ಶಾಲೆಗೆ ಹೋಗಲು 24 ಕಿ.ಮೀ ಸೈಕಲ್ ಓಡಿಸುತ್ತಿದ್ದ ಹುಡುಗಿ, 8ನೇ ರ್ಯಾಂಕ್.. ಎಲ್ಲಿ?
ಮಧ್ಯಪ್ರದೇಶ: ಸಾಧಿಸುವ ಛಲ ಇದ್ದರೆ ಏನು ಬೇಕಾದ್ರು ಮಾಡಬಹುದು ಎಂಬುವುದಕ್ಕೆ ಉತ್ತಮ ಉದಾಹರಣೆಯಂತೆ ಬಿಂಡ್ ಜಿಲ್ಲೆಯ ಅಜ್ನಾಲ್ ಗ್ರಾಮದ 15 ವರ್ಷದ ರೋಶ್ನಿ ಭಡೌರಿಯಾ ಮಾಡಿ ತೂರಿಸಿದ್ದಾಳೆ. ಈಕೆ ಮಧ್ಯಪ್ರದೇಶ ರಾಜ್ಯ ಮಂಡಳಿ ನಡೆಸಿದ 10 ನೇ ತರಗತಿ ಪರೀಕ್ಷೆಯಲ್ಲಿ ಶೇ 98.5 ಅಂಕಗಳನ್ನು ಗಳಿಸಿ ಎಂಟನೇ ರ್ಯಾಂಕ್ ಪಡೆದಿದ್ದಾಳೆ. ರೋಶ್ನಿ ಶಾಲೆಗೆ ಹಾಜರಾಗಲು ಪ್ರತಿದಿನ 24 ಕಿಲೋಮೀಟರ್ ಸೈಕಲ್ ಓಡಿಸುತ್ತಿದ್ದಳು. ಸರ್ಕಾರ ನೀಡಿದ ಸೈಕಲ್ನ ನಾನು ಚೆನ್ನಾಗಿ ಬಳಸಿಕೊಂಡಿದ್ದೇನೆ. ನಾನು ಪ್ರತಿದಿನ ನಾಲ್ಕರಿಂದ ನಾಲ್ಕೂವರೆ ಗಂಟೆಗಳ […]
ಮಧ್ಯಪ್ರದೇಶ: ಸಾಧಿಸುವ ಛಲ ಇದ್ದರೆ ಏನು ಬೇಕಾದ್ರು ಮಾಡಬಹುದು ಎಂಬುವುದಕ್ಕೆ ಉತ್ತಮ ಉದಾಹರಣೆಯಂತೆ ಬಿಂಡ್ ಜಿಲ್ಲೆಯ ಅಜ್ನಾಲ್ ಗ್ರಾಮದ 15 ವರ್ಷದ ರೋಶ್ನಿ ಭಡೌರಿಯಾ ಮಾಡಿ ತೂರಿಸಿದ್ದಾಳೆ. ಈಕೆ ಮಧ್ಯಪ್ರದೇಶ ರಾಜ್ಯ ಮಂಡಳಿ ನಡೆಸಿದ 10 ನೇ ತರಗತಿ ಪರೀಕ್ಷೆಯಲ್ಲಿ ಶೇ 98.5 ಅಂಕಗಳನ್ನು ಗಳಿಸಿ ಎಂಟನೇ ರ್ಯಾಂಕ್ ಪಡೆದಿದ್ದಾಳೆ.
ರೋಶ್ನಿ ಶಾಲೆಗೆ ಹಾಜರಾಗಲು ಪ್ರತಿದಿನ 24 ಕಿಲೋಮೀಟರ್ ಸೈಕಲ್ ಓಡಿಸುತ್ತಿದ್ದಳು. ಸರ್ಕಾರ ನೀಡಿದ ಸೈಕಲ್ನ ನಾನು ಚೆನ್ನಾಗಿ ಬಳಸಿಕೊಂಡಿದ್ದೇನೆ. ನಾನು ಪ್ರತಿದಿನ ನಾಲ್ಕರಿಂದ ನಾಲ್ಕೂವರೆ ಗಂಟೆಗಳ ಕಾಲ ಅಧ್ಯಯನ ಮಾಡುತ್ತಿದ್ದೆ. ನಾಣು ಭವಿಷ್ಯದಲ್ಲಿ ಐಎಎಸ್ ಆಗಲು ತಯಾರಿ ನಡೆಸಲು ಬಯಸುತ್ತೇನೆ” ಎಂದು ರೋಶ್ನಿ ತನ್ನ ಆಸೆ ಬಿಚ್ಚಿಟ್ಟಿದ್ದಾಳೆ.
ರೋಶ್ನಿ ತಾನು ಇಂತಹ ಉತ್ತಮ ಶ್ರೇಣಿಯನ್ನು ಪಡೆದು ರ್ಯಾಂಕ್ ಬರ್ತೀನಿ ಎಂಬ ನಿರೀಕ್ಷೆ ಇರಲಿಲ್ಲ. ಆದರೆ ಪರೀಕ್ಷೆಗಳನ್ನು ಎದುರಿಸಲು ಶ್ರದ್ಧೆಯಿಂದ ಓದುತ್ತಿದ್ದೆ. ನನ್ನ ತಂದೆಯ ನಿರಂತರ ಬೆಂಬಲದಿಂದಾಗಿ ತನ್ನ ಅಧ್ಯಯನದ ಬಗ್ಗೆ ಸಂಪೂರ್ಣ ಗಮನ ಹರಿಸಲು ಸಾಧ್ಯವಾಯಿತು ಎಂದು ಅವಳು ಹೇಳಿದಳು.
ನನ್ನ ಮಗಳು ನಿಜಕ್ಕೂ ತುಂಬಾ ಶ್ರಮವಹಿಸಿದ್ದಾಳೆ. ಇದು ಕುಟುಂಬದ ಎಲ್ಲರಿಗೂ ಹೆಮ್ಮೆ ತಂದಿದೆ ಎಂದು ರೈತರಾಗಿರುವ ರೋಶ್ನಿಯ ತಂದೆ ಪುರ್ಷೋತ್ತಂ ಭಡೋರಿಯಾ ಹೇಳಿದ್ರು. ಜೊತೆಗೆ ನನ್ನ ಮಗಳು ಎತ್ತರಕ್ಕೆ ಬೆಳೆದು ಅವಳು ಐಎಎಸ್ ಅಧಿಕಾರಿಯಾಗುವ ಕನಸುಗಳನ್ನು ಸಾಧಿಸಲು ಬಯಸುತ್ತೇನೆ ಎಂದು ತಾಯಿ ಸರಿತಾ ಭಡೋರಿಯಾ ಹೇಳಿದ್ದಾರೆ. ಒಟ್ಟಿನಲ್ಲಿ ಕೊರೊನಾ ನಡುವೆ ಶನಿವಾರ ಎಂಪಿ ಬೋರ್ಡ್ ಪ್ರಕಟಿಸಿದ 10 ನೇ ತರಗತಿ ಪರೀಕ್ಷೆಯ ಫಲಿತಾಂಶ ಈ ಕುಟುಂಬಕ್ಕೆ ಸಂತೋಷ ತಂದಿದೆ. ಕನಸು ಕಾಣುತ್ತಿದ್ದ ರೋಶ್ನಿಗೆ ತನ್ನ ಕನಸು ನನಸು ಮಾಡುವ ಛಲ ತುಂಬಿದೆ.
Published On - 9:41 am, Mon, 6 July 20