Monsoon 2022: ಕರ್ನಾಟಕ, ಕೇರಳ ಸೇರಿ ನಾಲ್ಕು ರಾಜ್ಯಗಳಲ್ಲಿ ಮುಂದಿನ 5 ದಿನ ವರುಣನ ಆರ್ಭಟ ಜೋರು

ಕರ್ನಾಟಕ, ಕೇರಳ ಸೇರಿದಂತೆ ನಾಲ್ಕು ರಾಜ್ಯಗಳಲ್ಲಿ ಮುಂದಿನ 5 ದಿನ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರ್ನಾಟಕದಲ್ಲಿ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ ಅಧಿಕ ಮಳೆಯಾಗಲಿದ್ದು, ಆರೆಂಜ್ ಅಲರ್ಟ್​ ಘೋಷಿಸಲಾಗಿದೆ.

Monsoon 2022: ಕರ್ನಾಟಕ, ಕೇರಳ ಸೇರಿ ನಾಲ್ಕು ರಾಜ್ಯಗಳಲ್ಲಿ ಮುಂದಿನ 5 ದಿನ ವರುಣನ ಆರ್ಭಟ ಜೋರು
Rain
Updated By: ನಯನಾ ರಾಜೀವ್

Updated on: Jun 23, 2022 | 10:19 AM

ಕರ್ನಾಟಕ, ಕೇರಳ ಸೇರಿದಂತೆ ನಾಲ್ಕು ರಾಜ್ಯಗಳಲ್ಲಿ ಮುಂದಿನ 5 ದಿನ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರ್ನಾಟಕದಲ್ಲಿ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ ಅಧಿಕ ಮಳೆಯಾಗಲಿದ್ದು, ಆರೆಂಜ್ ಅಲರ್ಟ್​ ಘೋಷಿಸಲಾಗಿದೆ.

ಕಾರವಾರ, ಶಿರಾಲಿ, ಕುಮಟಾ, ಹೊನ್ನಾವರ, ಮಂಕಿ, ಅಂಕೋಲಾ, ಬಸಗೋಡಿನಲ್ಲಿ ಅತಿ ಹೆಚ್ಚು ಮಳೆಯಾಗಿದ್ದು, ಜಾನಮನೆ, ಬೇಲಿಕೇರಿ, ಸುಳ್ಯ, ಪಣಂಬೂರು, ಮಂಗಳೂರು ವಿಮಾನ ನಿಲ್ದಾಣ, ಗೋಕರ್ಣ, ಕುಂದಾಪುರ, ಕೊಲ್ಲೂರು, ಮಾಣಿ, ಕಾರ್ಕಳ, ಕೋಟ, ಸೈದಾಪುರ, ಯಲಬುರ್ಗಾ, ಲಿಂಗನಮಕ್ಕಿ, ಬೆಳ್ತಂಗಡಿ, ಕಿರವತ್ತಿ, ಅಕ್ಕಿಆಲೂರು, ತ್ಯಾಗರ್ತಿ, ಶೃಂಗೇರಿ, ಅಜ್ಜಂಪುರ, ಸುಂಟಿಕೊಪ್ಪದಲ್ಲಿ ಸಾಧಾರಣ ಮಳೆಯಾಗಿದೆ.

ಮೇಲ್ಮೈ ಸುಳಿಗಾಳಿ ಹಿನ್ನೆಲೆಯಲ್ಲಿ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಇಂದು ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ವಿಜಯಪುರ, ಬೀದರ್, ಬೆಳಗಾವಿ ಜಿಲ್ಲೆಗಳಲ್ಲಿ ಹೆಚ್ಚು ಮಳೆ ಸಾಧ್ಯತೆ ಎಂದು ಹವಾಮಾನ ಇಲಾಖೆ ತಿಳಿಸಿದೆ

ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಹಾವೇರಿ, ವಿಜಯಪುರ, ಯಾದಗಿರಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಕೊಂಕಣ, ಗೋವಾ, ಕರಾವಳಿ ಕರ್ನಾಟಕ, ಕೇರಳ ಹಾಗೂ ಮಹಾರಾಷ್ಟ್ರದಲ್ಲಿ ಮುಂದಿನ 5 ದಿನ ಅತ್ಯಧಿಕ ಮಳೆಯಾಗುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ಮಧ್ಯ ಮಹಾರಾಷ್ಟ್ರದಲ್ಲಿ ಜೂನ್ 24ರಿಂದ 26, ಕರ್ನಾಟಕದಲ್ಲಿ ಜೂನ್ 24 ರಿಂದ 26, ಗುಜರಾತ್​ನಲ್ಲಿ ಜೂನ್ 25 ರಿಂದ 26 ರವರೆಗೆ ಮಳೆಯಾಗಲಿದೆ. ಕೊಂಕಣ ಹಾಗೂ ಗೋವಾದಲ್ಲಿ ಜೂನ್ 23 ರಿಂದ 25ರವರೆಗೆ ಹೆಚ್ಚು ಮಳೆಯಾಗಲಿದೆ ಎನ್ನಲಾಗಿದೆ.

ಸಿಕ್ಕಿಂ, ಪಶ್ಚಿಮ ಬಂಗಾಳ, ಸಬ್ ಹಿಮಾಲಯನ್, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಹಾಗೂ ತ್ರಿಪುರದಲ್ಲಿ ಮುಂದಿನ ಐದು ದಿನ ಅಧಿಕ ಮಳೆಬೀಳಲಿದೆ. ಹಾಗೆಯೇ ಪೋರಬಂದರ್,ಬರೋಡ, ಶಿವಪುರಿ, ರೇವಾ ಹಾಗೂ ಚರ್ಕ್​ನಲ್ಲೂ ವರುಣನ ಆರ್ಭಟವಿರಲಿದೆ.

ದೇಶದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ