿಜೆಪಿಯನ್ನು ಸೋಲಿಸಬೇಕು ಎಂದು ರಾಂಧವಾ ಹೇಳಿದ್ದಾರೆ.

ಮೋದಿ ಬಗ್ಗೆ ಮಾತನಾಡುವಾಗ ಎಲ್ಲರೂ ಅದಾನಿ ಬಗ್ಗೆ ಮಾತನಾಡುತ್ತಿದ್ದಾರೆ. ಅವರು ದೇಶವನ್ನು ನಾಶ ಮಾಡುತ್ತಿದ್ದಾರೆ. ಕೇಂದ್ರದ ಬಿಜೆಪಿ ರಾಷ್ಟ್ರವನ್ನು ಮಾರಾಟ ಮಾಡುತ್ತಿದೆ. ಹಾಗಾಗಿ ನಮ್ಮ ಹೋರಾಟ ಅದಾನಿ ಜತೆ ಅಲ್ಲ, ಬಿಜೆಪಿ ವಿರುದ್ಧ ಎಂದಿದ್ದಾರೆ ರಾಂಧವಾ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ