ಹಕ್ಕಿಜ್ವರದ ಬಗ್ಗೆ ಭಯಬೇಡ: ಕೇಂದ್ರ ಸಚಿವ ಗಿರಿರಾಜ್ ಸಿಂಗ್
ಕೆಲವು ಪ್ರದೇಶಗಳಲ್ಲಿ ವಲಸೆ ಹಕ್ಕಿಗಳು ಮತ್ತು ಕಾಡಿನ ಹಕ್ಕಿಗಳಿಂದಾಗಿಯೇ ಹಕ್ಕಿ ಜ್ವರ ಬಂದಿದೆ ಎಂದು ವರದಿಯಾಗಿದೆ. ಸೇವಿಸುವ ಮುನ್ನ ಮಾಂಸ ಮತ್ತು ಮೊಟ್ಟೆಯನ್ನು ಚೆನ್ನಾಗಿ ಬೇಯಿಸಿ. ಭಯಪಡುವಂಥದ್ದೇನಿಲ್ಲ ಎಂದು ಸಚಿವ ಗಿರಿರಾಜ್ ಸಿಂಗ್ ಹೇಳಿದ್ದಾರೆ.
ನವದೆಹಲಿ: ಹಕ್ಕಿಜ್ವರದ ಬಗ್ಗೆ ಭಯ ಬೇಡ ಎಂದು ಕೇಂದ್ರ ಪಶುಸಂಗೋಪನಾ ಇಲಾಖೆಯ ಸಚಿವ ಗಿರಿರಾಜ್ ಸಿಂಗ್ ಹೇಳಿದ್ದಾರೆ. ನಾಲ್ಕು ರಾಜ್ಯಗಳಲ್ಲಿ ಹಕ್ಕಿ ಜ್ವರ ಅಥವಾ ಏವಿಯನ್ ಇನ್ಫ್ಲುಯೆಂಜಾ ಬಗ್ಗೆ ಭೀತಿ ಹರಡಿದೆ. ಈ ಬಗ್ಗೆ ಭಯಬೇಡ. ಮೊಟ್ಟೆ ಮತ್ತು ಮಾಂಸಗಳನ್ನು ಚೆನ್ನಾಗಿ ಬೇಯಿಸಿ ತಿನ್ನಿ ಎಂದಿದ್ದಾರೆ.
ಕೆಲವು ಪ್ರದೇಶಗಳಲ್ಲಿ ವಲಸೆ ಹಕ್ಕಿಗಳು ಮತ್ತು ಕಾಡಿನ ಹಕ್ಕಿಗಳಿಂದಾಗಿಯೇ ಹಕ್ಕಿ ಜ್ವರ ಬಂದಿದೆ ಎಂದು ವರದಿಯಾಗಿದೆ. ಸೇವಿಸುವ ಮುನ್ನ ಮಾಂಸ ಮತ್ತು ಮೊಟ್ಟೆಯನ್ನು ಚೆನ್ನಾಗಿ ಬೇಯಿಸಿ. ಭಯಪಡುವಂತದ್ದೇನಿಲ್ಲ. ಎಲ್ಲ ರೀತಿಯ ಸಹಾಯಗಳನ್ನು ಮಾಡುತ್ತೇವೆ ಮತ್ತು ರಾಜ್ಯಗಳಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ಸಿಂಗ್ ಟ್ವೀಟ್ ಮಾಡಿದ್ದಾರೆ.
ಹಿಮಾಚಲ ಪ್ರದೇಶ, ಮದ್ಯಪ್ರದೇಶ, ಕೇರಳ ಮತ್ತು ರಾಜಸ್ಥಾನದಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದ್ದು 12 ಮೂಲಕೇಂದ್ರಗಳನ್ನು ಗುರುತಿಸಲಾಗಿದೆ. ಕಳೆದ 10 ದಿನಗಳಲ್ಲಿ ಭಾರತದಾದ್ಯಂತ ಲಕ್ಷಗಟ್ಟಲೆ ಹಕ್ಕಿಗಳು ಸತ್ತಿವೆ. ಇವುಗಳಲ್ಲಿ ಬಹುತೇಕ ಹಕ್ಕಿಗಳು ವಲಸೆ ಹಕ್ಕಿಗಳಾಗಿವೆ ಎಂದಿದ್ದಾರೆ ಸಿಂಗ್.
कुछ जगहों पर बर्ड फ़्लू से ज़्यादातर प्रवासी और जंगली पक्षियों के मरने की रिपोर्ट आयी है।मीट और अंडे को पूरी तरह पका कर खाएँ। घबराने की कोई बात नहीं है। राज्यों को सतर्क कर हर सम्भव मदद की जा रही है।
— Shandilya Giriraj Singh (@girirajsinghbjp) January 6, 2021
Status of Avian Influenza in the country https://t.co/gnZC6de0RI
— Shandilya Giriraj Singh (@girirajsinghbjp) January 6, 2021
ಹಕ್ಕಿ ಜ್ವರ ಇರುವ ರಾಜ್ಯಗಳಲ್ಲಿ ಹಕ್ಕಿಗಳನ್ನು ಕೊಲ್ಲುವ, ಹಕ್ಕಿಗಳು ಮತ್ತು ಅವುಗಳ ಮಾರಾಟವನ್ನು ನಿಯಂತ್ರಿಸುವ ಕಾರ್ಯ ಆರಂಭವಾಗಿದೆ. ಗಡಿಭಾಗದ ಜಿಲ್ಲೆಗಳಲ್ಲಿ ಹತ್ತಿರದ ರಾಜ್ಯದಿಂದ ಸೋಂಕು ತಗಲದಂತೆ ಮುಂಜಾಗ್ರತಾ ಕ್ರಮಗಳನ್ನು ವಹಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ.
ಸೋಂಕು ಹರಡುವಿಕೆ ನಿಯಂತ್ರಿಸು ಕೇಂದ್ರ ಸರ್ಕಾರ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು ದೆಹಲಿಯಲ್ಲಿ ಕಂಟ್ರೋಲ್ ರೂಂ ಆರಂಭಿಸಿದೆ.
ಹೆಚ್ಚಾಯ್ತು ಹಕ್ಕಿಜ್ವರ ಆತಂಕ.. ಮೈಸೂರು-ಕೇರಳ ಗಡಿಯಲ್ಲಿ DC ಸಿಂಧೂರಿಯಿಂದ ಕಟ್ಟೆಚ್ಚರದ ಆದೇಶ