Delta, Kappa, Lambda Variant: ಡೆಲ್ಟಾ, ಕಪ್ಪಾ, ಲ್ಯಾಂಬ್ಡಾ ತಳಿಗಳ ನಡುವೆ ಇರುವ ವ್ಯತ್ಯಾಸವೇನು? ಒಂದಕ್ಕಿಂತ ಒಂದು ಭಿನ್ನ ಹೇಗೆ?

ಡೆಲ್ಟಾ, ಡೆಲ್ಟಾ ಪ್ಲಸ್, ಕಪ್ಪಾ, ಲ್ಯಾಂಬ್ಡಾ ತಳಿಗಳ ನಡುವೆ ಇರುವ ವ್ಯತ್ಯಾಸವೇನು ಅವುಗಳು ಒಂದಕ್ಕಿಂತ ಒಂದು ಭಿನ್ನವಾಗಿರುವುದು ಹೇಗೆ ಎನ್ನುವುದರ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

Delta, Kappa, Lambda Variant: ಡೆಲ್ಟಾ, ಕಪ್ಪಾ, ಲ್ಯಾಂಬ್ಡಾ ತಳಿಗಳ ನಡುವೆ ಇರುವ ವ್ಯತ್ಯಾಸವೇನು? ಒಂದಕ್ಕಿಂತ ಒಂದು ಭಿನ್ನ ಹೇಗೆ?
ಸಾಂಕೇತಿಕ ಚಿತ್ರ
Follow us
TV9 Web
| Updated By: Skanda

Updated on: Jul 12, 2021 | 3:30 PM

ಕೊರೊನಾ ವೈರಾಣು (Corona Virus) ಜಗತ್ತನ್ನೆಲ್ಲಾ ವ್ಯಾಪಿಸಿ ಸುಮಾರು ಒಂದೂವರೆ ವರ್ಷವಾಗಿದೆ. ಆರಂಭಿಕ ಹಂತದಲ್ಲಿದ್ದ ವೈರಾಣುವಿಗೂ ಈಗ ಪತ್ತೆಯಾಗುತ್ತಿರುವ ತಳಿಗಳಿಗೂ ವೈಜ್ಞಾನಿಕವಾಗಿ ಸಾಕಷ್ಟು ಬದಲಾವಣೆಗಳು ಕಂಡುಬಂದಿವೆ. ಕೊರೊನಾ ವೈರಾಣು ರೂಪಾಂತರ (Mutation) ಹೊಂದಿದಂತೆಲ್ಲಾ ಸೋಂಕಿನ ಗುಣಲಕ್ಷಣಗಳು, ಪರಿಣಾಮ, ಗಂಭೀರತೆ ಎಲ್ಲವುದರ ಕುರಿತಾಗಿಯೂ ಹಲವು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಸದ್ಯ ಭಾರತವನ್ನು ಎರಡನೇ ಅಲೆ (Second Wave) ಮೂಲಕ ಕಾಡಿದ ಡೆಲ್ಟಾ ತಳಿಯ (Delta Variant) ವೈರಾಣು ಮೂಲ ವೈರಾಣುವಿಗಿಂತಲೂ ಅಪಾಯಕಾರಿ ಎಂಬ ಹಣೆಪಟ್ಟಿ ಹೊತ್ತುಕೊಂಡಿದೆ. ಡೆಲ್ಟಾ ಮತ್ತೊಮ್ಮೆ ರೂಪಾಂತರಿಯಾಗಿ ಡೆಲ್ಟಾ ಪ್ಲಸ್ (Delta Plus) ಎಂಬ ತಳಿಯೂ ಪತ್ತೆಯಾಗಿದ್ದು, ಅದನ್ನು ಈಗಾಗಲೇ ಕಳವಳಕಾರಿ ತಳಿ ಎಂದು ಗುರುತಿಸಲಾಗಿದೆ. ಸಾಲದ್ದಕ್ಕೆ ಡೆಲ್ಟಾ ಜತೆಯಲ್ಲೇ ಲ್ಯಾಂಬ್ಡಾ (Lambda), ಕಪ್ಪಾ (Kappa) ತಳಿಗಳೂ ಕಾಣಿಸಿಕೊಂಡು ಗಾಯದ ಮೇಲೆ ಬರೆ ಎಳೆಯುವ ಭೀತಿ ಮೂಡಿಸಿವೆ. ಅಂದಹಾಗೆ, ಈ ತಳಿಗಳ ನಡುವೆ ಇರುವ ವ್ಯತ್ಯಾಸವೇನು ಅವುಗಳು ಒಂದಕ್ಕಿಂತ ಒಂದು ಭಿನ್ನವಾಗಿರುವುದು ಹೇಗೆ ಎನ್ನುವುದರ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಡೆಲ್ಟಾ ತಳಿ: ಡೆಲ್ಟಾ ಮಾದರಿ ಅಥವಾ B.1.617.2 ವೈರಾಣು B.1.617 ವೈರಾಣುವಿನಿಂದ ರೂಪಾಂತರ ಹೊಂದಿರುವ ಮಾದರಿಯಾಗಿದೆ. ಈ ವರ್ಷದ ಆರಂಭದಲ್ಲಿ ಭಾರತದಲ್ಲಿ ಕಂಡುಬಂದ ಡೆಲ್ಟಾ ಮಾದರಿಯನ್ನು ಮೊದಲು ಭಾರತೀಯ ರೂಪಾಂತರಿ ಎಂದು ಗುರುತಿಸಲಾಗಿತ್ತಾದರೂ ಹಾಗೆ ದೇಶವೊಂದರ ಹೆಸರು ಹಿಡಿದು ವೈರಾಣುವನ್ನು ಗುರುತಿಸುವುದು ತಪ್ಪಾಗುತ್ತದೆ ಎನ್ನುವ ಕಾರಣಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಅದಕ್ಕೆ ಡೆಲ್ಟಾ ಮಾದರಿ ಎಂಬ ಹೆಸರು ಕೊಟ್ಟಿದೆ. ಇದಕ್ಕೂ ಮುನ್ನ ಕಂಡುಬಂದ ವೈರಾಣುಗಳಿಗಿಂತ ವೇಗವಾಗಿ ಹಬ್ಬುವ ಶಕ್ತಿ ಹೊಂದಿರುವ ಡೆಲ್ಟಾ ಭಾರತ ಸೇರಿದಂತೆ ಕೆಲ ರಾಷ್ಟ್ರಗಳಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿದೆ. ಮೂಲ ವೈರಾಣುವಿಗಿಂತ ಬಹಳಷ್ಟು ಅಪಾಯಕಾರಿಯಾಗಿರುವ ಡೆಲ್ಟಾದ ವಿರುದ್ಧ ಈಗಿರುವ ಲಸಿಕೆಗಳು 8 ಪಟ್ಟು ಕಡಿಮೆ ಪ್ರಭಾವಶಾಲಿಯಾಗಿ ಕಂಡುಬರುತ್ತಿವೆ ಎಂದು ಕೆಲ ಅಧ್ಯಯನಗಳು ಆತಂಕ ವ್ಯಕ್ತಪಡಿಸಿವೆ.

ಡೆಲ್ಟಾ ಪ್ಲಸ್ ತಳಿ: ಡೆಲ್ಟಾ ವೈರಾಣುವಿನ ರೂಪಾಂತರಿ ಮಾದರಿಯೇ ಡೆಲ್ಟಾ ಪ್ಲಸ್. ಮೊದಲು ಮಹಾರಾಷ್ಟ್ರದಲ್ಲಿ ಪತ್ತೆಯಾದ ಈ ತಳಿ ಮೂರನೇ ಅಲೆಗೆ ನಾಂದಿ ಹಾಡಬಹುದು ಎಂದು ಅನೇಕ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಕೊರೊನಾ ಸೋಂಕಿನ ಸಾಧಾರಣ ಗುಣಲಕ್ಷಣಗಳ ಜತೆಗೆ ಹೊಟ್ಟೆ ನೋವು, ವಾಕರಿಕೆ, ಹಸಿವಿನ ಸಮಸ್ಯೆ, ವಾಂತಿ ಸೇರಿದಂತೆ ದೀರ್ಘಕಾಲದ ಪರಿಣಾಮಗಳಾದ ಕೀಲು ನೋವು, ಶ್ರವಣ ದೋಷವನ್ನು ತಂದೊಡ್ಡುವ ಶಕ್ತಿ ಡೆಲ್ಟಾ ಪ್ಲಸ್​ಗಿದೆ ಎಂದು ತಜ್ಞರು ತಿಳಿಸಿದ್ದಾರೆ. ಈಗಾಗಲೇ ಭಾರತವೂ ಸೇರಿದಂತೆ ಸುಮಾರು 9 ದೇಶಗಳಲ್ಲಿ ಕಂಡುಬಂದಿರುವ ಡೆಲ್ಟಾ ಪ್ಲಸ್​ ಬಗ್ಗೆ ಎಲ್ಲರಿಗೂ ಭೀತಿ ಇದೆ. ಬ್ರಿಟನ್, ಪೋರ್ಚುಗಲ್, ಸ್ವಿಜ್ಜರ್​ಲ್ಯಾಂಡ್, ಪೊಲ್ಯಾಂಡ್, ಜಪಾನ್, ನೇಪಾಳ, ಚೀನಾ, ರಷ್ಯಾ ಮತ್ತು ಭಾರತದಲ್ಲಿ ಈಗಾಗಲೇ ಡೆಲ್ಟಾ ಪ್ಲಸ್ ಪ್ರಕರಣಗಳು ವರದಿಯಾಗಿವೆ.

ಕಪ್ಪಾ ತಳಿ: ಕಪ್ಪಾ ಮಾದರಿ ಅಥವಾ B.1.617.1 ತಳಿ ಅಕ್ಟೋಬರ್​ 2020ರಲ್ಲಿ ಮೊದಲ ಬಾರಿಗೆ ಭಾರತದಲ್ಲಿ ಪತ್ತೆಯಾಯ್ತು. ಎರಡು ಬಾರಿ ರೂಪಾಂತರಗೊಂಡ ತಳಿ ಇದಾಗಿದ್ದು, E484Q ರೂಪಾಂತರ ಹಾಗೂ L452R ರೂಪಾಂತರಕ್ಕೆ ಇದು ಒಳಪಟ್ಟಿದೆ ಎಂದು ತಜ್ಞರು ತಿಳಿಸಿದ್ದಾರೆ. E484Q ರೂಪಾಂತರವು ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಕಂಡುಬಂದ E484K ರೂಪಾಂತರಕ್ಕೆ ಸಾಮ್ಯತೆ ಹೊಂದಿದ್ದರೆ, L452R ರೂಪಾಂತರ ಕ್ಯಾಲಿಫೋರ್ನಿಯಾದಲ್ಲಿ ಮೊದಲು ಕಂಡುಬಂದಿತ್ತು. L452R ನಮ್ಮ ದೇಹದಲ್ಲಿನ ರೋಗ ನಿರೋಧಕ ಶಕ್ತಿಯ ಮೇಲೆ ದಾಳಿ ನಡೆಸುವಷ್ಟು ಬಲಶಾಲಿಯಾಗಿದೆ ಎಂದು ತಜ್ಞರು ಎಚ್ಚರಿಸಿದ್ದರು. ಇವೆರಡರ ಲಕ್ಷಣಗಳನ್ನೊಳಗೊಂಡ ಮಾದರಿಯನ್ನೇ ಕಪ್ಪಾ ಎಂದು ಗುರುತಿಸಲಾಗಿದ್ದು, ಅದು ಲಸಿಕೆಯು ನಮ್ಮ ದೇಹದ ಮೇಲೆ ಬೀರಬಹುದಾದ ಪರಿಣಾಮವನ್ನು ಕಡಿಮೆ ಮಾಡುತ್ತದೆ ಎಂದು ತಜ್ಞರು ಎಚ್ಚರಿಸಿದ್ದರು. ತುರಿಕೆ, ವಿಪರೀತ ಜ್ವರ, ಮೂಗು ಸೋರುವುದು, ಕಣ್ಣಿನಲ್ಲಿ ನೀರಿಳಿಯುವುದು ಸೇರಿದಂತೆ ಕೊರೊನಾದ ಸಾಧಾರಣ ಲಕ್ಷಣಗಳು ಕಪ್ಪಾ ಮಾದರಿಯಲ್ಲಿ ಕಂಡುಬರುತ್ತವೆ.

ಲ್ಯಾಂಬ್ಡಾ ತಳಿ: ವಿಶ್ವ ಆರೋಗ್ಯ ಸಂಸ್ಥೆ ಕಳೆದ ವಾರವಷ್ಟೇ ಲ್ಯಾಂಬ್ಡಾ ತಳಿಯನ್ನು ಆಸಕ್ತಿಯ ರೂಪಾಂತರ (ವೇರಿಯಂಟ್ ಆಫ್ ಇಂಟ್ರೆಸ್ಟ್) ಎಂದು ಗುರುತಿಸಿದೆ. ಪೆರುವಿನಲ್ಲಿ ಮೊದಲ ಬಾರಿಗೆ ಕಂಡುಬಂದ ಈ ಮಾದರಿಯು ಕಳೆದ ನಾಲ್ಕು ವಾರಗಳಲ್ಲಿ ಸುಮಾರು 30ಕ್ಕೂ ಹೆಚ್ಚು ದೇಶಗಳಲ್ಲಿ ಕಂಡುಬಂದಿದೆ. ಇದುವರೆಗೆ ಲ್ಯಾಂಬ್ಡಾ ಪ್ರಕರಣಗಳು ಭಾರತದಲ್ಲಿ ಪತ್ತೆಯಾಗಿಲ್ಲವಾದರೂ ಇದರ ಬಗ್ಗೆ ಒಂದಷ್ಟು ಆತಂಕಗಳಿವೆ. L452Q ಹಾಗೂ F490S ತಳಿಯ ರೂಪಾಂತರಗಳೊಂದಿಗೆ ಕಾಣಿಸಿಕೊಂಡ ಲ್ಯಾಂಬ್ಡಾ ತಳಿ ಎಲ್ಲಕ್ಕಿಂತ ಹೆಚ್ಚು ಅಪಾಯಕಾರಿ ಅಥವಾ ಇದು ಯಾವುದೇ ಚಿಕಿತ್ಸೆಗಳಿಗೆ ಸ್ಪಂದಿಸುವುದಿಲ್ಲ ಎನ್ನುವುದಕ್ಕೆ ಅಧಿಕೃತ ಪುರಾವೆಗಳ ಕೊರತೆ ಇದೆ.

ಇದನ್ನೂ ಓದಿ: Lambda Variant: 30ಕ್ಕೂ ಹೆಚ್ಚು ದೇಶಗಳಲ್ಲಿ ಪತ್ತೆಯಾಯ್ತು ಲ್ಯಾಂಬ್ಡಾ; ಡೆಲ್ಟಾಕ್ಕಿಂತಲೂ ಅಪಾಯಕಾರಿ ತಳಿ ಎಂದ ತಜ್ಞರು 

ಕೊರೊನಾ ವೈರಾಣು ರೂಪಾಂತರ ಡೆಲ್ಟಾಕ್ಕೆ ನಿಲ್ಲುವುದಿಲ್ಲ; ಲ್ಯಾಂಬ್ಡಾ, ಕಪ್ಪಾ ಸೇರಿದಂತೆ ಒಟ್ಟು 4 ಮಾದರಿಗಳು ಈಗಾಗಲೇ ಪತ್ತೆ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ