Murder: ಆಸ್ತಿಗಾಗಿ ಅಪ್ಪ, ತಮ್ಮನನ್ನೇ ಶೂಟ್ ಮಾಡಿ ಕೊಂದ ನಿವೃತ್ತ ಸೇನಾಧಿಕಾರಿ!

ಶೂಟ್ ಮಾಡಿ ಕೊಂದ ಆರೋಪಿಯನ್ನು ನಿವೃತ್ತ ಸೇನಾಧಿಕಾರಿ ಮನೋಜ್ ಕುಮಾರ್ ಸಿಂಗ್ (45) ಎಂದು ಗುರುತಿಸಲಾಗಿದ್ದು, ಮೃತರನ್ನು ಶಿವನಾರಾಯಣ (70), ಮತ್ತು ಮನೀಶ್ ಸಿಂಗ್ (30) ಎಂದು ಗುರುತಿಸಲಾಗಿದೆ.

Murder: ಆಸ್ತಿಗಾಗಿ ಅಪ್ಪ, ತಮ್ಮನನ್ನೇ ಶೂಟ್ ಮಾಡಿ ಕೊಂದ ನಿವೃತ್ತ ಸೇನಾಧಿಕಾರಿ!
ಕೊಲೆImage Credit source: times now
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Jun 23, 2022 | 9:51 AM

ಲಕ್ನೋ: ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ವಾದ ವಿವಾದ ಉಂಟಾಗಿ, ನಿವೃತ್ತ ಸೇನಾಧಿಕಾರಿಯೊಬ್ಬರು ತನ್ನ ತಂದೆ ಮತ್ತು ತಮ್ಮನನ್ನು ಶೂಟ್ ಮಾಡಿ (Murder) ಕೊಂದಿದ್ದಾರೆ. ತನ್ನ ಮನೆಯಲ್ಲಿ ಇಬ್ಬರನ್ನು ಕೊಂದ ಆರೋಪದ ಮೇಲೆ ನಿವೃತ್ತ ಸೇನಾ ಅಧಿಕಾರಿಯನ್ನು ಬಂಧಿಸಲಾಗಿದೆ. ಮಂಗಳವಾರ ರಾತ್ರಿ ಉತ್ತರ ಪ್ರದೇಶದ (Uttar Pradesh) ಅಜಂಗಢ ಜಿಲ್ಲೆಯ ಕಪ್ತಂಗಂಜ್ ಪ್ರದೇಶದ ಧಂಧರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಶೂಟ್ ಮಾಡಿ ಕೊಂದ ಆರೋಪಿಯನ್ನು ನಿವೃತ್ತ ಸೇನಾಧಿಕಾರಿ ಮನೋಜ್ ಕುಮಾರ್ ಸಿಂಗ್ (45) ಎಂದು ಗುರುತಿಸಲಾಗಿದ್ದು, ಮೃತರನ್ನು ಶಿವನಾರಾಯಣ (70), ಮತ್ತು ಮನೀಶ್ ಸಿಂಗ್ (30) ಎಂದು ಗುರುತಿಸಲಾಗಿದೆ. ಮಂಗಳವಾರ ಸಂಜೆ ಮನೋಜ್ ಕುಮಾರ್ ಸಿಂಗ್ ಅವರ ತಂದೆ ಶಿವನಾರಾಯಣ ಅವರ ಆಸ್ತಿ ವಿವರ ಮತ್ತು ಕೃಷಿಯಿಂದ ಪಡೆದ ಹಣದ ಬಗ್ಗೆ ಕೇಳಿದ್ದರು. ಈ ವೇಳೆ ಚರ್ಚೆಯು ವಾದಕ್ಕೆ ತಿರುಗಿತು. ಆಗ ಕೋಪದಿಂದ ಮನೋಜ್ ಸಿಂಗ್ ತನ್ನ ಅಪ್ಪ ಮತ್ತು ತಮ್ಮನಿಗೆ ಗುಂಡು ಹಾರಿಸಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಇದನ್ನೂ ಓದಿ: Murder: ನಿಮ್ಮ ಗಂಡನನ್ನು ಕೊಲ್ಲುವುದು ಹೇಗೆ? ಕಾದಂಬರಿ ಬರೆದು ತನ್ನ ಪತಿಯನ್ನೇ ಕೊಂದ ಲೇಖಕಿಗೆ ಜೀವಾವಧಿ ಶಿಕ್ಷೆ

ಇದನ್ನೂ ಓದಿ
Image
ಅಪರಿಚಿತ ಮಹಿಳೆಯರಿಬ್ಬರ ಮೃತದೇಹ ಪತ್ತೆ ಪ್ರಕರಣ: ಸುಳಿವು ಕೊಟ್ಟವರಿಗೆ ಮಂಡ್ಯ ಪೊಲೀಸರಿಂದ 1 ಲಕ್ಷ ಬಹುಮಾನ
Image
ಕೇವಲ 50ರೂ.ಗಾಗಿ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ: ಸ್ನೇಹಿತನಿಂದಲೇ ಸ್ನೇಹಿತನಿಗೆ ಚಾಕುವಿನಿಂದ ಇರಿದು ಎಸ್ಕೇಪ್
Image
Crime News: ಬಾಲಕಿ ಗರ್ಭಿಣಿಯಾಗುತ್ತಿದ್ದಂತೆ ಅತ್ಯಾಚಾರ ಪ್ರಕರಣ ಬೆಳಕಿಗೆ, ಸೋದರಮಾವ ಅರೆಸ್ಟ್

ಶಿವನಾರಾಯಣ ಮತ್ತು ಮನೋಜ್ ಸಿಂಗ್ ನಡುವೆ ವಾಗ್ವಾದ ನಡೆದಾಗ ಮನೀಶ್ ಕೂಡ ಸ್ಥಳಕ್ಕೆ ಬಂದಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು, ಕೆರಳಿದ ಮನೋಜ್ ಸಿಂಗ್ ಏಕಾಏಕಿ ತನ್ನ ಬಳಿ ಇದ್ದ ಲೈಸನ್ಸ್ ಪಡೆದ ಪಿಸ್ತೂಲ್ ತೆಗೆದು ತಂದೆ ಶಿವನಾರಾಯಣನಿಗೆ ಗುಂಡು ಹಾರಿಸಿದ್ದಾರೆ. ಶಿವನಾರಾಯಣ ನೆಲಕ್ಕೆ ಬಿದ್ದಾಗ ಮನೀಶ್ ತನ್ನ ಅಣ್ಣ ಮನೋಜ್​ನನ್ನು ಹಿಡಿಯಲು ಯತ್ನಿಸಿದ್ದಾರೆ. ಆಗ ಮನೋಜ್ ತನ್ನ ತಮ್ಮ ಮನೀಶ್ ಮೇಲೂ ಗುಂಡು ಹಾರಿಸಿದ್ದಾರೆ.

ಗುಂಡಿನ ಸದ್ದು ಕೇಳಿದ ಅವರ ಚಿಕ್ಕಮ್ಮ ಅವಧ್ರಾಜಿ (65) ಮನೋಜ್ ಅವರನ್ನು ಹಿಡಿಯಲು ಪ್ರಯತ್ನಿಸಿದರು. ಆದರೆ ಮನೋಜ್ ಅವರಿಗೆ ದೊಣ್ಣೆಯಿಂದ ಹೊಡೆದು ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಘಟನೆಯ ನಂತರ, ಮನೋಜ್ ತಮ್ಮ ಲೈಸೆನ್ಸ್ ಪಡೆದ ಪಿಸ್ತೂಲ್‌ನೊಂದಿಗೆ ಕೆಲವು ಗಂಟೆಗಳ ನಂತರ ಕಪ್ತಂಗಂಜ್ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: Murder: ಗಂಡನ ಉಗುರಿನಲ್ಲಿದ್ದ ರಕ್ತದ ಕಲೆಯಿಂದ ಬಯಲಾಯ್ತು ಹೆಂಡತಿ ಕೊಲೆಯ ರಹಸ್ಯ!

ಮನೋಜ್‌ನನ್ನು ಬಂಧಿಸಲಾಗಿದ್ದು, ಈ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಅಜಂಗಢದ ಸರ್ಕಲ್ ಅಧಿಕಾರಿ ಲಲ್ತಾ ಪ್ರಸಾದ್ ತಿಳಿಸಿದ್ದಾರೆ. ಮನೀಷ್ 6 ವರ್ಷದವನಾಗಿದ್ದಾಗ ಅವಧ್ರಾಜಿ ದತ್ತು ಪಡೆದಿರುವುದು ಪ್ರಾಥಮಿಕ ವಿಚಾರಣೆ ವೇಳೆ ಪೊಲೀಸರಿಗೆ ತಿಳಿದು ಬಂದಿದೆ ಎಂದು ಕಪ್ತಂಗಂಜ್ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇನ್ನಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:49 am, Thu, 23 June 22

‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ