ಕಂಗ್ರಾ: ಉತ್ತರ ಭಾರತದಲ್ಲಿ ಕಳೆದೊಂದು ವಾರದಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಪ್ರವಾಹ ಭೀತಿ ಎದುರಾಗಿದೆ. ಹಿಮಾಚಲ ಪ್ರದೇಶದ (Himachal Pradesh Flood) ಕಂಗ್ರಾ ಜಿಲ್ಲೆಯ ಶಾಹ್ಪುರ ತೆಹ್ಸಿಲ್ನ ಬೋಹ್ ಎಂಬ ಗ್ರಾಮದಲ್ಲಿ ಮಳೆಯಿಂದ ಭೂಕುಸಿತ (Landslide) ಸಂಭವಿಸಿದೆ. ಈ ವೇಳೆ ಮಣ್ಣಿನಡಿ ಸಿಲುಕಿದ್ದ 7 ಜನರನ್ನು ಎನ್ಡಿಆರ್ಎಫ್ (NDRF) ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಇನ್ನೂ 10 ಜನರು ನಾಪತ್ತೆಯಾಗಿದ್ದು, ಅವರಿಗಾಗಿ ಶೋಧ ಕಾರ್ಯಾಚರಣೆ (Rescue Operation) ನಡೆಸಲಾಗುತ್ತಿದೆ.
ಹಿಮಾಚಲ ಪ್ರದೇಶದಲ್ಲಿ ಕಳೆದ 2 ದಿನಗಳಿಂದ ಭಾರೀ ಮಳೆಗೆ ಇಬ್ಬರು ಬಲಿಯಾಗಿದ್ದಾರೆ. ಬೋಹ್ ಎಂಬ ಕುಗ್ರಾಮದಲ್ಲಿ ಇದ್ದಕ್ಕಿದ್ದಂತೆ ಬೆಟ್ಟ ಕುಸಿದ ಪರಿಣಾಮವಾಗಿ 17 ಜನರು ಮಣ್ಣಿನಡಿ ಸಿಲುಕಿದ್ದರು. ಅವರಲ್ಲಿ 7 ಜನರನ್ನು ರಕ್ಷಣೆ ಮಾಡಲಾಗಿದೆ. ಇನ್ನೂ ಮಳೆ ನಿಲ್ಲದ ಕಾರಣದಿಂದ ಕೆಸರಿನಡಿ ಸಿಲುಕಿರುವ ಬಾಕಿ 10 ಜನರನ್ನು ಹುಡುಕುವುದು ಕಷ್ಟವಾಗಿದೆ. ನಿನ್ನೆ ಸಂಜೆಯೇ ಈ ಘಟನೆ ನಡೆದಿದ್ದು, 8 ಗಂಟೆಗಳ ಕಾಲ ನಿರಂತರವಾಗಿ ಎನ್ಡಿಆರ್ಎಫ್ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.
Himachal Pradesh: Rescue operation is underway in Boh Valley, Kangra district, following yesterday’s massive landslide and floods.
(Video: ANI) pic.twitter.com/4QtlNhE6y8
— Prasar Bharati News Services पी.बी.एन.एस. (@PBNS_India) July 13, 2021
ಹಿಮಾಚಲ ಪ್ರದೇಶದ ಧರ್ಮಶಾಲಾ (Dharamshala) ಸುತ್ತಮುತ್ತ ಕಳೆದೆರಡು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಧರ್ಮಶಾಲಾದಲ್ಲಿ ಪ್ರವಾಹದ ಹೊಡೆತಕ್ಕೆ ಮನೆಗಳು, ಕಾರು, ಸೇತುವೆಗಳು ಕೊಚ್ಚಿಹೋಗಿರುವ ವಿಡಿಯೋಗಳು ಭಾರೀ ವೈರಲ್ ಆಗಿತ್ತು. ಹಿಮಾಚಲ ಪ್ರದೇಶ ರಾಜ್ಯದ ಧರ್ಮಶಾಲಾ ಬಳಿ ಇರುವ ಭಾಗ್ಸು ನಾಗ್ ಗ್ರಾಮದಲ್ಲಿ ಪ್ರವಾಹದಿಂದ ಹತ್ತಾರು ಕಾರುಗಳು ರಸ್ತೆಯಲ್ಲಿ ಕೊಚ್ಚಿಕೊಂಡು ಹೋಗುತ್ತಿರುವ ವಿಡಿಯೋಗಳು ವೈರಲ್ ಆಗಿದ್ದವು.
Himachal Pradesh | National Disaster Response Force (NDRF) continues rescue operation at Boh village in Kangra district, following flash floods in the area yesterday pic.twitter.com/3uSBJMzWIW
— ANI (@ANI) July 13, 2021
ಹಾಗೇ, ಮಂಝಿ ನದಿ ಉಕ್ಕಿ ಹರಿದು ಗ್ರಾಮದೊಳಗೆ ನುಗ್ಗಿದ ಭಯಾನಕ ದೃಶ್ಯಗಳು ಪ್ರವಾಸಿಗರ ಪಾಲಿನ ಸ್ವರ್ಗವಾದ ಹಿಮಾಚಲ ಪ್ರದೇಶದ ರೌದ್ರ ರೂಪವನ್ನು ತೋರಿಸುತ್ತಿದ್ದವು.
Two people died in the last two days due to heavy rainfall in the State. Rescue operation for 10 missing people is underway in Kangra. I’ll visit Dharmshala to take cognizance: Himachal Pradesh Chief Minister, Jairam Thakur pic.twitter.com/yJrHE7rM2x
— ANI (@ANI) July 13, 2021
ಅದರ ಬೆನ್ನಲ್ಲೇ ಕಂಗ್ರಾ ಜಿಲ್ಲೆಯಲ್ಲಿ ಭಾರೀ ಭೂಕುಸಿತ ಸಂಭವಿಸಿದ್ದು, ಇಲ್ಲಿನ ಸುತ್ತಮುತ್ತಲಿನ ಜನರು ಪ್ರಾಣಾಪಾಯದ ಭೀತಿಯಲ್ಲಿದ್ದಾರೆ. ಹಿಮಾಚಲಪ್ರದೇಶ ಸರ್ಕಾರ ಎಲ್ಲ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದರೂ ಪ್ರಾಕೃತಿಕ ವಿಕೋಪವನ್ನು ತಡೆಗಟ್ಟಲು ಸಾಧ್ಯವಾಗುತ್ತಿಲ್ಲ. ಜುಲೈ 15ರವರೆಗೂ ಹಿಮಾಚಲಪ್ರದೇಶದಲ್ಲಿ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
#WATCH | Himachal Pradesh: Heavy rainfall triggered a flash flood in Dharamshala earlier today. Vehicles stuck & submerged in water while people struggle to walk on the road. Visuals from the Bhagsu Nag area. pic.twitter.com/Oz6gAK3xHw
— ANI (@ANI) July 12, 2021
ಇದನ್ನೂ ಓದಿ: Dharamshala Flood: ಹಿಮಾಚಲಪ್ರದೇಶದ ಧರ್ಮಶಾಲಾದಲ್ಲಿ ಭಾರೀ ಪ್ರವಾಹ; ಕಣ್ಣೆದುರೇ ಕೊಚ್ಚಿಹೋಯ್ತು ಕಾರುಗಳು
ಇದನ್ನೂ ಓದಿ: Karnataka Weather: ಕರ್ನಾಟಕದಲ್ಲಿ ಕೊಂಚ ತಗ್ಗಿದ ವರುಣನ ಆರ್ಭಟ; ಮಲೆನಾಡು, ಕರಾವಳಿ ಭಾಗದಲ್ಲಿ ಇಂದು ಯೆಲ್ಲೋ ಅಲರ್ಟ್
Published On - 12:53 pm, Tue, 13 July 21