ನಾಣ್ಯಗಳ ಇತಿಹಾಸ ಹೇಳುವ ಚಿತ್ರಗಳೊಂದಿಗೆ ಮೂಡಿಬಂತು ಆರ್​ಬಿಐ ಕ್ಯಾಲೆಂಡರ್

12 ಪುಟಗಳಲ್ಲಿ ಪ್ರತಿಯೊಂದು ತಿಂಗಳ ಕ್ಯಾಲೆಂಡರ್ ಜತೆ ನಾಣ್ಯಗಳ ಪರಿಚಯವನ್ನು ಮಾಡಿರುವ ಆರ್​ಬಿಐ, ಅಲ್ಲಿ ಚಿತ್ರಿಸಿರುವ ಮಾದರಿಯ ಬಗ್ಗೆ ಪುಟ್ಟ ವಿವರಣೆಯನ್ನೂ ನೀಡಿದೆ.

ನಾಣ್ಯಗಳ ಇತಿಹಾಸ ಹೇಳುವ ಚಿತ್ರಗಳೊಂದಿಗೆ ಮೂಡಿಬಂತು ಆರ್​ಬಿಐ ಕ್ಯಾಲೆಂಡರ್
ಆರ್​ಬಿಐ ಕ್ಯಾಲೆಂಡರ್
Follow us
ರಶ್ಮಿ ಕಲ್ಲಕಟ್ಟ
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 06, 2021 | 6:32 PM

ನಮ್ಮ ದೇಶದಲ್ಲಿ ಕರೆನ್ಸಿ ವಿಕಸನವಾದ ಬಗೆಯನ್ನು ವಿವರಿಸುವ ಮಾಹಿತಿಯನ್ನು ಈ ಬಾರಿಯ ಆರ್​ಬಿಐ ಕ್ಯಾಲೆಂಡರ್​ ಹೊತ್ತುತಂದಿದೆ. 12 ಪುಟಗಳಲ್ಲಿ ಪ್ರತಿಯೊಂದು ತಿಂಗಳ ಕ್ಯಾಲೆಂಡರ್ ಜತೆ ವಿವಿಧ ರೀತಿಯ ನಾಣ್ಯಗಳ ಪರಿಚಯವನ್ನೂ ಮಾಡಿಕೊಟ್ಟಿದೆ.

ಆರ್​ಬಿಐ ಕ್ಯಾಲೆಂಡರ್​ನಲ್ಲಿ ನಮೂದಿಸಿರುವ ಮುಖ್ಯ ಮಾಹಿತಿಯ ಸಂಗ್ರಹ ಅನುವಾದ ಇಲ್ಲಿದೆ..

ಮಾನವ ಚಟುವಟಿಕೆಗಳಲ್ಲಿ ಸರಕುಗಳ ವಿನಿಮಯವು ಅತ್ಯಗತ್ಯವಾದಾಗ ಪ್ರಮಾಣಿತ ಅಳತೆಯ ಮೌಲ್ಯದ ಅನ್ವೇಷಣೆ ಪ್ರಾರಂಭವಾಯಿತು. ಸಹಸ್ರಮಾನಗಳನ್ನು ಅಳೆಯುವ ಬಗೆಯ ಬಗ್ಗೆ ನಿರಂತರ ಪ್ರಯತ್ನಗಳು ನಡೆದವು. ಏಕರೂಪದ, ಬಾಳಿಕೆ ಬರುವ, ಒಯ್ಯಬಲ್ಲ ಮತ್ತು ವಿಭಜಿಸಬಹುದಾದ – ವಿನಿಮಯದ ಮಾಧ್ಯಮವಾಗಿ ಮತ್ತು ಸಂಗ್ರಹ ಯೋಗ್ಯವಾದ ಕಾರ್ಯನಿರ್ವಹಿಸುವ ಹಣದ ರೂಪವನ್ನು ಹೊಂದಲು ಮನುಷ್ಯರು ನಡೆಸಿದ ಪ್ರಯತ್ನ ಅದಾಗಿತ್ತು. ಈ ಪ್ರಯತ್ನವೇ ಗಮನಾರ್ಹವಾದ ವೈವಿಧ್ಯಮಯ ನಾಣ್ಯಗಳನ್ನು ಹೊರತರಲು ಕಾರಣವಾಯಿತು.

ವಿವಿಧ ಲೋಹಗಳನ್ನು ವಿವಿಧ ಉದ್ದೇಶಕ್ಕಾಗಿ ಬಳಸಲಾಗುತ್ತಿತ್ತು. ತಾಮ್ರ, ಬೆಳ್ಳಿ ಮತ್ತು ಚಿನ್ನವು ಇವುಗಳಲ್ಲಿ ಸಾಮಾನ್ಯವೆಂಬಂತಿತ್ತು. ನಾಣ್ಯಗಳು ವಹಿವಾಟಿನ ಉದ್ದೇಶಕ್ಕಾಗಿ ಮಾತ್ರವಲ್ಲದೆ, ಅನೇಕ ಸಂದರ್ಭಗಳಲ್ಲಿ ರಾಜಮನೆತನದ ಅಧಿಕಾರವನ್ನು ಸ್ಥಾಪಿಸುವ, ಮಹತ್ವದ ಐತಿಹಾಸಿಕ ಬೆಳವಣಿಗೆಗಳನ್ನು ಸ್ಮರಿಸುವ ಅಥವಾ ಆಡಳಿತದ ನೀತಿಗಳು ಮತ್ತು ತತ್ವಗಳನ್ನು ಬಿಂಬಿಸುತ್ತವೆ. ಮುಂಬೈಯಲ್ಲಿರುವ ರಿಸರ್ವ್​ ಬ್ಯಾಂಕ್​ನ ಹಣಕಾಸು ವಸ್ತುಸಂಗ್ರಹಾಲಯದಲ್ಲಿ ಲಭ್ಯವಿರುವ ಮಾದರಿಗಳ ಚಿತ್ರವನ್ನು ಬಳಸಿ ನಾಣ್ಯದ (ಕರೆನ್ಸಿ) ರೂಪಾಂತರದ ಕತೆಯನ್ನು ನಾವು ಇಲ್ಲಿ ತೋರಿಸುತ್ತೇವೆ ಎಂದು ಆರ್​ಬಿಐ ಬಿಡುಗಡೆ ಮಾಡಿದ 2021 ವರ್ಷದ ಕ್ಯಾಲೆಂಡರ್​ನ ಮುನ್ನುಡಿಯಲ್ಲಿ ಬರೆಯಲಾಗಿದೆ.

ಜನವರಿಯಲ್ಲಿ ಕ್ಯಾಲೆಂಡರ್ ಪುಟದಲ್ಲಿ ಕೆತ್ತಲ್ಪಟ್ಟ ನಾಣ್ಯಗಳ ಪರಿಚಯ ನೀಡಿದ್ದು, ಫೆಬ್ರುವರಿಯಲ್ಲಿ ಮೊದಲ ನಾಣ್ಯ, ಮಾರ್ಚ್ ತಿಂಗಳಲ್ಲಿ ಕುಷಾಣ ಮತ್ತು ಗುಪ್ತರ ಕಾಲದ ನಾಣ್ಯಗಳು, ಏಪ್ರಿಲ್ ತಿಂಗಳಿನಲ್ಲಿ ಪ್ರಾರಂಭಿಕ ಮಧ್ಯಕಾಲೀನ ಉತ್ತರಭಾರತದಲ್ಲಿದ್ದ ನಾಣ್ಯಗಳು, ಮೇ ತಿಂಗಳಲ್ಲಿ ಆರಂಭಿಕ ಮಧ್ಯಕಾಲೀನ ದಕ್ಷಿಣ ಭಾರತದಲ್ಲಿದ್ದ ನಾಣ್ಯಗಳು ಮತ್ತು ಜೂನ್ ತಿಂಗಳಲ್ಲಿ ದೆಹಲಿ ಸುಲ್ತಾನ್ ಮತ್ತು ಇತರರ ಕಾಲದಲ್ಲಿದ್ದ ನಾಣ್ಯಗಳ ಪರಿಚಯ ನೀಡಲಾಗಿದೆ.

ಜುಲೈ ತಿಂಗಳಲ್ಲಿ ಪ್ರಾಂತೀಯ ಸುಲ್ತಾನರು ಮತ್ತು ವಿಜಯನಗರ ಸಾಮ್ರಾಜ್ಯದಲ್ಲಿರುವ, ಆಗಸ್ಟ್ ತಿಂಗಳ ಪುಟದಲ್ಲಿ ಮೊಘಲ್, ಮರಾಠ, ಅವಧ್, ಸಪ್ಟೆಂಬರ್ ತಿಂಗಳ ಪುಟದಲ್ಲಿ ಮೈಸೂರು ಸುಲ್ತಾನರು ಮತ್ತು ಒಡೆಯರ ಕಾಲದ ನಾಣ್ಯಗಳು, ಅಕ್ಟೋಬರ್ ಪುಟದಲ್ಲಿ ಈಶಾನ್ಯ ರಾಜ್ಯ, ಕಛ್ ಮತ್ತು ಹೈದರಾಬಾದ್, ನವೆಂಬರ್​ನಲ್ಲಿ ಇಂಡೊ-ಯುರೋಪಿಯನ್, ಡಿಸೆಂಬರ್ ತಿಂಗಳ ಪುಟದಲ್ಲಿ ಈಸ್ಟ್ ಇಂಡಿಯಾ ಕಂಪನಿ ಮತ್ತು ಬ್ರಿಟಿಷ್ ಇಂಡಿಯಾದ ನಾಣ್ಯಗಳ ಪರಿಚಯ ಇದೆ.

ಕಾಂಗ್ರೆಸ್ ಮುಖಂಡರಿಗೆ ಹೈಕಮಾಂಡ್ ನೀಡುವ ಆದೇಶವೇ ಅಂತಿಮ: ಪರಮೇಶ್ವರ್
ಕಾಂಗ್ರೆಸ್ ಮುಖಂಡರಿಗೆ ಹೈಕಮಾಂಡ್ ನೀಡುವ ಆದೇಶವೇ ಅಂತಿಮ: ಪರಮೇಶ್ವರ್
ನಕ್ಸಲ್ ನಾಯಕ ವಿಕ್ರಂಗೌಡನ ಎನ್ಕೌಂಟರ್ ಸಹ ಸಂಶಯ ಹುಟ್ಟಿಸುತ್ತಿದೆ: ಅಣ್ಣಾಮಲೈ
ನಕ್ಸಲ್ ನಾಯಕ ವಿಕ್ರಂಗೌಡನ ಎನ್ಕೌಂಟರ್ ಸಹ ಸಂಶಯ ಹುಟ್ಟಿಸುತ್ತಿದೆ: ಅಣ್ಣಾಮಲೈ
ಮುಡಾ ಅಧಿಕಾರಿಗಳು ತಾಯಿಯ ಒಡಲನ್ನು ಬಗೆಯುತ್ತಿದ್ದಾರೆ: ಸ್ನೇಹಮಯಿ ಕೃಷ್ಣ
ಮುಡಾ ಅಧಿಕಾರಿಗಳು ತಾಯಿಯ ಒಡಲನ್ನು ಬಗೆಯುತ್ತಿದ್ದಾರೆ: ಸ್ನೇಹಮಯಿ ಕೃಷ್ಣ
ದಾಸರಹಳ್ಳಿ ವಲಯ ಕಚೇರಿ ಇಂಜನೀಯರ್ ಯದುಕೃಷ್ಣ ಸಿಕ್ಕಿಬಿದ್ದ ಅಧಿಕಾರಿ
ದಾಸರಹಳ್ಳಿ ವಲಯ ಕಚೇರಿ ಇಂಜನೀಯರ್ ಯದುಕೃಷ್ಣ ಸಿಕ್ಕಿಬಿದ್ದ ಅಧಿಕಾರಿ
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?