ಅಕ್ರಮ ಹಣ ವರ್ಗಾವಣೆ ಪ್ರಕರಣ: ಸಿಬಿಐನ ಮಾಜಿ ನ್ಯಾಯಾಧೀಶ ಸುಧೀರ್ ಪರ್ಮಾರ್ ಬಂಧನ

|

Updated on: Aug 11, 2023 | 6:10 PM

Sudhir Parmar Arrested: ಎಸಿಬಿಯ ಎಫ್‌ಐಆರ್‌ನ ಪ್ರಕಾರ, ಏಪ್ರಿಲ್ 27 ರಂದು ಅಮಾನತುಗೊಂಡ ಪರ್ಮಾರ್ ಮೇಲೆ ಏಪ್ರಿಲ್ 17 ರಂದು ಆರೋಪ ದಾಖಲಾದಾಗ ಅವರು ರಿಯಲ್ ಎಸ್ಟೇಟ್ ಡೆವಲಪರ್‌ಗಳಾದ ರೂಪ್ ಬನ್ಸಾಲ್ ಮತ್ತು ಅವರ ಸಹೋದರ M3M ನ ಬಸಂತ್ ಬನ್ಸಾಲ್ ಮತ್ತು IREO ಗ್ರೂಪ್‌ನ ಲಲಿತ್ ಗೋಯಲ್ ಪರ ಒಲವು ತೋರಿದ್ದಾರೆ ಎಂದು ಆರೋಪಿಸಲಾಗಿದೆ. ಬನ್ಸಾಲ್ ಸಹೋದರರು, ಗೋಯಲ್ ಮತ್ತು ನ್ಯಾಯಾಂಗ ಅಧಿಕಾರಿಯ ಸೋದರಳಿಯ ಅಜಯ್ ಪರ್ಮಾರ್ ಅವರನ್ನು ಸಹ ಇಡಿ ಈ ಹಿಂದೆ ಬಂಧಿಸಿತ್ತು.

ಅಕ್ರಮ ಹಣ ವರ್ಗಾವಣೆ ಪ್ರಕರಣ: ಸಿಬಿಐನ ಮಾಜಿ ನ್ಯಾಯಾಧೀಶ ಸುಧೀರ್ ಪರ್ಮಾರ್ ಬಂಧನ
ಸುಧೀರ್ ಪರ್ಮಾರ್
Follow us on

ದೆಹಲಿ ಆಗಸ್ಟ್ 11: ಅಕ್ರಮ ಹಣ ವರ್ಗಾವಣೆ (money laundering case) ಪ್ರಕರಣದಲ್ಲಿ ಸಿಬಿಐನ ಮಾಜಿ ವಿಶೇಷ ನ್ಯಾಯಾಧೀಶ ಸುಧೀರ್ ಪರ್ಮಾರ್ (Sudhir Parmar) ಅವರನ್ನು ಬಂಧಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.  ಪರ್ಮಾರ್ ವಿರುದ್ಧ ಹರಿಯಾಣ ಭ್ರಷ್ಟಾಚಾರ ವಿರೋಧಿ ಬ್ಯೂರೋ (ACB) ದಾಖಲಿಸಿರುವ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ಇಡಿ ತನಿಖೆ ನಡೆಸುತ್ತಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಶ್ರೇಣಿಯ ನ್ಯಾಯಾಂಗ ಅಧಿಕಾರಿ ಆಗಿದ್ದ ಪರ್ಮಾರ್ ಅವರು ಅಮಾನತುಗೊಳ್ಳುವ ಮೊದಲು ವಿಶೇಷ ಪ್ರಿವೆನ್ಶನ್ ಆಫ್ ಮನಿ ಲಾಂಡರಿಂಗ್ ಆಕ್ಟ್ (ಪಿಎಂಎಲ್‌ಎ) ನ್ಯಾಯಾಲಯದ ಉಸ್ತುವಾರಿಯನ್ನು ಸಹ ಹೊಂದಿದ್ದರು.

ಜೂನ್ 13 ರಂದು ಜಾರಿ ಪ್ರಕರಣದ ಮಾಹಿತಿ ವರದಿಯನ್ನು (ECIR) ದಾಖಲಿಸಿದ ನಂತರ ಕೇಂದ್ರ ಸಂಸ್ಥೆ PMLA ತನಿಖೆಯನ್ನು ಪ್ರಾರಂಭಿಸಿದೆ. ECIR ಏಪ್ರಿಲ್ 17 ರಂದು ಎಸಿಬಿ ದಾಖಲಿಸಿದ ಪ್ರಥಮ ಮಾಹಿತಿ ವರದಿಯನ್ನು (ಎಫ್‌ಐಆರ್) ಆಧರಿಸಿದೆ. ಇದರಲ್ಲಿ ಎಸಿಬಿ ಸೆಕ್ಷನ್ 7, 8, 11 ಮತ್ತು 13 ಭ್ರಷ್ಟಾಚಾರ ಕಾಯಿದೆ ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 120-ಬಿ ಸಾರ್ವಜನಿಕ ಸೇವಕ ಲಂಚಕ್ಕೆ ಸಂಬಂಧಿಸಿದ ಅಪರಾಧಗಳಿಗೆ, ಸಾರ್ವಜನಿಕ ಸೇವಕ ಅನಗತ್ಯ ಲಾಭವನ್ನು ಪಡೆದುಕೊಳ್ಳಲು, ಸಾರ್ವಜನಿಕ ಸೇವಕನಿಂದ ಕ್ರಿಮಿನಲ್ ದುರ್ನಡತೆ ಮತ್ತು ಕ್ರಿಮಿನಲ್ ಪಿತೂರಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಎಸಿಬಿಯ ಎಫ್‌ಐಆರ್‌ನ ಪ್ರಕಾರ, ಏಪ್ರಿಲ್ 27 ರಂದು ಅಮಾನತುಗೊಂಡ ಪರ್ಮಾರ್ ಮೇಲೆ ಏಪ್ರಿಲ್ 17 ರಂದು ಆರೋಪ ದಾಖಲಾದಾಗ ಅವರು ರಿಯಲ್ ಎಸ್ಟೇಟ್ ಡೆವಲಪರ್‌ಗಳಾದ ರೂಪ್ ಬನ್ಸಾಲ್ ಮತ್ತು ಅವರ ಸಹೋದರ M3M ನ ಬಸಂತ್ ಬನ್ಸಾಲ್ ಮತ್ತು IREO ಗ್ರೂಪ್‌ನ ಲಲಿತ್ ಗೋಯಲ್ ಪರ ಒಲವು ತೋರಿದ್ದಾರೆ ಎಂದು ಆರೋಪಿಸಲಾಗಿದೆ. ಬನ್ಸಾಲ್ ಸಹೋದರರು, ಗೋಯಲ್ ಮತ್ತು ನ್ಯಾಯಾಂಗ ಅಧಿಕಾರಿಯ ಸೋದರಳಿಯ ಅಜಯ್ ಪರ್ಮಾರ್ ಅವರನ್ನು ಸಹ ಇಡಿ ಈ ಹಿಂದೆ ಬಂಧಿಸಿತ್ತು.

ಇಡಿ ವಿಶ್ವಾಸಾರ್ಹ ಮೂಲ ಮಾಹಿತಿ ಆಧಾರ ಮೇಲೆ ಇಸಿಐಆರ್ ಅನ್ನು ದಾಖಲಿಸಿದ್ದು, ವಾಟ್ಸಾಪ್ ಚಾಟ್‌ಗಳು ಮತ್ತು ಆರೋಪಿಗಳ ಆಡಿಯೊ ರೆಕಾರ್ಡಿಂಗ್‌ಗಳ ಆಧಾರದ ಮೇಲೆ ದಾಖಲಿಸಲಾಗಿದೆ. ಇದು ಗಂಭೀರ ದುಷ್ಕೃತ್ಯ, ಅಧಿಕೃತ ಸ್ಥಾನದ ದುರುಪಯೋಗ ಮತ್ತು ಬೇಡಿಕೆ/ಸ್ವೀಕಾರದ ನಿದರ್ಶನಗಳನ್ನು ಬಹಿರಂಗಪಡಿಸಿದೆ.

ಆದಾಗ್ಯೂ, ಜುಲೈ 6 ರಂದು ಪರ್ಮಾರ್ ಅವರ ಸೋದರಳಿಯ ಅಜಯ್ ಅವರು ಪಂಚಕುಲ ಪಿಎಂಎಲ್‌ಎ ನ್ಯಾಯಾಲಯದಲ್ಲಿ ಆಡಿಯೋ ರೆಕಾರ್ಡಿಂಗ್ ಮತ್ತು ವಾಟ್ಸಾಪ್ ಚಾಟ್‌ ಬಗ್ಗೆ ಪ್ರತಿಕ್ರಿಯಿಸಿದ್ದು,ಇಸಿಐಆರ್ ಸತ್ಯಗಳನ್ನು ಆಧರಿಸಿಲ್ಲ ಎಂದು ಹೇಳಿದ್ದಾರೆ. ಸುಧೀರ್ ಪರ್ಮಾರ್ ವಿರುದ್ಧ ಎಸಿಬಿಯು ಮೊಬೈಲ್ ಫೋನ್ ಸಂಭಾಷಣೆ ಮತ್ತು ಚಾಟ್‌ಗಳ ಆಧಾರದ ಮೇಲೆ ಸುಳ್ಳು ಪ್ರಕರಣ ದಾಖಲಿಸಿದೆ ಎಂದು ನ್ಯಾಯಾಲಯ ಬುಧವಾರ ವಜಾಗೊಳಿಸಿರುವ ಅರ್ಜಿಯಲ್ಲಿ ತಿಳಿಸಲಾಗಿದೆ.

ಎಸಿಬಿಯಲ್ಲಿರುವ ಮಾಹಿತಿಯು ಸುಧೀರ್ ಪರ್ಮಾರ್ ಮತ್ತು ಇನ್ನೊಬ್ಬ ವ್ಯಕ್ತಿಯ ನಡುವೆ ಅವರ ಸ್ವಂತ ಮೊಬೈಲ್ ಫೋನ್ ಮತ್ತು ಅವರ ಸೋದರಳಿಯ ಅಜಯ್ ಪರ್ಮಾರ್ ಅವರ ವಾಟ್ಸಾಪ್ ಚಾಟ್‌ನ ಸ್ಕ್ರೀನ್‌ಶಾಟ್‌ಗಳನ್ನು ಒಳಗೊಂಡಿದೆ. ಪ್ರಕರಣವನ್ನು ಪ್ರಚಾರ ಮಾಡುವ ಸಲುವಾಗಿ, ಇಡಿ ಪ್ರಕರಣದಲ್ಲಿ M3M ನ ಮಾಲೀಕರಿಗೆ ಸಹಾಯ ಮಾಡಲು ₹ 5-7 ಕೋಟಿಗೆ ಬೇಡಿಕೆಯಿಡಲಾಗಿದೆ ಎಂದು ಎಸಿಬಿ ಆರೋಪಿಸಿದೆ. ಸುಧೀರ್ ಪರ್ಮಾರ್ ಅವರು IREO ನ ಲಲಿತ್ ಗೋಯಲ್ ಅಥವಾ ಇತರ ಯಾವುದೇ ವ್ಯಕ್ತಿಗೆ ಪರವಾಗಿ ನೀಡಿದ ಆರೋಪಗಳು ಸುಳ್ಳು ಮತ್ತು ಊಹೆಗಳನ್ನು ಆಧರಿಸಿವೆ.

ಲಲಿತ್ ಗೋಯಲ್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಆಮೇಲೆ ಪೊಲೀಸ್ ಕಸ್ಟಡಿಗೆ ಮತ್ತು ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು. ಅವರ ಜಾಮೀನು ಅರ್ಜಿಯನ್ನೂ ಸುಧೀರ್ ಪರ್ಮಾರ್ ವಜಾಗೊಳಿಸಿದ್ದಾರೆ’’ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಇದನ್ನೂ ಓದಿ: ನಕಲಿ ಸಹಿ ಆರೋಪ: ರಾಜ್ಯಸಭೆಯಿಂದ ಎಎಪಿ ಸಂಸದ ರಾಘವ್ ಚಡ್ಡಾ ಅಮಾನತು

ಇಡಿ, ಎಸಿಬಿ ಚಾಟ್‌ಗಳು, ರೆಕಾರ್ಡಿಂಗ್‌ಗಳನ್ನು ಪರಿಶೀಲಿಸಲು ಕಾಳಜಿ ವಹಿಸಲಿಲ್ಲ: ಸೋದರಳಿಯ

ದೂರಿನ ಅಂಶಗಳನ್ನು ಪರಿಶೀಲಿಸದೆ ಆಧಾರರಹಿತ ಆರೋಪಗಳ ಆಧಾರದ ಮೇಲೆ ಎಸಿಬಿ ಏಪ್ರಿಲ್ 17 ರಂದು ಎಫ್‌ಐಆರ್ ದಾಖಲಿಸಿದೆ ಎಂದು ಅಜಯ್ ಪರ್ಮಾರ್ ಅವರ ಅರ್ಜಿಯಲ್ಲಿ ತಿಳಿಸಲಾಗಿದೆ. ಇಡಿ ಎಸಿಬಿ ಎಫ್‌ಐಆರ್ ಮತ್ತು ವಾಟ್ಸಾಪ್ ಚಾಟ್‌ನ ಆಪಾದಿತ ಸ್ಕ್ರೀನ್‌ಶಾಟ್ ಮತ್ತು ಕೆಲವು ಆಡಿಯೊ ರೆಕಾರ್ಡಿಂಗ್‌ಗಳ ಮೇಲೆ ಅವಲಂಬಿತವಾಗಿದೆ. ಎಸಿಬಿ ವಶದಲ್ಲಿರುವ ವಾಟ್ಸ್‌ಆ್ಯಪ್ ಚಾಟ್‌ನ ಸ್ಕ್ರೀನ್‌ಶಾಟ್ ಮತ್ತು ಆಡಿಯೋ ರೆಕಾರ್ಡಿಂಗ್‌ಗಳನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸುವ ಮತ್ತು ಮಾನಹಾನಿ ಮಾಡುವ ಉದ್ದೇಶದಿಂದ ತಿರುಚವಲಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ