Viral News: ಮದುವೆಯಲ್ಲಿ ಹಾಡಿನ ವಿಚಾರಕ್ಕೆ ಗಲಾಟೆ; ಅತಿಥಿಗೆ ಶೂಟ್ ಮಾಡಿ ಕೊಂದ ಮದುಮಗ!

Viral News: ಮದುವೆಯಲ್ಲಿ ಹಾಡಿನ ವಿಚಾರಕ್ಕೆ ಗಲಾಟೆ; ಅತಿಥಿಗೆ ಶೂಟ್ ಮಾಡಿ ಕೊಂದ ಮದುಮಗ!
ಪ್ರಾತಿನಿಧಿಕ ಚಿತ್ರ
Image Credit source: google

Murder: ಮದುವೆಯಲ್ಲಿ ಹಾಡುಗಳನ್ನು ನುಡಿಸುವ ವಿವಾದದ ಹಿನ್ನೆಲೆಯಲ್ಲಿ ಮದುವೆಗೆ ಬಂದಿದ್ದ ಅತಿಥಿಯೊಬ್ಬರನ್ನು ವರನು ಗುಂಡಿಕ್ಕಿ ಕೊಂದಿದ್ದಾನೆ.

TV9kannada Web Team

| Edited By: Sushma Chakre

May 10, 2022 | 6:38 PM

ನವದೆಹಲಿ: ಮದುವೆಯಲ್ಲಿ (Wedding) ತನಗಿಷ್ಟವಾದ ಹಾಡುಗಳನ್ನು ಹಾಕಿಲ್ಲ ಎಂಬ ಕಾರಣಕ್ಕೆ ಗಲಾಟೆ ಉಂಟಾಗಿ ಮದುವೆಗೆ ಬಂದಿದ್ದ ಅತಿಥಿಯೊಬ್ಬರನ್ನು ವರನೇ ಗುಂಡಿಕ್ಕಿ ಕೊಲೆ (Murder) ಮಾಡಿರುವ ಆಘಾತಕಾರಿ ಘಟನೆ ಉತ್ತರಪ್ರದೇಶದ ಮುಜಾಫರ್‌ನಗರದ ಶಾಹಪುರ್ ಪ್ರದೇಶದಲ್ಲಿ ನಡೆದಿದೆ. ಮದುವೆಯಲ್ಲಿ ಹಾಡುಗಳನ್ನು ನುಡಿಸುವ ವಿವಾದದ ಹಿನ್ನೆಲೆಯಲ್ಲಿ ಮದುವೆಗೆ ಬಂದಿದ್ದ ಅತಿಥಿಯೊಬ್ಬರನ್ನು ವರನು ಗುಂಡಿಕ್ಕಿ ಕೊಂದಿದ್ದಾನೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಮೃತರನ್ನು ಜಾಫರ್ ಅಲಿ ಎಂದು ಗುರುತಿಸಲಾಗಿದ್ದು, ಅವರು ವಧುವಿನ ಕಡೆಯವರಾಗಿದ್ದಾರೆ. ಮದುವೆ ಮೆರವಣಿಗೆಯಲ್ಲಿ ಡಿಜೆ ಹಾಡುಗಳನ್ನು ನುಡಿಸುವುದನ್ನು ಕೆಲವರು ವಿರೋಧಿಸಿದ್ದರಿಂದ ವರ ಮತ್ತು ವಧುವಿನ ಕಡೆಯ ಜನರ ನಡುವೆ ಘರ್ಷಣೆ ಏರ್ಪಟ್ಟಿತ್ತು. ಇದೇ ಜಗಳಕ್ಕೆ ಕಾರಣವಾಗಿ, ಕೊಲೆ ನಡೆದಿದೆ ಎಂದು ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ (ಗ್ರಾಮೀಣ) ಅತುಲ್ ಶ್ರೀವಾಸ್ತವ್ ಹೇಳಿದ್ದಾರೆ. (Source)

ಈ ಗಲಾಟೆಯ ಬಳಿಕ ಕೋಪಗೊಂಡ ಮದುಮಗ ಇಫ್ತಿಕರ್ ಗುಂಡು ಹಾರಿಸಿದ್ದು, ಜಾಫರ್ ಅಲಿ ಗಾಯಗೊಂಡಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದರು. ಈ ಪ್ರಕರಣದಲ್ಲಿ ಪೊಲೀಸರು ಇಫ್ತಿಕರ್ ನನ್ನು ಬಂಧಿಸಿದ್ದು, ಗ್ರಾಮದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಮದುವೆಯಾಗಬೇಕಿದ್ದ ವರ ಇದೀಗ ಕೊಲೆ ಮಾಡಿ, ಜೈಲು ಸೇರಿದ್ದಾನೆ.

ಇನ್ನಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow us on

Related Stories

Most Read Stories

Click on your DTH Provider to Add TV9 Kannada