ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯಲು ನನ್ನ ಜೀವನದ ಪ್ರತಿ ಕ್ಷಣವೂ ಸಮರ್ಪಿತ: ಮೋದಿ
ಬಡತನದಲ್ಲಿ ಮತ್ತು ಹಿಂದುಳಿದ ಕುಟುಂಬದಲ್ಲಿ ಜನಿಸಿದ ನನ್ನಂತಹ ವ್ಯಕ್ತಿ ರಾಷ್ಟ್ರ ಸೇವೆ ಮಾಡಲು ಸಂವಿಧಾನದಿಂದ ಮಾತ್ರ ಸಾಧ್ಯ. ನಮ್ಮ ಸಂವಿಧಾನವು ಕೋಟ್ಯಂತರ ಜನರಿಗೆ ಭರವಸೆ, ಶಕ್ತಿ ಮತ್ತು ಘನತೆಯನ್ನು ನೀಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.

ದೆಹಲಿ ಜೂನ್ 07: ಡಾ.ಬಾಬಾಸಾಹೇಬ್ ಅಂಬೇಡ್ಕರ್ (Dr. Babasaheb Ambedkar) ಅವರು ನಮಗೆ ನೀಡಿದ ಭಾರತದ ಸಂವಿಧಾನದಲ್ಲಿ (Constitution of India) ಪ್ರತಿಪಾದಿಸಿರುವ ಉದಾತ್ತ ಮೌಲ್ಯಗಳನ್ನು ಎತ್ತಿಹಿಡಿಯಲು ನನ್ನ ಜೀವನದ ಪ್ರತಿ ಕ್ಷಣವೂ ಸಮರ್ಪಿತವಾಗಿದೆ. ಬಡತನದಲ್ಲಿ ಮತ್ತು ಹಿಂದುಳಿದ ಕುಟುಂಬದಲ್ಲಿ ಜನಿಸಿದ ನನ್ನಂತಹ ವ್ಯಕ್ತಿ ರಾಷ್ಟ್ರ ಸೇವೆ ಮಾಡಲು ಸಂವಿಧಾನದಿಂದ ಮಾತ್ರ ಸಾಧ್ಯ. ನಮ್ಮ ಸಂವಿಧಾನವು ಕೋಟ್ಯಂತರ ಜನರಿಗೆ ಭರವಸೆ, ಶಕ್ತಿ ಮತ್ತು ಘನತೆಯನ್ನು ನೀಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ನರೇಂದ್ರ ಮೋದಿ ಅವರು ಜೂನ್ 9, ಭಾನುವಾರ ಸಂಜೆ 6 ಗಂಟೆಗೆ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಸಭೆಯಲ್ಲಿ ಬಿಜೆಪಿ ನಾಯಕ ಪ್ರಹ್ಲಾದ್ ಜೋಶಿ ಈ ಘೋಷಣೆ ಮಾಡಿದ್ದಾರೆ. ಹೊಸದಾಗಿ ಆಯ್ಕೆಯಾದ ಸಂಸದರು ಶುಕ್ರವಾರ ಸಂವಿಧಾನ ಭವನದ (ಹಳೆಯ ಸಂಸತ್ ಭವನ) ಸೆಂಟ್ರಲ್ ಹಾಲ್‌ನಲ್ಲಿ ಪ್ರಧಾನಿ ಮೋದಿ ಅವರನ್ನು ತಮ್ಮ ನಾಯಕನನ್ನಾಗಿ ಆಯ್ಕೆ ಮಾಡಿದ್ದಾರೆ. ಎಲ್ಲಾ 293 ಎನ್‌ಡಿಎ ಸಂಸದರು, ರಾಜ್ಯಸಭಾ ಸಂಸದರು ಮತ್ತು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು ಭಾಗವಹಿಸಿದ್ದ ಸಂಸದೀಯ ಪಕ್ಷದ ಸಭೆಯಲ್ಲಿ ಮೋದಿಯನ್ನು ಸರ್ವಾನುಮತದಿಂದ ನಾಯಕನನ್ನಾಗಿ ಆಯ್ಕೆ ಮಾಡಲಾಯಿತು.
ಮೋದಿ ಟ್ವೀಟ್
Every moment of my life is dedicated to upholding the noble values enshrined in the Constitution of India, given to us by Dr. Babasaheb Ambedkar. It is only due to the Constitution that a person like me, born into poverty and in a backward family, is able to serve the nation. Our… pic.twitter.com/kw7z7OC6i5
— Narendra Modi (@narendramodi) June 7, 2024
ಸಭೆಯಲ್ಲಿ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರು ಸ್ವಾಗತ ಭಾಷಣ ಮಾಡಿ, ಪೂರ್ಣ ಬಹುಮತದೊಂದಿಗೆ ಮೋದಿ ನೇತೃತ್ವದಲ್ಲಿ ಎನ್‌ಡಿಎ ಸರ್ಕಾರ ರಚಿಸುವುದರೊಂದಿಗೆ ಭಾರತ ಇತಿಹಾಸವನ್ನು ಸೃಷ್ಟಿಸುತ್ತಿದೆ ಎಂದು ಹೇಳಿದ್ದು ದೇಶಕ್ಕೆ ಸೇವೆ ಸಲ್ಲಿಸಲು ಮೋದಿಯವರ ಅವಿರತ ಪ್ರಯತ್ನ ಮತ್ತು ಸಮರ್ಪಣೆಯನ್ನು ಶ್ಲಾಘಿಸಿದರು.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಪ್ರಧಾನಿ ಹುದ್ದೆಗೆ ಪ್ರಧಾನಿ ಮೋದಿಯವರ ಹೆಸರನ್ನು ಪ್ರಸ್ತಾಪಿಸಿದ್ದು ಇದನ್ನು ಅಮಿತ್ ಶಾ ಮತ್ತು ನಿತಿನ್ ಗಡ್ಕರಿ ಅವರು ಅನುಮೋದಿಸಿದರು.
ಇದನ್ನೂ ಓದಿ: ನಾವು ಹಿಂದೆಯೂ ಸೋತಿಲ್ಲ, ಇಂದೂ ಸೋತಿಲ್ಲ, ಗೆಲುವನ್ನು ಅರಗಿಸಿಕೊಳ್ಳುವುದೂ ತಿಳಿದಿದೆ: ಮೋದಿ
ಸಂಸತ್ ಭವನದ ಸಂವಿಧಾನ್ ಸದನದಲ್ಲಿ ಸಭೆ ನಡೆದಿದ್ದು, ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ಮೋದಿ ಮೋದಿ’ ಎಂಬ ಘೋಷಣೆಗಳೊಂದಿಗೆ ಸ್ವಾಗತಿಸಲಾಯಿತು. ಅಲ್ಲಿಗೆ ಆಗಮಿಸಿದ ಪ್ರಧಾನಿ ಮೋದಿಯವರು ತಮ್ಮ ಭಾರತದ ಸಂವಿಧಾನವನ್ನು ಹಣೆಗೆ ಒತ್ತಿ ಗೌರವ ಸಲ್ಲಿಸಿದರು. ಪ್ರಧಾನಿ ಮೋದಿಯವರ ಕಾರ್ಯವನ್ನು ಸಮ್ಮಿಶ್ರ ಸದಸ್ಯರು ಮತ್ತು ಸಂಸದರು ಚಪ್ಪಾಳೆಗಳ ಮೂಲಕ ಶ್ಲಾಘಿಸಿದೆ. ಅದೇ ವೇಳೆ ಕಾಂಗ್ರೆಸ್ ಪಕ್ಷವು ಇದನ್ನು “ಬೂಟಾಟಿಕೆ” ಎಂದು ಕರೆದಿದೆ.
ಪ್ರಧಾನಿಯ ಬೂಟಾಟಿಕೆಗೆ ಮಿತಿಯೇ ಇಲ್ಲ. 400 ಸೀಟುಗಳನ್ನು ಬೇಡಿಕೆಯೊಡ್ಡಿ 10 ವರ್ಷಗಳಿಂದ ನಿರಂತರವಾಗಿ ನಿರ್ಲಕ್ಷಿಸಿದ ಅದೇ ಸಂವಿಧಾನವನ್ನು ಇಂದು ಅವರು ತಮ್ಮ ಹಣೆಗೆ ಮುಟ್ಟಿಸಿದ್ದಾರೆ ಎಂದು ಜೈರಾಮ್ ರಮೇಶ್ ಸಾಮಾಜಿಕ ಮಾಧ್ಯಮದಲ್ಲಿ ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:35 pm, Fri, 7 June 24