ನಾವು ಹಿಂದೆಯೂ ಸೋತಿಲ್ಲ, ಇಂದೂ ಸೋತಿಲ್ಲ, ಗೆಲುವನ್ನು ಅರಗಿಸಿಕೊಳ್ಳುವುದೂ ತಿಳಿದಿದೆ: ಮೋದಿ

ನಾವು ಹಿಂದೆಯೂ ಸೋತಿಲ್ಲ, ಇಂದೂ ಸೋತಿಲ್ಲ ಆದರೆ ಗೆಲುವನ್ನು ಅರಗಿಸಿಕೊಳ್ಳುವ ಪರಿ ತಿಳಿದಿದೆ ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಹೇಳಿದ್ದಾರೆ. ಎನ್​ಡಿಎ ಸಂಸದೀಯ ಸಭೆಯಲ್ಲಿ ಮಾತನಾಡಿದ ಅವರು, ನಾವು ಸೋತಿಲ್ಲ, ಗೆಲುವನ್ನು ಜೀರ್ಣಸಿಕೊಳ್ಳುವುದು ಹೇಗೆಂಬುದು ತಿಳಿದಿದೆ. ಸೋತವರನ್ನು ಅಪಹಾಸ್ಯ ಮಾಡುವುದು ನಮ್ಮ ಸಂಸ್ಕೃತಿಯಲ್ಲಿಲ್ಲ ಎಂದರು.

ನಾವು ಹಿಂದೆಯೂ ಸೋತಿಲ್ಲ, ಇಂದೂ ಸೋತಿಲ್ಲ, ಗೆಲುವನ್ನು ಅರಗಿಸಿಕೊಳ್ಳುವುದೂ ತಿಳಿದಿದೆ: ಮೋದಿ
ನರೇಂದ್ರ ಮೋದಿImage Credit source: Mint
Follow us
ನಯನಾ ರಾಜೀವ್
|

Updated on: Jun 07, 2024 | 3:25 PM

ನಾವು ಹಿಂದೆಯೂ ಸೋತಿಲ್ಲ, ಇಂದೂ ಸೋತಿಲ್ಲ ಆದರೆ ಗೆಲುವನ್ನು ಅರಗಿಸಿಕೊಳ್ಳುವ ಪರಿ ತಿಳಿದಿದೆ ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಹೇಳಿದ್ದಾರೆ. ಎನ್​ಡಿಎ ಸಂಸದೀಯ ಸಭೆಯಲ್ಲಿ ಮಾತನಾಡಿದ ಅವರು, ನಾವು ಸೋತಿಲ್ಲ, ಗೆಲುವನ್ನು ಜೀರ್ಣಸಿಕೊಳ್ಳುವುದು ಹೇಗೆಂಬುದು ತಿಳಿದಿದೆ. ಸೋತವರನ್ನು ಅಪಹಾಸ್ಯ ಮಾಡುವುದು ನಮ್ಮ ಸಂಸ್ಕೃತಿಯಲ್ಲಿಲ್ಲ ಎಂದರು. ಲೋಕಸಭೆ ಚುನಾವಣೆಗೂ ಮುನ್ನವೂ ಎನ್​ಡಿಎ ಸರ್ಕಾರ ಇತ್ತು, ಲೋಕಸಭಾ ಚುನಾವಣೆ ಮುಗಿದ ಮೇಲೂ ಎನ್​ಡಿಎ ಸರ್ಕಾರವೇ ಇದೆ ಇದರಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ಮೋದಿ ಹೇಳಿದರು.

2024 ರ ಈ ಜನಾದೇಶವು ಇಂದಿನ ಪರಿಸ್ಥಿತಿಯಲ್ಲಿ ದೇಶವು ಎನ್‌ಡಿಎಯಲ್ಲಿ ಮಾತ್ರ ನಂಬಿಕೆಯನ್ನು ಹೊಂದಿದೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದಂತಾಗಿದೆ. ಸಾಮಾನ್ಯವಾಗಿ ಸಮ್ಮಿಶ್ರ ಸರ್ಕಾರ ಬರುತ್ತಿದ್ದಂತೆಯೇ ಪಕ್ಷಗಳ ನಡುವೆ ಒಡಕು, ಅಸಮಾಧಾನ ಎಲ್ಲವೂ ಸಾಮಾನ್ಯ ಆದರೆ ಎನ್​ಡಿಎ ಸರ್ಕಾರದಲ್ಲಿ ಒತ್ತಡ, ರಾಜಕೀಯ ಏನೇ ಇರಲಿ ದೇಶದ ಹಿತಾಸಕ್ತಿ ಬಲಿ ಕೊಡುವುದಿಲ್ಲ ಎಂದು ವಿರೋಧ ಪಕ್ಷವಾದ ಇಂಡಿ ಒಕ್ಕೂಟವನ್ನು ಗಮನದಲ್ಲಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಎನ್‌ಡಿಎ ಅತ್ಯಂತ ಯಶಸ್ವಿ ಮೈತ್ರಿಕೂಟ, ಮೂವತ್ತು ವರ್ಷಗಳಲ್ಲಿ ಎನ್‌ಡಿಎ ಮೂರು ಬಾರಿ ಪೂರ್ಣಾವಧಿಯನ್ನು ಪೂರೈಸಿದೆ. ನಾವು ನಾಲ್ಕನೇ ಅವಧಿಯನ್ನು ಪ್ರವೇಶಿಸುತ್ತಿದ್ದೇವೆ.

ಮತ್ತಷ್ಟು ಓದಿ: ಸರ್ಕಾರ ನಡೆಸಲು ಬಹುಮತ ಅಗತ್ಯ, ದೇಶ ಮುನ್ನಡೆಸಲು ಒಮ್ಮತ ಅಗತ್ಯ: ಮೋದಿ

ಎನ್‌ಡಿಎ ಅಧಿಕಾರ ಪಡೆಯಲು ಕೆಲವೇ ಜನರ ಕೂಟವಲ್ಲ. ದೇಶದ 22 ರಾಜ್ಯಗಳಲ್ಲಿ ಸರ್ಕಾರ ರಚಿಸುವ ಮೂಲಕ ಇಂದು ಜನರು ಎನ್‌ಡಿಎಗೆ ಸೇವೆ ಸಲ್ಲಿಸಲು ಅವಕಾಶವನ್ನು ನೀಡಿದ್ದಾರೆ ಎಂದು ಹೇಳಿದರು.

ಸರ್ಕಾರ ನಡೆಸಲು ಬಹುಮತ ಅಗತ್ಯ ದೇಶವನ್ನು ಮುನ್ನಡೆಸಲು ಒಮ್ಮತ ಅಗತ್ಯ’’ ಎಂದು ಹೇಳಿದರು. ಸರ್ಕಾರ ನಡೆಸಲು ಬಹುಮತ ಬೇಕು, ಅದು ಪ್ರಜಾಪ್ರಭುತ್ವದ ಏಕೈಕ ತತ್ವವಾಗಿದೆ. ದೇಶವನ್ನು ನಡೆಸಲು ಏಕಾಭಿಪ್ರಾಯ ಬಹಳ ಮುಖ್ಯ. 2019 ರಲ್ಲಿ, ನೀವೆಲ್ಲರೂ ನನ್ನನ್ನು ನಾಯಕನಾಗಿ ಆಯ್ಕೆ ಮಾಡಿದಾಗ, ನಾನು ಒಂದು ವಿಷಯಕ್ಕೆ ಒತ್ತು ನೀಡಿದ್ದೆ ಅದು ನಂಬಿಕೆ. ಇಂದು ನೀವು ಮತ್ತೊಮ್ಮೆ ನನಗೆ ಈ ಜವಾಬ್ದಾರಿಯನ್ನು ನೀಡುತ್ತಿದ್ದೀರಿ ಎಂದರೆ ನಮ್ಮ ನಡುವಿನ ನಂಬಿಕೆಯ ಸೇತುವೆ ತುಂಬಾ ಬಲವಾಗಿದೆ. ಈ ಕ್ಷಣವೂ ಭಾವನಾತ್ಮಕವಾಗಿದೆ ಎಂದರು.

ಜೂನ್​ 1ರಂದು ಮತದಾನ ಪ್ರಕ್ರಿಯೆ ಮುಗಿದು ಜೂನ್​ 4 ರಂದು ಫಲಿತಾಂಶ ಹೊರ ಬಂದಿದೆ ಇದರ ನಡುವೆ ದೇಶವನ್ನು ಹಿಂಸೆಯ ಬೆಂಕಿಯಲ್ಲಿ ಸುಡುವ ಕೆಲಸ ಯೋಜನಾಬದ್ಧವಾಗಿ ನಡೆದಿದೆ ಎಂದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ