ಸರ್ಕಾರಕ್ಕೂ ಮುನ್ನವೇ ‘ಕೊವಿನ್​’ ಆ್ಯಪ್​ ಬಿಡುಗಡೆ ಮಾಡಿದ ಕಿಡಿಗೇಡಿಗಳು

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 06, 2021 | 8:08 PM

ನಕಲಿ CoWin ಆ್ಯಪ್​ಗಳನ್ನು ಬಳಸದಂತೆ ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಎಚ್ಚರಿಕೆ ನೀಡಿದೆ. ಅಧಿಕೃತ ಆ್ಯಪ್​ ಬಿಡುಗಡೆ ಮಾಡುವಾಗ ಸರ್ಕಾರ ಮಾಹಿತಿ ನೀಡಲಿದೆ ಎಂದು ತಿಳಿಸಿದೆ.

ಸರ್ಕಾರಕ್ಕೂ ಮುನ್ನವೇ ‘ಕೊವಿನ್​’ ಆ್ಯಪ್​ ಬಿಡುಗಡೆ ಮಾಡಿದ ಕಿಡಿಗೇಡಿಗಳು
ನಕಲಿ ಕೊವಿನ್​ ಆ್ಯಪ್​
Follow us on

ದೆಹಲಿ: ಕೊರೊನಾ ಲಸಿಕೆ ವಿತರಣೆಗೆ ಸಂಬಂಧಿಸಿದಂತೆ ಸರ್ಕಾರದ ವತಿಯಿಂದ ಕೊವಿನ್​ (CoWin) ಹೆಸರಿನ ಆ್ಯಪ್​ ಬಿಡುಗಡೆ ಮಾಡಲು ಉದ್ದೇಶಿಸಲಾಗಿದೆ. ಆದರೆ, ಕೆಲವು ಕಿಡಿಗೇಡಿಗಳು ಸರ್ಕಾರಕ್ಕೂ ಮುನ್ನವೇ ಕೊವಿನ್​ ಆ್ಯಪ್​ ತಯಾರಿಸಿ ಗೂಗಲ್​ ಪ್ಲೇಸ್ಟೋರ್​ನಲ್ಲಿ ಹರಿಬಿಟ್ಟಿದ್ದಾರೆ.

ಈ ಕುರಿತು ಎಚ್ಚರಿಕೆ ನೀಡಿರುವ ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಕಲಿ ಆ್ಯಪ್​ಗಳನ್ನು ಬಳಸದಂತೆ ಸೂಚಿಸಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕೃತ ಟ್ವಿಟರ್​ ಅಕೌಂಟ್​​ನಲ್ಲಿ ಟ್ವೀಟ್​ ಮಾಡಲಾಗಿದ್ದು, ಕಿಡಿಗೇಡಿಗಳ ಮೋಸದ ಜಾಲಕ್ಕೆ ಮಾರುಹೋಗದಂತೆ ತಿಳಿಸಲಾಗಿದೆ.

ಸರ್ಕಾರ ಬಿಡುಗಡೆ ಮಾಡಲು ಉದ್ದೇಶಿಸಿರುವ ಕೊವಿನ್​ ಹೆಸರಿನಲ್ಲಿ ಈಗಾಗಲೇ ಕೆಲವರು ಆ್ಯಪ್​ ತಯಾರಿಸಿದ್ದಾರೆ. ಅವುಗಳನ್ನು ಡೌನ್​ಲೋಡ್​ ಮಾಡುವುದಾಗಲೀ, ವೈಯುಕ್ತಿಕ ವಿಚಾರಗಳನ್ನು ಅಲ್ಲಿ ಹಂಚಿಕೊಳ್ಳುವುದಾಗಲೀ ಮಾಡಬೇಡಿ. ಅಧಿಕೃತ ಆ್ಯಪ್​ ಬಿಡುಗಡೆ ಮಾಡುವಾಗ ಸರ್ಕಾರ ಆ ಕುರಿತು ಮಾಹಿತಿ ನೀಡಲಿದೆ ಎಂದು ಟ್ವೀಟ್​ನಲ್ಲಿ ಉಲ್ಲೇಖಿಸಲಾಗಿದೆ.

ಕೊರೊನಾಗೆ ಹಸುವಿನ ಸಗಣಿ-ಗಂಜಲವೇ ಮದ್ದು.. ಕೇಂದ್ರ ಸರ್ಕಾರದಿಂದ ಮಹತ್ವದ ಸಂಶೋಧನೆ