ಅಕ್ರಮ ಹಣ ವರ್ಗಾವಣೆ ಪ್ರಕರಣ: ಮಾಜಿ ಸಚಿವ ನವಾಬ್ ಮಲಿಕ್‌ಗೆ ಮಧ್ಯಂತರ ಜಾಮೀನು
ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಮಾಜಿ ಸಚಿವ ನವಾಬ್ ಮಲಿಕ್ ಅವರಿಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿದೆ.
ದೆಹಲಿ, ಆ.11 : ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಮಾಜಿ ಸಚಿವ ಮತ್ತು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (NCP) ನಾಯಕ ನವಾಬ್ ಮಲಿಕ್ (Nawab Malik) ಅವರಿಗೆ ಸುಪ್ರೀಂ ಕೋರ್ಟ್ ಇಂದು (ಆ.11) ಮಧ್ಯಂತರ ಜಾಮೀನು ನೀಡಿದೆ. ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್ ಮತ್ತು ಬೇಲಾ ಎಂ ತ್ರಿವೇದಿ ಅವರ ಪೀಠವು ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಫೆಬ್ರವರಿ 23, 2022 ರಂದು ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿತ್ತು, ಇದೀಗ 1.5 ವರ್ಷಗಳ ನಂತರ ಅವರಿಗೆ ಮಧ್ಯಂತರ ಜಾಮೀನು ನೀಡಲಾಗಿದೆ.
ಈ ಮಧ್ಯಂತರ ಜಾಮೀನು ಅರ್ಹತೆಯ ಮೇಲೆ ಅಲ್ಲ, ವೈದ್ಯಕೀಯ ಕಾರಣಗಳಿಗಾಗಿ ನೀಡಲಾಗಿದೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ನವಾಬ್ ಮಲಿಕ್ ಅವರು ಕಿಡ್ನಿ ಕಾಯಿಲೆಯಿಂದಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಖ್ಯ ಅರ್ಜಿಗೆ 5 ವಾರಗಳಲ್ಲಿ ಕೌಂಟರ್ ಅಫಿಡವಿಟ್ ಸಲ್ಲಿಸಿದ ನಂತರ ಅದನ್ನು ಮರುಜೋಡಣೆ ಮಾಡಿ ನಂತರ ಅದನ್ನು ವಿಚಾರಣೆ ಮಾಡಿ ಜಾಮೀನು ನೀಡಲಾಗಿದೆ.
ಈ ಹಿಂದೆ ನವಾಬ್ ಮಲಿಕ್ ಅವರು ಬಾಂಬೆ ಹೈಕೋರ್ಟ್ಗೆ ತಾತ್ಕಾಲಿಕ ವೈದ್ಯಕೀಯ ಪರೀಕ್ಷೆಗೆ ಜಾಮೀನು ಅರ್ಜಿಯನ್ನು ಸಲ್ಲಿಸಿದ್ದರು. ಆದರೆ ಕೋರ್ಟ್ ಈ ಅರ್ಜಿಯನ್ನು ತಿರಸ್ಕರಿಸಿತ್ತು. ಬಳಿಕ ಸುಪ್ರೀಂ ಕೋರ್ಟ್ಗೆ ಮರುಅರ್ಜಿ ಸಲ್ಲಿಸಿದ್ದಾರೆ. ಇದೀಗ ಸುಪ್ರೀಂ ಅವರಿಗೆ ವೈದ್ಯಕೀಯ ಪರೀಕ್ಷೆಯ ಆಧಾರದ ಮೇಲೆ ಈ ಆದೇಶ ನೀಡಿದೆ.
ಇದನ್ನೂ ಓದಿ: ಮಾಜಿ ಸಚಿವ ನವಾಬ್ ಮಲಿಕ್‌ಗೆ ಜಾಮೀನು ನಿರಾಕರಿಸಿದ ಮುಂಬೈ ಕೋರ್ಟ್
ನವಾಬ್ ಮಲಿಕ್ ದಾವೂದ್ ಲಿಂಕ್: ಅಕ್ರಮ ಹಣ ವರ್ಗಾವಣೆ ಪ್ರಕರಣ
ಗ್ಯಾಂಗ್‌ಸ್ಟರ್ ದಾವೂದ್ ಇಬ್ರಾಹಿಂ ಮತ್ತು ಶಕೀಲ್ ಶೇಖ್ ಬಾಬು ಮೊಯಿಯುದ್ದೀನ್ ಅಕಾ ಛೋಟಾ ಶಕೀಲ್, ಇಬ್ರಾಹಿಂ ಮುಷ್ತಾಕ್ ಅಬ್ದುಲ್ ರಜಾಕ್ ಮೆಮನ್ ಅಕಾ ಟಿಗರ್ ಮೆಮನ್ ಸೇರಿದಂತೆ ಆತನ ಆಪ್ತರೊಂದಿಗೆ ನವಾಬ್ ಮಲಿಕ್ ಅವರ ಹೆಸರು ಕೂಡ ತಲುಕು ಹಾಕುತ್ತಿದ್ದ ಕಾರಣ ಎನ್‌ಐಎ ನವಾಬ್ ಮಲಿಕ್ ಅವರನ್ನು ಪಿಎಂಎಲ್‌ಎ ಅಡಿಯಲ್ಲಿ ಬಂಧಿಸಿತ್ತು.
ನವಾಬ್ ಮಲಿಕ್ ಅವರು ದಾವೂದ್‌ನ ಸಹೋದರಿ ದಿವಂಗತ ಹಸೇನಾ ಪರ್ಕರ್‌ಳೊಂದಿಗೆ ವ್ಯವಹರಿಸಿದ್ದರು ಮತ್ತು ಸೆಪ್ಟೆಂಬರ್ 2005ರಲ್ಲಿ ಫ್ಯಾಬ್ರಿಕೇಟೆಡ್ ಪವರ್ ಆಫ್ ಅಟಾರ್ನಿ ಬಳಸಿ ಕುರ್ಲಾದಲ್ಲಿನ ಗೋವಾಲಾ ಕಾಂಪೌಂಡ್ನ್ನು ಕಬಳಿಸಲು ಸಂಚು ರೂಪಿಸಿದ್ದರು ಎಂದು ಇಡಿ ಹೇಳಿದೆ. ಇದರ ಜತೆಗೆ ಭಾರತದ ₹ 15.99 ಕೋಟಿ ಮೊತ್ತದ ಹಣವನ್ನು ಭಯೋತ್ಪಾದಕ ನಿಧಿಗಾಗಿ ಬಳಸಲಾಗಿದೆ ಎಂದು ಇಡಿ ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:56 pm, Fri, 11 August 23