ಉದ್ಯೋಗ ಖಾತ್ರಿ ಕಾರ್ಡ್​​​​​ ಮಾಡಿಸಿ ಸತ್ತವರ ಹೆಸರಿನಲ್ಲಿ ಲಕ್ಷಾಂತರ ರೂ. ವಂಚನೆ: ಪಿಡಿಒ ಅಮಾನತು

231 ಎಕರೆ ಗೋಮಾಳ್ ಜಮೀನನ್ನು ಉಳಿಸಲು ಕುರಿಗಳ ಸಹಿತ ತಾಲೂಕಾ ಕಚೇರಿಗೆ ರೈತರು ಮುತ್ತಿಗೆ ಹಾಕಿದ್ದಾರೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಾ ಕಚೇರಿಗೆ ಕುರಿಗಳೊಂದಿಗೆ ಮುತ್ತಿಗೆ ಹಾಕಿದರು.

ಉದ್ಯೋಗ ಖಾತ್ರಿ ಕಾರ್ಡ್​​​​​ ಮಾಡಿಸಿ ಸತ್ತವರ ಹೆಸರಿನಲ್ಲಿ ಲಕ್ಷಾಂತರ ರೂ. ವಂಚನೆ: ಪಿಡಿಒ ಅಮಾನತು
PDO ಎ.ಟಿ.ನಾಗರಾಜ್
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Jun 23, 2022 | 1:49 PM

ದಾವಣಗೆರೆ: ಸತ್ತವರ ಹೆಸರಿನಲ್ಲಿ ಉದ್ಯೋಗ ಖಾತ್ರಿ ಕಾರ್ಡ್ (Employment Guarantee Card)​​​​​ ಮಾಡಿಸಿ ಲಕ್ಷಾಂತರ ರೂ. ವಂಚನೆ ಆರೋಪ ಹಿನ್ನೆಲೆ PDO ಎ.ಟಿ.ನಾಗರಾಜ್ ಸಸ್ಪೆಂಡ್​ ಮಾಡಿ, ಜಿ.ಪಂ. ಸಿಇಒ ಚನ್ನಪ್ಪ ಆದೇಶ ಹೊರಡಿಸಿದೆ. ಜಿಲ್ಲೆಯ ಜಗಳೂರು ತಾಲೂಕಿನ ಗ್ರಾಮಗಳಾದ ಅಣಬೂರ, ಹನಮಂತಾಪುರ ಗ್ರಾ.ಪಂ. ಪಿಡಿಒ ನಾಗರಾಜ್​ ಸತ್ತವರ ಹೆಸರಿನಲ್ಲಿ ಉದ್ಯೋಗ ಖಾತ್ರಿ ಕಾರ್ಡ್​ ಮಾಡಿಸಿ ಹಣ ಪಡೆಯುತ್ತಿದ್ದ. ಸುಮಾರು 60 ಲಕ್ಷ ರೂಪಾಯಿ ಮೌಲ್ಯದ ಸಾಮಗ್ರಿ ಖರೀದಿ ಮಾಡಿದ್ದು, 32 ಲಕ್ಷ ರೂಪಾಯಿಗೆ ಪಿಡಿಒ ನಾಗರಾಜ್ ಲೆಕ್ಕ ಕೊಟ್ಟಿಲ್ಲ. ಈ ಬಗ್ಗೆ ತನಿಖೆ ಮಾಡಿ ಆರೋಪ ಸಾಬೀತಾದ ಹಿನ್ನೆಲೆ ಅಮಾನತುಗೊಳಿಸಿದೆ.

ಗೋಮಾಳ ಜಮೀನು ಉಳಿಸುವಂತೆ ರೈತರಿಂದ ಪ್ರತಿಭಟನೆ

231 ಎಕರೆ ಗೋಮಾಳ್ ಜಮೀನನ್ನು ಉಳಿಸಲು ಕುರಿಗಳ ಸಹಿತ ತಾಲೂಕಾ ಕಚೇರಿಗೆ ರೈತರು ಮುತ್ತಿಗೆ ಹಾಕಿದ್ದಾರೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಾ ಕಚೇರಿಗೆ ಕುರಿಗಳೊಂದಿಗೆ ಮುತ್ತಿಗೆ ಹಾಕಿ, ಹೊನ್ನಾಳಿ ತಾಲೂಕಿನ ಅರಬಗಟ್ಟೆ ಗ್ರಾಮದ ರೈತರಿಂದ ವಿನೂತನ ಪ್ರತಿಭಟನೆ ಮಾಡಿದ್ದಾರೆ. ಗ್ರಾಮದ ಎಳು ಸರ್ವೇ ನಂಬರ್​ನಲ್ಲಿ ಸುಮಾರು 231 ಎರಕೆ ಜಮೀನು‌ ಗ್ರಾಮದ ಪ್ರಭಾವಿಗಳು‌ ಒತ್ತುವರಿ ಮಾಡಿದ್ದಾರೆ. ಇದರಿಂದ ಕುರಿ ಜಾನುವಾರು ಮೇಯಿಸಲು ಸ್ಥಳವಿಲ್ಲದಂತಾಗಿದೆ. ಸರ್ಕಾರಿ ಗೋಮಾಳ ಬಿಡಿಸಿ ಕೊಡಿ ಇಲ್ಲಾ ಉಗ್ರ ಹೋರಾಟ ಮಾಡುವುದಾಗಿ ರೈತ ಹೋರಾಟಗಾರರು ಎಚ್ಚರಿಕೆ ನೀಡಿದ್ದಾರೆ.

ನಕಲಿ ರಸಗೊಬ್ಬರ ತಯಾರಿಕಾ ಘಟಕದ ಮೇಲೆ ಅಧಿಕಾರಿಗಳ ದಾಳಿ

ಮೈಸೂರು: ನಕಲಿ ರಸಗೊಬ್ಬರ ತಯಾರಿಕಾ ಘಟಕದ ಮೇಲೆ ಅಧಿಕಾರಿಗಳ ದಾಳಿ ಮಾಡಿದ್ದು, ಅಪಾರ ಪ್ರಮಾಣದ ನಕಲಿ ರಸಗೊಬ್ಬರ ವಶಕ್ಕೆ ಪಡೆಯಲಾಗಿದೆ. ನಂಜನಗೂಡು ತಾಲ್ಲೂಕು ಹಿರೀಕಾಟಿ ಗ್ರಾಮದಲ್ಲಿ ನಕಲಿ ಗೊಬ್ಬರ ತಯಾರಿಕಾ ಘಟಕ ನಡೆಸಲಾಗುತ್ತಿತ್ತು. ನಂಜನಗೂಡು ಹಾಗೂ ಮೈಸೂರು ಕೃಷಿ ಅಧಿಕಾರಿಗಳ ಕಾರ್ಯಾಚರಣೆ ನಡೆಸಿ ನೂರಾರು ಟನ್ ನಕಲಿ ರಸಗೊಬ್ಬರ ವಶಕ್ಕೆ ಪಡೆಯಲಾಗಿದೆ. ಜಮೀನು‌ ಮಾಲೀಕ‌ ಹಾಗೂ ಆರೋಪಿಗಳು ಪರಾರಿಯಾಗಿದ್ದು, ಮಣ್ಣಿಗೆ ಗೊಬ್ಬರದ ಬಣ್ಣ ಮಿಶ್ರಣ ಮಾಡಲಾಗಿದೆ. ಪ್ರತಿಷ್ಠಿತ ಕಂಪನಿಯ ಬ್ಯಾಗ್‌ಗಳಲ್ಲಿ ತುಂಬಿ ಆರೋಪಿಗಳು ಮಾರಾಟ ಮಾಡುತ್ತಿದ್ದರು. ನಂಜನಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 1:32 pm, Thu, 23 June 22

‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ