ಮಾನ್ಸೂನ್ ಅಬ್ಬರಕ್ಕೆ ಉತ್ತರ ಭಾರತ ತತ್ತರ, ಅಸ್ಸಾಂನಲ್ಲಿ ಪ್ರವಾಹಕ್ಕೆ ಸಿಲುಕಿ 37 ಮಂದಿ ಬಲಿ

|

Updated on: Jul 06, 2020 | 7:37 AM

ಗಾಂಧಿನಗರ್: ಉತ್ತರ ಭಾರತದಲ್ಲಿ ವರುಣನ ರುದ್ರನರ್ತನ ಶುರುವಾಗಿದೆ. ಗುಜರಾತ್​ನ ಹಲವು ಜಿಲ್ಲೆಗಳಲ್ಲಿ ಪ್ರವಾಹದ ಅಬ್ಬರ ಜೋರಾಗಿದ್ದು, ದೇವ್​ಭೂಮಿ ದ್ವಾರಕಾ, ಪೋರ್​ಬಂದರ್, ಗಿರ್ ಸೋಮನಾಥ್ ಜುನಾಗಢ್, ಅಮ್ರೆಲಿ, ವಲ್ಸದ್ ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿಯುತ್ತಿದೆ. ಖಾಂಬಾಲಿಯಾದಲ್ಲಿ 2 ಗಂಟೆಯಲ್ಲಿ 12 ಇಂಚು ಮಳೆಯಾಗಿದೆ. ಪ್ರವಾಹದ ಹೊಡೆತಕ್ಕೆ ಹಲವು ಜಿಲ್ಲೆಗಳ ಜನರ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆಗಳಿಗೆ, ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಅಸ್ಸಾಂನಲ್ಲಿ ಪ್ರವಾಹದಿಂದ 17 ಜಿಲ್ಲೆಗಳಲ್ಲಿ 6 ಲಕ್ಷ 80 ಸಾವಿರಕ್ಕೂ ಹೆಚ್ಚು ಜನರಿಗೆ ಸಂಕಷ್ಟ […]

ಮಾನ್ಸೂನ್ ಅಬ್ಬರಕ್ಕೆ ಉತ್ತರ ಭಾರತ ತತ್ತರ, ಅಸ್ಸಾಂನಲ್ಲಿ ಪ್ರವಾಹಕ್ಕೆ ಸಿಲುಕಿ 37 ಮಂದಿ ಬಲಿ
Follow us on

ಗಾಂಧಿನಗರ್: ಉತ್ತರ ಭಾರತದಲ್ಲಿ ವರುಣನ ರುದ್ರನರ್ತನ ಶುರುವಾಗಿದೆ. ಗುಜರಾತ್​ನ ಹಲವು ಜಿಲ್ಲೆಗಳಲ್ಲಿ ಪ್ರವಾಹದ ಅಬ್ಬರ ಜೋರಾಗಿದ್ದು, ದೇವ್​ಭೂಮಿ ದ್ವಾರಕಾ, ಪೋರ್​ಬಂದರ್, ಗಿರ್ ಸೋಮನಾಥ್ ಜುನಾಗಢ್, ಅಮ್ರೆಲಿ, ವಲ್ಸದ್ ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿಯುತ್ತಿದೆ.

ಖಾಂಬಾಲಿಯಾದಲ್ಲಿ 2 ಗಂಟೆಯಲ್ಲಿ 12 ಇಂಚು ಮಳೆಯಾಗಿದೆ. ಪ್ರವಾಹದ ಹೊಡೆತಕ್ಕೆ ಹಲವು ಜಿಲ್ಲೆಗಳ ಜನರ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆಗಳಿಗೆ, ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಅಸ್ಸಾಂನಲ್ಲಿ ಪ್ರವಾಹದಿಂದ 17 ಜಿಲ್ಲೆಗಳಲ್ಲಿ 6 ಲಕ್ಷ 80 ಸಾವಿರಕ್ಕೂ ಹೆಚ್ಚು ಜನರಿಗೆ ಸಂಕಷ್ಟ ಎದುರಾಗಿದೆ. ಅಸ್ಸಾಂನ 62 ಪರಿಹಾರ ಕೇಂದ್ರದಲ್ಲಿ 4,852 ನೆರೆಸಂತ್ರಸ್ತರಿದ್ದಾರೆ. ಅಸ್ಸಾಂನಲ್ಲಿ ಪ್ರವಾಹಕ್ಕೆ ಸಿಲುಕಿ 37 ಮಂದಿ ಕೊನೆಯುಸಿರೆಳೆದಿದ್ದಾರೆ.