AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಕಲಿ ಸಹಿ’ ಆರೋಪ: ರಾಜ್ಯಸಭೆಯಿಂದ ಎಎಪಿ ಸಂಸದ ರಾಘವ್ ಚಡ್ಡಾ ಅಮಾನತು

ರಾಘವ್ ಚಡ್ಡಾ ಅವರು ಆರೋಪಗಳನ್ನು ತಳ್ಳಿಹಾಕಿದ್ದು, ಯಾವುದೇ ಸಮಿತಿಯ ರಚನೆಗೆ ಸಂಸದರು ಹೆಸರನ್ನು ಪ್ರಸ್ತಾಪಿಸಬಹುದು. ಅವರ ಹೆಸರನ್ನು ಪ್ರಸ್ತಾಪಿಸಿದ ವ್ಯಕ್ತಿಯ ಸಹಿ ಅಥವಾ ಲಿಖಿತ ಒಪ್ಪಿಗೆ ಅಗತ್ಯವಿಲ್ಲ ಎಂದು ಹೇಳಿದರು. "ನಾನು ಹುಟ್ಟುಹಬ್ಬವನ್ನು ಆಯೋಜಿಸಿ 10 ಜನರನ್ನು ಆಹ್ವಾನಿಸುತ್ತೇನೆ ಎಂದು ಭಾವಿಸೋಣ. ಅವರಲ್ಲಿ ಎಂಟು ಮಂದಿ ಬರುತ್ತಾರೆ. ಇಬ್ಬರು ನನ್ನ ಆಹ್ವಾನವನ್ನು ಸ್ವೀಕರಿಸುವುದಿಲ್ಲ. ಬದಲಿಗೆ ಅವರು ನನ್ನಲ್ಲಿ 'ನಿಮ್ಮ ಹುಟ್ಟುಹಬ್ಬಕ್ಕೆ ನಮ್ಮನ್ನು ಆಹ್ವಾನಿಸಲು ನಿಮಗೆ ಎಷ್ಟು ಧೈರ್ಯ?'ಎಂದು ಗದರಿಸುತ್ತಾರೆ. ಇಲ್ಲಿ ಆಗಿದ್ದು ಇದೇ ಎಂದಿದ್ದಾರೆ.

'ನಕಲಿ ಸಹಿ' ಆರೋಪ: ರಾಜ್ಯಸಭೆಯಿಂದ ಎಎಪಿ ಸಂಸದ ರಾಘವ್ ಚಡ್ಡಾ ಅಮಾನತು
ರಾಘವ್ ಚಡ್ಡಾ
ರಶ್ಮಿ ಕಲ್ಲಕಟ್ಟ
|

Updated on: Aug 11, 2023 | 4:48 PM

Share

ದೆಹಲಿ ಆಗಸ್ಟ್ 11: ಐವರು ರಾಜ್ಯಸಭಾ ಸಂಸದರ (Rajya Sabha) ನಕಲಿ ಸಹಿ ಮಾಡಿದ ಆರೋಪ ಹೊತ್ತಿರುವ (forging signatures) ಎಎಪಿ ಸಂಸದ ರಾಘವ್ ಚಡ್ಡಾ (Raghav Chadha) ಅವರನ್ನು ಶುಕ್ರವಾರ ರಾಜ್ಯಸಭೆಯಿಂದ ಅಮಾನತುಗೊಳಿಸಲಾಗಿದೆ. ಅವರ ವಿರುದ್ಧದ ಪ್ರಕರಣದ ತನಿಖೆಯ ವಿಶೇಷಾಧಿಕಾರಗಳ ಸಮಿತಿಯು ತನ್ನ ವರದಿಯನ್ನು ಸಲ್ಲಿಸುವವರೆಗೆ ಅಮಾನತು ಮುಂದುವರಿಯಲಿದೆ. ರಾಘವ್ ಚಡ್ಡಾ ಅವರು ಮಾಡಿದ್ದು ಅಕ್ರಮ ಎಂದು ಪಿಯೂಷ್ ಗೋಯಲ್ ಅವರು ಅಮಾನತುಗೊಳಿಸುವ ಪ್ರಸ್ತಾಪವನ್ನು ಮಂಡಿಸಿದರು. ಚಡ್ಡಾ ಅವರ ನಡವಳಿಕೆಯು ಅನಿರೀಕ್ಷಿತ ಮತ್ತು ಸಂಸತ್ತಿನ ಸದಸ್ಯರಿಗೆ ತಕ್ಕುದಾದುದು ಅಲ್ಲ.  ಚಡ್ಡಾ ಅವರು ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಗೋಯಲ್ ಹೇಳಿದ್ದಾರೆ.

ರಾಘವ್ ಚಡ್ಡಾ ಅವರು ಸದನದಲ್ಲಿ ಮಂಡಿಸಿದ ಆಯ್ಕೆ ಸಮಿತಿಯಲ್ಲಿ ತಮ್ಮ ಒಪ್ಪಿಗೆಯಿಲ್ಲದೆ ತಮ್ಮ ಹೆಸರನ್ನು ಸೇರಿಸಲಾಗಿದೆ ಎಂದು ಐವರು ರಾಜ್ಯಸಭಾ ಸಂಸದರಾದ ಬಿಜೆಪಿಯ ಎಸ್ ಫಾಂಗ್ನಾನ್ ಕೊನ್ಯಾಕ್, ನರಹರಿ ಅಮೀನ್ ಮತ್ತು ಸುಧಾಂಶು ತ್ರಿವೇದಿ, ಎಐಎಡಿಎಂಕೆಯ ಎಂ ತಂಬಿದುರೈ ಮತ್ತು ಬಿಜೆಡಿಯ ಸಸ್ಮಿತ್ ಪಾತ್ರ ಹೇಳಿದ್ದಾರೆ.

ರಾಘವ್ ಚಡ್ಡಾ ಅವರು ಆರೋಪಗಳನ್ನು ತಳ್ಳಿಹಾಕಿದ್ದು, ಯಾವುದೇ ಸಮಿತಿಯ ರಚನೆಗೆ ಸಂಸದರು ಹೆಸರನ್ನು ಪ್ರಸ್ತಾಪಿಸಬಹುದು. ಅವರ ಹೆಸರನ್ನು ಪ್ರಸ್ತಾಪಿಸಿದ ವ್ಯಕ್ತಿಯ ಸಹಿ ಅಥವಾ ಲಿಖಿತ ಒಪ್ಪಿಗೆ ಅಗತ್ಯವಿಲ್ಲ ಎಂದು ಹೇಳಿದರು. “ನಾನು ಹುಟ್ಟುಹಬ್ಬವನ್ನು ಆಯೋಜಿಸಿ 10 ಜನರನ್ನು ಆಹ್ವಾನಿಸುತ್ತೇನೆ ಎಂದು ಭಾವಿಸೋಣ. ಅವರಲ್ಲಿ ಎಂಟು ಮಂದಿ ಬರುತ್ತಾರೆ. ಇಬ್ಬರು ನನ್ನ ಆಹ್ವಾನವನ್ನು ಸ್ವೀಕರಿಸುವುದಿಲ್ಲ. ಬದಲಿಗೆ ಅವರು ನನ್ನಲ್ಲಿ ‘ನಿಮ್ಮ ಹುಟ್ಟುಹಬ್ಬಕ್ಕೆ ನಮ್ಮನ್ನು ಆಹ್ವಾನಿಸಲು ನಿಮಗೆ ಎಷ್ಟು ಧೈರ್ಯ?’ಎಂದು ಗದರಿಸುತ್ತಾರೆ. ಇಲ್ಲಿ ಆಗಿದ್ದು ಇದೇ. ನಾನು ಅವರನ್ನು (ಸಂಸದರನ್ನು) ಸಮಿತಿಯ ಭಾಗವಾಗಿರಲು ಆಹ್ವಾನಿಸಿದ್ದೇನೆ ಎಂದು ರಾಘವ್ ಚಡ್ಡಾ ಹೇಳಿದರು.

ರಾಘವ್ ಚಡ್ಡಾ ಅವರು ತಮ್ಮ ಅನೈತಿಕ ನಡವಳಿಕೆಗೆ ಪಶ್ಚಾತ್ತಾಪ ವ್ಯಕ್ತಪಡಿಸುವ ಬದಲು, ಸದನದ ಹೊರಗೆ ಪತ್ರಿಕಾಗೋಷ್ಠಿಯಲ್ಲಿ ತಮ್ಮ ಸಹವರ್ತಿ ಸಂಸದರು ತಮ್ಮ ಹೆಸರನ್ನು ಸೇರಿಸಿದ್ದಕ್ಕಾಗಿ ಎತ್ತಿದ ಆಕ್ಷೇಪಣೆಗಳನ್ನು ಲೇವಡಿ ಮಾಡಿದ್ದಾರೆ ಎಂದು ಮೇಲ್ಮನೆಯಲ್ಲಿ ಚಡ್ಡಾ ವಿರುದ್ಧ ಪ್ರಸ್ತಾಪವನ್ನು ಮಂಡಿಸಿದ ಗೋಯಲ್ ಹೇಳದ್ದಾರೆ. ಈ ವಿಷಯದ ಕುರಿತು ರಾಘವ್ ಚಡ್ಡಾ ಟ್ವೀಟ್ ಅನ್ನು ಉಲ್ಲೇಖಿಸಿದ ಗೋಯಲ್, ಇದು ಸಂಸದೀಯ ಸದಸ್ಯರಿಗೆ ಯೋಗ್ಯವಲ್ಲ ಎಂದು ಹೇಳಿದರು. ರಾಘವ್ ಚಡ್ಡಾ ಅವರು ಹುಟ್ಟುಹಬ್ಬದ ಪಾರ್ಟಿಯೊಂದಿಗೆ ಆಯ್ಕೆ ಸಮಿತಿಗೆ ಸದಸ್ಯರ ಹೆಸರನ್ನು ಸೇರಿಸುವುದನ್ನು ಸಮೀಕರಿಸಿದ್ದು ಸರಿಯಲ್ಲ ಎಂದಿದ್ದಾರೆ.

ಇದನ್ನೂ ಓದಿ: ಗುಂಪು ಹತ್ಯೆಗೆ ಮರಣದಂಡನೆ: ಲೋಕಸಭೆಯಲ್ಲಿ ಅಪರಾಧ ಕಾನೂನು ತಿದ್ದುಪಡಿ ಮಸೂದೆ ಮಂಡಿಸಿದ ಅಮಿತ್ ಶಾ

ಅಶಿಸ್ತಿನ ವರ್ತನೆಯಿಂದಾಗಿ ಸಂಜಯ್ ಸಿಂಗ್ ಅವರನ್ನು ಅಮಾನತುಗೊಳಿಸಲಾಗಿದೆ. ಪ್ರಶ್ನೆಗಳನ್ನು ಕೇಳಿದ್ದಕ್ಕಾಗಿ ನನ್ನ ಸಹೋದ್ಯೋಗಿ ಸಂಜಯ್ ಸಿಂಗ್ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ರಾಘವ್ ಚಡ್ಡಾ ಹೇಳಿದ್ದಾರೆ . ಆದರೆ ಅವರನ್ನು ಅಮಾನತು ಮಾಡಿದ್ದು ಅನುಚಿತ ವರ್ತನೆಗಾಗಿ ಎಂದಿದ್ದಾರೆ ಗೋಯಲ್.

ರಾಘವ್ ಚಡ್ಡಾ ವಿರುದ್ಧದ ಆರೋಪಗಳೇನು?

ದೆಹಲಿ ಸೇವಾ ಮಸೂದೆಯನ್ನು ಆಯ್ಕೆ ಸಮಿತಿಗೆ ಕಳುಹಿಸುವ ಪ್ರಸ್ತಾವನೆಯಲ್ಲಿ ರಾಘವ್ ಚಡ್ಡಾ ಅವರು ಐವರು ಸಂಸದರ ಸಹಿಯನ್ನು ನಕಲಿ ಮಾಡಿದ್ದಾರೆ ಎಂದು ಸೋಮವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಆರೋಪಿಸಿದ್ದಾರೆ. ಎಎಪಿ ಆರೋಪವನ್ನು ತಳ್ಳಿಹಾಕಿದ್ದು ಯಾವುದೇ ಸಹಿ ಇಲ್ಲ. ಯಾವುದೇ ಸಹಿ ಅಗತ್ಯವಿಲ್ಲದ ಕಾರಣ ಯಾವುದೇ ನಕಲಿ ಸಹಿಯನ್ನು ಒಳಗೊಂಡಿಲ್ಲ. ಅದರಲ್ಲಿ ಸಂಸದರ ಹೆಸರನ್ನು ಮಾತ್ರ ನೀಡಬೇಕು.ಆ ಐವರು ಸಂಸದರ ಹೆಸರನ್ನು ಉತ್ತಮ ಉದ್ದೇಶದಿಂದ ನೀಡಲಾಗಿದೆ ಎಂದು ಹೇಳಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಆನ್‍ಲೈನ್ ಗೇಮ್‍ನಲ್ಲಿ ಹಣ ಕಳೆದುಕೊಂಡ:ವಿಡಿಯೋ ಮಾಡಿಟ್ಟು ನೇಣಿಗೆ ಶರಣಾದ
ಆನ್‍ಲೈನ್ ಗೇಮ್‍ನಲ್ಲಿ ಹಣ ಕಳೆದುಕೊಂಡ:ವಿಡಿಯೋ ಮಾಡಿಟ್ಟು ನೇಣಿಗೆ ಶರಣಾದ
ಸಿಎಂ ಬದಲಾವಣೆ ಟಿವಿ ಡಿಬೇಟ್​ಗಳನ್ನು ವೀಕ್ಷಿಸುತ್ತಿದ್ದೇನೆ: ಹರಿಪ್ರಸಾದ್
ಸಿಎಂ ಬದಲಾವಣೆ ಟಿವಿ ಡಿಬೇಟ್​ಗಳನ್ನು ವೀಕ್ಷಿಸುತ್ತಿದ್ದೇನೆ: ಹರಿಪ್ರಸಾದ್
ಜನರಿಗೆ ತಮ್ಮ ಮನೆಯಲ್ಲೇ ಭೂದಾಖಲೆಗಳು ಸಿಗುವಂತಾಗಬೇಕು: ಕೃಷ್ಣ ಭೈರೇಗೌಡ
ಜನರಿಗೆ ತಮ್ಮ ಮನೆಯಲ್ಲೇ ಭೂದಾಖಲೆಗಳು ಸಿಗುವಂತಾಗಬೇಕು: ಕೃಷ್ಣ ಭೈರೇಗೌಡ
ಆಸ್ಪತ್ರೆಯಲ್ಲಿ ಡೇಟಾ ಆಪರೇಟರ್ ಆಗಿದ್ದ ಹರೀಶ್​ಗೆ ಮದುವೆ ಇಷ್ಟವಿರಲಿಲ್ಲವೇ?
ಆಸ್ಪತ್ರೆಯಲ್ಲಿ ಡೇಟಾ ಆಪರೇಟರ್ ಆಗಿದ್ದ ಹರೀಶ್​ಗೆ ಮದುವೆ ಇಷ್ಟವಿರಲಿಲ್ಲವೇ?
ಹಾಸನ ವ್ಯಕ್ತಿಯ ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟಕ ಅಂಶ ಬಯಲು
ಹಾಸನ ವ್ಯಕ್ತಿಯ ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟಕ ಅಂಶ ಬಯಲು
ಕೆಪಿಸಿಸಿಯಿಂದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ದೂರು
ಕೆಪಿಸಿಸಿಯಿಂದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ದೂರು
ಇಬ್ಬರು ದಿಗ್ಗಜರ ಬೌಲಿಂಗ್ ಶೈಲಿಯನ್ನು ನಕಲು ಮಾಡಿದ ಕಿಶನ್
ಇಬ್ಬರು ದಿಗ್ಗಜರ ಬೌಲಿಂಗ್ ಶೈಲಿಯನ್ನು ನಕಲು ಮಾಡಿದ ಕಿಶನ್
ಯಶ್ ಅಭಿಮಾನಿಗಳಿಗೆ ತುಂಬಾ ಇಷ್ಟ ಆಯ್ತು ‘ರಾಮಾಯಣ’ ಸಿನಿಮಾ ಮೊದಲ ಗ್ಲಿಂಪ್ಸ್
ಯಶ್ ಅಭಿಮಾನಿಗಳಿಗೆ ತುಂಬಾ ಇಷ್ಟ ಆಯ್ತು ‘ರಾಮಾಯಣ’ ಸಿನಿಮಾ ಮೊದಲ ಗ್ಲಿಂಪ್ಸ್
ಸಿಎಂ ವಿರುದ್ಧ ಬರ್ಮಣಿ ದೂರು ಸಲ್ಲಿಸಿದ್ದರೆ ಚೆನ್ನಾಗಿರುತಿತ್ತು: ಯತ್ನಾಳ್
ಸಿಎಂ ವಿರುದ್ಧ ಬರ್ಮಣಿ ದೂರು ಸಲ್ಲಿಸಿದ್ದರೆ ಚೆನ್ನಾಗಿರುತಿತ್ತು: ಯತ್ನಾಳ್
‘ರಾಮಾಯಣ’ ಗ್ಲಿಂಪ್ಸ್ ನೋಡಿದ ಅಭಿಮಾನಿಗಳು ಹೇಳಿದ್ದೇನು? ವಿಡಿಯೋ ನೋಡಿ
‘ರಾಮಾಯಣ’ ಗ್ಲಿಂಪ್ಸ್ ನೋಡಿದ ಅಭಿಮಾನಿಗಳು ಹೇಳಿದ್ದೇನು? ವಿಡಿಯೋ ನೋಡಿ