ರಾಮನ ಮೇಲೆ ಸೂರ್ಯರಶ್ಮಿ ಸ್ಪರ್ಶಿಸಿದನ್ನು ವಿಮಾನದಲ್ಲಿ ಕುಳಿತು ಟ್ಯಾಬ್ಲೆಟ್‌ ಮೂಲಕ ವೀಕ್ಷಿಸಿದ ಮೋದಿ

ಪ್ರಧಾನಿ ಮೋದಿ ಅವರು ಇಂದು ಅಯೋಧ್ಯ ರಾಮಮಂದಿರದಲ್ಲಿ ರಾಮ ಲಲ್ಲಾನ ಮೇಲೆ ಸೂರ್ಯರಶ್ಮಿ ಸ್ಪರ್ಶಿಸಿದನ್ನು ವಿಮಾನದಲ್ಲಿ ಕುಳಿತು ಟ್ಯಾಬ್ಲೆಟ್‌ ಮೂಲಕ ವೀಕ್ಷಿಸಿದರು. ಕಾಲಿನಿಂದ ಚಪ್ಪಲಿ ಕಳಚಿ ಭಕ್ತಿಯಿಂದ ಈ ಕ್ಷಣಕ್ಕೆ ಸಾಕ್ಷಿಯಾದರು. ನಲ್ಬರಿ ರ್ಯಾಲಿಯ ನಂತರ, ನಾನು ರಾಮಲಲ್ಲಾ ಹಣೆಯ ಮೇಲೆ ಮೂಡಿದ ಸೂರ್ಯರಶ್ಮಿಯನ್ನು ವೀಕ್ಷಣೆ ಮಾಡಿದೆ. ಕೋಟ್ಯಾಂತರ ರಾಮ ಭಕ್ತರಂತೆ ನಾನು ಕೂಡ ಈ ಕ್ಷಣಕ್ಕೆ ಸಾಕ್ಷಿಯಾದೆ ಎಂದು ಪ್ರಧಾನಿ ಮೋದಿ ಅವರು ಎಕ್ಸ್​​​ನಲ್ಲಿ ಟ್ವೀಟ್​​ ಮಾಡಿದ್ದಾರೆ.

ಇಂದು ರಾಮಮಂದಿರ ನಿರ್ಮಾಣವಾಗಿ ಮೊದಲು ರಾಮ ನವಮಿಯನ್ನು ಆಚರಣೆ ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ರಾಮಲಲ್ಲಾನ ಹಣೆಯ ಮೇಲೆ ಸೂರ್ಯರಶ್ಮಿಯ ಸ್ಪರ್ಶವಾಗಿದೆ. ಕ್ಷಣವನ್ನು ಕೋಟ್ಯಾಂತರ ಭಕ್ತರು ಕಣ್ತುಂಬಿಕೊಂಡರು. ಇದರ ಜತೆಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಕೂಡ ಈ ಕ್ಷಣವನ್ನು ವಿಮಾನದಲ್ಲೇ ಕೂತು ವೀಕ್ಷಿಸಿದರು. ಅಸ್ಸಾಂನ ನಲ್ಬರಿಯಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ರಾಮನವಮಿ ಹಬ್ಬದ ಸಮಾರಂಭವು ನನ್ನನ್ನು ತುಂಬಾ ಭಾವುಕರನ್ನಾಗಿಸಿದೆ ಎಂದು ಹೇಳಿದರು.

ನಲ್ಬರಿ ರ್ಯಾಲಿಯ ನಂತರ, ನಾನು ರಾಮಲಲ್ಲಾ ಹಣೆಯ ಮೇಲೆ ಮೂಡಿದ ಸೂರ್ಯರಶ್ಮಿಯನ್ನು ವೀಕ್ಷಣೆ ಮಾಡಿದೆ. ಕೋಟ್ಯಾಂತರ ರಾಮ ಭಕ್ತರಂತೆ ನಾನು ಕೂಡ ಈ ಕ್ಷಣಕ್ಕೆ ಸಾಕ್ಷಿಯಾದೆ ಎಂದು ಪ್ರಧಾನಿ ಮೋದಿ ಅವರು ಎಕ್ಸ್​​​ನಲ್ಲಿ ಟ್ವೀಟ್​​ ಮಾಡಿದ್ದಾರೆ. ಈ ಸೂರ್ಯರಶ್ಮಿ ನಮ್ಮ ಜೀವದಲ್ಲಿ ಶಕ್ತಿಯನ್ನು ತರಲಿ ಹಾಗೂ ವೈಭವದ ಹೊಸ ಎತ್ತರಗಳನ್ನು ಏರಲು ನಮ್ಮ ರಾಷ್ಟ್ರವನ್ನು ಪ್ರೇರೇಪಿಸಲಿ ಎಂದು ಹೇಳಿದರು.  ಪ್ರಧಾನಿ ಮೋದಿ ಅವರು ರಾಮ ಲಲ್ಲಾನ ಮೇಲೆ ಸೂರ್ಯ ತಿಲಕ ಮೂಡುವ ಸಮಯದಲ್ಲಿ ತಮ್ಮ ಕಾಲಿನಲ್ಲಿದ್ದ ಚಪ್ಪಲಿಯನ್ನು ಕಳಚಿ, ಸೂರ್ಯರಶ್ಮಿ ಸ್ಪರ್ಶವನ್ನು ವೀಕ್ಷಿಸಿದ್ದಾರೆ.


500 ವರ್ಷಗಳ ಹೋರಾಟದ ಫಲವಾಗಿ ಜನವರಿ 22ರಂದು ಮಂದಿರ ನಿರ್ಮಾಣವಾಗಿ ಬಾಲ ರಾಮನ ಪ್ರತಿಷ್ಠೆ ಕೂಡ ನಡೆದಿತ್ತು. ಇದೀಗ ರಾಮ ಮಂದಿರ ನಿರ್ಮಾಣವಾದ ನಂತರ ಮೊದಲ ರಾಮ ನವಮಿಯನ್ನು ಆಚರಣೆ ಮಾಡಲಾಗಿದೆ. ಈ ಸಮಯದಲ್ಲಿ ಬಾಲ ರಾಮನ ಮೇಲೆ ಸೂರ್ಯರಶ್ಮಿಯ ಸ್ಪರ್ಶವಾಗಿದೆ. ಕನ್ನಡಿಗಳು ಮತ್ತು ಮಸೂರಗಳನ್ನು ಒಳಗೊಂಡಿರುವ ಒಂದು ದೀರ್ಘವಧಿಯ ಕಾರ್ಯವಿಧಾನವಾಗಿದೆ. ಸೂರ್ಯರಶ್ಮಿ ನೇರವಾಗಿ ರಾಮ ಹಣೆಗೆ ಬೀಳುವಂತೆ ಮಾಡಲು ಈ ಹಿಂದೆ ವಿಜ್ಞಾನಿಗಳು ಒಂದು ಪ್ರಯೋಗವನ್ನು ಕೂಡ ನಡೆಸಿದರು. ಇದೀಗ ಈ ವಿಧಾನ ಯಶಸ್ವಿಯಾಗಿದೆ. ಜನವರಿ 22 ರಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಅಯೋಧ್ಯೆಯಲ್ಲಿ ರಾಮನ ವಿಗ್ರಹವನ್ನು ಪ್ರಾಣ ಪ್ರತಿಷ್ಠೆಯನ್ನು ಮಾಡಲಾಗಿತ್ತು.

ಇದನ್ನೂ ಓದಿ: ನೂತನ ರಾಮ ಮಂದಿರ ನಿರ್ಮಾಣವಾದ ಬಳಿಕ ಅಯೋಧ್ಯೆಯಲ್ಲಿ ಇದು ಮೊದಲ ರಾಮನವಮಿ, ಮೋದಿ ಸಂದೇಶ ಇಲ್ಲಿದೆ

ಪ್ರಧಾನಿ ಮೋದಿ ಅವರು, ನಲ್ಬರಿಯಲ್ಲಿ ರ್ಯಾಲಿಯನ್ನು ಉದ್ದೇಶಿ ಮಾತನಾಡಿದ್ದಾರೆ, 500 ವರ್ಷಗಳ ನಂತರ ಶ್ರೀರಾಮ ಅಯೋಧ್ಯೆ ದೇವಸ್ಥಾನದಲ್ಲಿ ಕುಳಿತಿದ್ದಾನೆ . ಇಂದು ರಾಮನವಮಿಯ ಐತಿಹಾಸಿಕ ಸಂದರ್ಭವಾಗಿದೆ. 500 ವರ್ಷಗಳ ಕಾಯುವಿಕೆಗೆ ಮುಕ್ತಿ ನೀಡಲಾಗಿದೆ, ರಾಮ ಭವ್ಯ ಮಂದಿರದಲ್ಲಿ ವಿರಾಜಮಾನನಾಗಿದ್ದಾನೆ. ಆತ ಈ ಮಂದಿರಲ್ಲಿ ಮೊದಲ ಬಾರಿ ಜನ್ಮದಿನವನ್ನು ಆಚರಣೆ ಮಾಡಲಾಗುತ್ತಿದೆ ಎಂದು ಹೇಳಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 2:37 pm, Wed, 17 April 24