AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sputnik V: ಭಾರತದಲ್ಲಿ ಮುಂದಿನ ವಾರದಿಂದ ಕಮರ್ಷಿಯಲ್ ಆಗಿ ಸ್ಪುಟ್ನಿಕ್ ವಿ ಲಸಿಕೆ ಲಭ್ಯ

ಕೊರೋನಾ ವೈರಸ್​ನ ರೂಪಾಂತರಿಯಾದ ಡೆಲ್ಟಾ ವೈರಸ್ ವಿರುದ್ಧ ರಷ್ಯಾದ ಸ್ಪುಟ್ನಿಕ್‍ ವಿ ಲಸಿಕೆ ಶೇ. 90ರಷ್ಟು ಹೆಚ್ಚು ಪರಿಣಾಮಕಾರಿಯಾಗಿದೆ. ಸ್ಪುಟ್ನಿಕ್ ವಿ ಲಸಿಕೆಯು ಈಗಾಗಲೇ ಭಾರತ ಸೇರಿ 67 ರಾಷ್ಟ್ರಗಳಲ್ಲಿ ನೋಂದಣಿಯಾಗಿದೆ.

Sputnik V: ಭಾರತದಲ್ಲಿ ಮುಂದಿನ ವಾರದಿಂದ ಕಮರ್ಷಿಯಲ್ ಆಗಿ ಸ್ಪುಟ್ನಿಕ್ ವಿ ಲಸಿಕೆ ಲಭ್ಯ
ಸ್ಪುಟ್ನಿಕ್​ ವಿ ಲಸಿಕೆ
TV9 Web
| Updated By: ಸುಷ್ಮಾ ಚಕ್ರೆ|

Updated on:Jul 13, 2021 | 11:47 AM

Share

ನವದೆಹಲಿ: ಈಗಾಗಲೇ ಭಾರತದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತವಾಗಿ ಕೊರೋನಾ ಲಸಿಕೆ (Covid-19 Vaccine) ನೀಡುವ ಅಭಿಯಾನವನ್ನು ಕೇಂದ್ರ ಸರ್ಕಾರ ಆರಂಭಿಸಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಲಸಿಕೆ (Free Vaccine) ಪಡೆಯಲು ಇಚ್ಛಿಸದವರು ನಿಗದಿತ ಹಣ ಪಾವತಿ ಮಾಡಿ ಖಾಸಗಿ ಆಸ್ಪತ್ರೆಗಳಲ್ಲೂ ಕೊರೋನಾ ಲಸಿಕೆ ಪಡೆಯಬಹುದು. ಆದರೆ, ಈ ಅಭಿಯಾನ ಶುರುವಾದ ಬಳಿಕ ದೇಶದಲ್ಲಿ ಕೋವ್ಯಾಕ್ಸಿನ್ (Covaxin) ಮತ್ತು ಕೋವಿಶೀಲ್ಡ್​ (Covishield Vaccine) ಲಸಿಕೆಗಳ ಕೊರತೆ ಎದುರಾಗಿದೆ. ಇನ್ನೇನು ಮುಂದಿನ ವಾರದ ವೇಳೆಗೆ ರಷ್ಯಾ ಮೂಲದ ಸ್ಪುಟ್ನಿಕ್ ವಿ ಲಸಿಕೆ (Sputnik V Vaccine) ಭಾರತಕ್ಕೆ ಕಮರ್ಷಿಯಲ್ ಆಗಿ ಕಾಲಿಡಲಿದೆ.

ಮೇ 14ರಂದು ಭಾರತದಲ್ಲಿ ಸ್ಪುಟ್ನಿಕ್ ವಿ ಲಸಿಕೆಯನ್ನು ಪ್ರಾಥಮಿಕ ಹಂತವಾಗಿ ಉತ್ಪಾದನೆ ಮಾಡಲಾಗಿತ್ತು. ಆದರೆ, ಈ ತಿಂಗಳ ಅಂತ್ಯದ ವೇಳೆಗೆ ಭಾರತದಲ್ಲಿ ಸ್ಪುಟ್ನಿಕ್ ವಿ ಲಸಿಕೆಯನ್ನು ದೊಡ್ಡ ಪ್ರಮಾಣದಲ್ಲಿ ತಯಾರಿಸಲು ರಷ್ಯಾ ನಿರ್ಧರಿಸಿದೆ. ಈಗಾಗಲೇ ಸ್ಪುಟ್ನಿಕ್ ವಿ ಲಸಿಕೆಗೆ ಬಹಳ ಆರ್ಡರ್​ಗಳು ಬರುತ್ತಿರುವುದರಿಂದ ಉತ್ಪಾದನಾ ಪ್ರಮಾಣವನ್ನು ಹೆಚ್ಚಿಸಲು ಯೋಚಿಸಲಾಗಿದೆ.

ಭಾರತದಲ್ಲಿ 850 ಮಿಲಿಯನ್ ಡೋಸ್‌ ಗಳಿಗೂ ಹೆಚ್ಚು ಸ್ಪುಟ್ನಿಕ್ ಲಸಿಕೆಗಳನ್ನು ತಯಾರಿಸಲು ಯೋಚಿಸಲಾಗಿದೆ. ಪ್ರಪಂಚದಲ್ಲಿ ತಯಾರಾಗುವ ಸ್ಪುಟ್ನಿಕ್ ವಿ ಲಸಿಕೆಯ ಶೇ. 65ರಿಂದ 70ರಷ್ಟನ್ನು ಭಾರತದಲ್ಲಿ ತಯಾರಿಲು ನಿರ್ಧರಿಸಲಾಗಿದೆ. ಕೊರೋನಾ ವೈರಸ್​ನ ರೂಪಾಂತರಿಯಾದ ಡೆಲ್ಟಾ ವೈರಸ್ ವಿರುದ್ಧ ರಷ್ಯಾದ ಸ್ಪುಟ್ನಿಕ್‍ ವಿ ಲಸಿಕೆ ಶೇ. 90ರಷ್ಟು ಹೆಚ್ಚು ಪರಿಣಾಮಕಾರಿಯಾಗಿದೆ ಎನ್ನಲಾಗಿದೆ.

ಆಲ್ಫಾ, ಬಟಾ, ಡೆಲ್ಟಾ ರೂಪಾಂತರಿ ಕೊರೋನಾ ವೈರಸ್​ಗಳ ವಿರುದ್ಧ ಸ್ಪುಟ್ನಿಕ್ ವಿ ಲಸಿಕೆ ಹೋರಾಡಬಲ್ಲದು. ಈ ರೂಪಾಂತರಿ ವೈರಸ್​ಗಳು ಮೂಲಕ ಕೋವಿಡ್ ವೈರಸ್​ಗಿಂತಲೂ ಅಪಾಯಕಾರಿಯಾಗಿವೆ. ಸ್ಪುಟ್ನಿಕ್ ವಿ ಲಸಿಕೆಯು ಈಗಾಗಲೇ ಭಾರತ ಸೇರಿ 67 ರಾಷ್ಟ್ರಗಳಲ್ಲಿ ನೋಂದಣಿಯಾಗಿದೆ. ಮೇ ತಿಂಗಳಲ್ಲಿ ಮೊದಲ ಬಾರಿಗೆ ಹೈದರಾಬಾದ್​ನಲ್ಲಿ ಚಾಲನೆಗೊಂಡ ಸ್ಪುಟ್ನಿಕ್ ವಿ ಲಸಿಕೆಯನ್ನು ಈಗಾಗಲೇ ಭಾರತದ 50 ನಗರಗಳಿಗೆ ವಿತರಿಸಲಾಗಿದೆ. ಬೆಂಗಳೂರು, ವಿಜಾಗ್, ಮುಂಬೈ, ಕೊಲ್ಕತ್ತಾ, ದೆಹಲಿ, ಚೆನ್ನೈ, ವಿಜಯವಾಡ, ಕೊಲ್ಲಾಪುರ, ಕೊಚ್ಚಿ, ರಾಯ್ಪುರ, ಚಂಡೀಗಢ, ಪುಣೆ, ನಾಗ್ಪುರ, ನಾಸಿಕ್, ಕೊಯಮತ್ತೂರು, ರಾಂಚಿ, ಜೈಪುರ, ಲಕ್ನೋ, ಪಾಟ್ನಾ, ಭುವನೇಶ್ವರ, ಅಹಮದಾಬಾದ್, ರಾಜಕೋಟ್, ಭೂಪಾಲ್, ಧಾರವಾಡ, ಗುಲ್ಬರ್ಗ, ಗುಂಟೂರು, ಮಧುರೈ, ಮೈಸೂರು ಮುಂತಾದ ನಗರಗಳಲ್ಲಿ ಸ್ಪುಟ್ನಿಕ್ ವಿ ಲಸಿಕೆಯನ್ನು ನೀಡಲಾಗಿದೆ.

ಇದನ್ನೂ ಓದಿ: Sputnik V: ಶೀಘ್ರದಲ್ಲೇ ಬೆಂಗಳೂರು ಸೇರಿ 9 ನಗರಗಳಲ್ಲಿ ಲಭ್ಯವಾಗಲಿದೆ ರಷ್ಯಾದ ಸ್ಪುಟ್ನಿಕ್​ ವಿ ಲಸಿಕೆ

ಇದನ್ನೂ ಓದಿ: Sputnik V Vaccine ಭಾರತಕ್ಕೆ ಬಂತು ರಷ್ಯಾದ ಸ್ಪುಟ್ನಿಕ್ ವಿ ಲಸಿಕೆಯ 30 ಲಕ್ಷ ಡೋಸ್‌

( Russia’s Sputnik V Vaccine Will be Launched Commercially by Next Week in India)

Published On - 11:46 am, Tue, 13 July 21

ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?