AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅಮ್ಮನ ಬಳಿ ಹೋಗುತ್ತಿದ್ದೇನೆ’; ತಂದೆಯ ರಿವಾಲ್ವರ್‌ನಿಂದ ಗುಂಡು ಹಾರಿಸಿಕೊಂಡು 19 ವರ್ಷದ ವಿದ್ಯಾರ್ಥಿ ಆತ್ಮಹತ್ಯೆ

ಉತ್ತರ ಪ್ರದೇಶದ ಝಾನ್ಸಿಯಲ್ಲಿ 19 ವರ್ಷದ ಬಿಎ ವಿದ್ಯಾರ್ಥಿಯೊಬ್ಬ ತನ್ನ ತಂದೆಯ ಲೈಸೆನ್ಸ್ ಹೊಂದಿದ್ದ ರಿವಾಲ್ವರ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಭೀಕರ ಹಾಗೂ ಮನಕಲಕುವ ಘಟನೆ ನಡೆದಿದೆ. ಮೃತನನ್ನು ಲವ ಪಟೇಲ್ ಎಂಬ 19 ವರ್ಷದ ಯುವಕ ಎಂದು ಗುರುತಿಸಲಾಗಿದೆ. ಈ ಘಟನೆ ನಡೆಯುವ ಮುನ್ನ ಯುವಕ ತನ್ನ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿದ್ದ ಭಾವುಕ ವೀಡಿಯೊ ಸಂದೇಶವೊಂದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮಗ ಕಳೆದ ಕೆಲವು ದಿನಗಳಿಂದ ತೀವ್ರ ಮಾನಸಿಕ ಒತ್ತಡದಲ್ಲಿದ್ದನು, ರಾತ್ರಿ ನಿದ್ರೆ ಬಾರದೆ ಔಷಧ ತೆಗೆದುಕೊಳ್ಳುತ್ತಿದ್ದನು ಎಂದು ತಂದೆ ಪೊಲೀಸರಿಗೆ ತಿಳಿಸಿದ್ದಾರೆ.

'ಅಮ್ಮನ ಬಳಿ ಹೋಗುತ್ತಿದ್ದೇನೆ'; ತಂದೆಯ ರಿವಾಲ್ವರ್‌ನಿಂದ ಗುಂಡು ಹಾರಿಸಿಕೊಂಡು 19 ವರ್ಷದ ವಿದ್ಯಾರ್ಥಿ ಆತ್ಮಹತ್ಯೆ
ಸಾಂದರ್ಭಿಕ ಚಿತ್ರImage Credit source: TV9
ಸುಷ್ಮಾ ಚಕ್ರೆ
|

Updated on: Oct 27, 2026 | 7:46 PM

Share

ಝಾನ್ಸಿ, ಅಕ್ಟೋಬರ್ 27: ಉತ್ತರ ಪ್ರದೇಶದ ಝಾನ್ಸಿ ಜಿಲ್ಲೆಯ ಗುರ್ಸರಾಯ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನಕಲಕುವ ಘಟನೆಯೊಂದು ನಡೆದಿದೆ. 19 ವರ್ಷದ ಬಿಎ ಪದವಿ ವಿದ್ಯಾರ್ಥಿಯೊಬ್ಬ ತನ್ನ ತಂದೆಯ ಲೈಸೆನ್ಸ್ ಹೊಂದಿದ್ದ ರಿವಾಲ್ವರ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಮೃತನನ್ನು ನಿವೃತ್ತ ಪಿಡಿಒ ಪುತ್ರ ಲವ ಪಟೇಲ್ ಎಂದು ಗುರುತಿಸಲಾಗಿದೆ. ಭಾನುವಾರ ಬೆಳಿಗ್ಗೆ ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿಕೊಂಡು ಯುವಕ ಈ ಕಠಿಣ ನಿರ್ಧಾರ ತೆಗೆದುಕೊಂಡಿದ್ದಾನೆ.

ಬೆಳಿಗ್ಗೆ ತಂದೆ ಮತ್ತು ಕುಟುಂಬಸ್ಥರು ಹೊಲದ ಕೆಲಸಕ್ಕೆ ತೆರಳಿದ್ದಾಗ ಲವ ಮನೆಯಲ್ಲಿ ಒಬ್ಬನೇ ಇದ್ದನು. ಸುಮಾರು 10 ಗಂಟೆಯ ಸುಮಾರಿಗೆ ಮನೆಯ ಒಳಗಿನಿಂದ ಭಾರಿ ಗುಂಡಿನ ಸದ್ದು ಕೇಳಿಬಂದಿದೆ. ಸಂಶಯಗೊಂಡ ನೆರೆಹೊರೆಯವರು ಓಡಿ ಬಂದಾಗ ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ನೆರೆಹೊರೆಯವರು ತಕ್ಷಣವೇ ಆತನ ತಂದೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ತಂದೆ ಧಾವಿಸಿ ಬಂದು ಬಾಗಿಲು ತೆಗೆದು ನೋಡಿದಾಗ ಯುವಕ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ. ಪಕ್ಕದಲ್ಲೇ ಲೈಸೆನ್ಸ್ಡ್ ಪಿಸ್ತೂಲ್ ಬಿದ್ದಿತ್ತು. ತಕ್ಷಣ ಆತನನ್ನು ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರೂ, ವೈದ್ಯರು ಆತ ಮೃತಪಟ್ಟಿರುವುದಾಗಿ ದೃಢಪಡಿಸಿದರು.

ಇದನ್ನೂ ಓದಿ: ಅಸ್ಸಾಂನ ಗುವಾಹಟಿಯಲ್ಲಿ ಭೀಕರ ಗುಂಡಿನ ದಾಳಿ! ಹೋಟೆಲ್ ಬಿಲಾಸ್ ಇನ್ ಒಡತಿ ಸೇರಿ ಐವರ ಸಾವು, ಆರೋಪಿ ಅರೆಸ್ಟ್

ವೀಡಿಯೊ ಸಂದೇಶದಲ್ಲೇನಿತ್ತು?:

ಈ ಘಟನೆಗೂ ಮುನ್ನ ಯುವಕ ತನ್ನ ಮೊಬೈಲ್‌ನಲ್ಲಿ ಭಾವುಕ ವೀಡಿಯೊ ಒಂದನ್ನು ರೆಕಾರ್ಡ್ ಮಾಡಿದ್ದು, “ಅಪ್ಪಾ, ಹಣವನ್ನು ನಿಮ್ಮ ಬಳಿಯೇ ಇಟ್ಟುಕೊಳ್ಳಿ, ನಾನು ಅಮ್ಮನ ಬಳಿಗೆ ಹೋಗುತ್ತಿದ್ದೇನೆ” ಎಂದು ಹೇಳಿದ್ದಾನೆ. ತನ್ನ ನಿರ್ಧಾರಕ್ಕೆ ಯಾರೂ ಕಾರಣರಲ್ಲ ಎಂದು ಆತ ಸ್ಪಷ್ಟಪಡಿಸಿದ್ದಾನೆ.

ಈ ಯುವಕನ ತಾಯಿ 2009ರಲ್ಲೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ತಾಯಿಯ ಸಾವಿನ ನಂತರ ಯುವಕ ತೀವ್ರ ಮಾನಸಿಕವಾಗಿ ಕುಗ್ಗಿದ್ದನು ಮತ್ತು ಕಳೆದ ಕೆಲವು ದಿನಗಳಿಂದ ತೀವ್ರ ಮಾನಸಿಕ ಒತ್ತಡ ಹಾಗೂ ನಿದ್ರಾಹೀನತೆಯಿಂದ ಬಳಲುತ್ತಿದ್ದನು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಆತನ ತಾಯಿ ಮೃತಪಟ್ಟ ಬಳಿಕ ಅವನ ತಂದೆ 2ನೇ ಮದುವೆಯಾಗಿದ್ದರು. ಈ ಆತ್ಮಹತ್ಯೆ ಪ್ರಕರಣದ ಕುರಿತು ಗುರ್ಸರಾಯ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಫೋರೆನ್ಸಿಕ್ ತಜ್ಞರ ನೆರವಿನೊಂದಿಗೆ ತನಿಖೆ ಮುಂದುವರಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
ಸ್ಟಿಂಗ್ ಚರ್ಚೆ ನಡುವೆ ಕುಮಾರಸ್ವಾಮಿ ಭೇಟಿಯಾದ ರಾಜೇಂದ್ರ ರಾಜಣ್ಣ
ಸ್ಟಿಂಗ್ ಚರ್ಚೆ ನಡುವೆ ಕುಮಾರಸ್ವಾಮಿ ಭೇಟಿಯಾದ ರಾಜೇಂದ್ರ ರಾಜಣ್ಣ
ಧನ್ವೀರ್ ವಿವಾದ: ದರ್ಶನ್ ನೋಡಲು ಝೈದ್ ಖಾನ್ ಜೊತೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಧನ್ವೀರ್ ವಿವಾದ: ದರ್ಶನ್ ನೋಡಲು ಝೈದ್ ಖಾನ್ ಜೊತೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹೈಕಮಾಂಡ್ ಅಂಗಳಕ್ಕೆ ಸ್ಟಿಂಗ್ ಆಪರೇಷನ್: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿದ್ದು
ಹೈಕಮಾಂಡ್ ಅಂಗಳಕ್ಕೆ ಸ್ಟಿಂಗ್ ಆಪರೇಷನ್: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿದ್ದು
‘ಸೌಂದರ್ಯಾ ಸ್ವಯಂವರ’ದಲ್ಲಿ ನಗುವೋ ನಗು: ವಿಡಿಯೋ ನೋಡಿ
‘ಸೌಂದರ್ಯಾ ಸ್ವಯಂವರ’ದಲ್ಲಿ ನಗುವೋ ನಗು: ವಿಡಿಯೋ ನೋಡಿ
ಧನ್ವೀರ್ ಮೇಲೆ ಇಡಿ, ಐಟಿ ಇಲಾಖೆಗೆ ಕೇಸ್ ಹಾಕಿದ್ದು ಯಾಕೆ? ವಿವರಿಸಿದ ಲಾಯರ್
ಧನ್ವೀರ್ ಮೇಲೆ ಇಡಿ, ಐಟಿ ಇಲಾಖೆಗೆ ಕೇಸ್ ಹಾಕಿದ್ದು ಯಾಕೆ? ವಿವರಿಸಿದ ಲಾಯರ್
Live: ಕರ್ನಾಟಕದ ಮುಖ್ಯ ಚುನಾವಣಾ ಆಯುಕ್ತರ ಸುದ್ದಿಗೋಷ್ಠಿ ನೇರಪ್ರಸಾರ
Live: ಕರ್ನಾಟಕದ ಮುಖ್ಯ ಚುನಾವಣಾ ಆಯುಕ್ತರ ಸುದ್ದಿಗೋಷ್ಠಿ ನೇರಪ್ರಸಾರ
ಆಸ್ಪತ್ರೆಗೆ ದಾಖಲಾದ ಡಿಸಿಎಂ ಪರಮೇಶ್ವರ್; ಆರೋಗ್ಯ ವಿಚಾರಿಸಿದ ಸಿಎಂ ಡಿಕೆಶಿ
ಆಸ್ಪತ್ರೆಗೆ ದಾಖಲಾದ ಡಿಸಿಎಂ ಪರಮೇಶ್ವರ್; ಆರೋಗ್ಯ ವಿಚಾರಿಸಿದ ಸಿಎಂ ಡಿಕೆಶಿ
ಅರ್ನಾಬ್ ಅಬ್ಬರ: ಕಾಕಿನಾಡಕ್ಕೆ ರೆಡ್​​ ಅಲರ್ಟ್
ಅರ್ನಾಬ್ ಅಬ್ಬರ: ಕಾಕಿನಾಡಕ್ಕೆ ರೆಡ್​​ ಅಲರ್ಟ್
ಬೀದರ್‌ನ 8 ವಿದ್ಯಾರ್ಥಿಗಳಿಗೆ ವಿಮಾನಯಾನದ ಉಡುಗೊರೆ ನೀಡಿದ ಶಿಕ್ಷಕ!
ಬೀದರ್‌ನ 8 ವಿದ್ಯಾರ್ಥಿಗಳಿಗೆ ವಿಮಾನಯಾನದ ಉಡುಗೊರೆ ನೀಡಿದ ಶಿಕ್ಷಕ!
ಪ್ರಮೋದಾದೇವಿ ಆರೋಪಗಳ ಬಗ್ಗೆ ಸಿಎಂ ಡಿಕೆ ಶಿವಕುಮಾರ್​​ ಏನಂದ್ರು?
ಪ್ರಮೋದಾದೇವಿ ಆರೋಪಗಳ ಬಗ್ಗೆ ಸಿಎಂ ಡಿಕೆ ಶಿವಕುಮಾರ್​​ ಏನಂದ್ರು?