Morbi Bridge Tragedy: ಗುಜರಾತ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್, ಉನ್ನತ ಅಧಿಕಾರಿಗಳನ್ನು ಯಾಕಿನ್ನೂ? ಬಂಧಿಸಿಲ್ಲ

| Updated By: ಅಕ್ಷಯ್​ ಪಲ್ಲಮಜಲು​​

Updated on: Nov 15, 2022 | 12:46 PM

130ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾದ ಮೋರ್ಬಿಯಲ್ಲಿ ಸೇತುವೆಯ ನವೀಕರಣಕ್ಕಾಗಿ ಗುತ್ತಿಗೆ ನೀಡಲಾದ ವಿಧಾನವನ್ನು ಗುಜರಾತ್ ಹೈಕೋರ್ಟ್ ಇಂದು ಖಂಡಿಸಿದೆ. ಸಾರ್ವಜನಿಕ ಸೇತುವೆಯ ದುರಸ್ತಿ ಕಾಮಗಾರಿಗೆ ಟೆಂಡರ್ ಏಕೆ ಕರೆಯಲಿಲ್ಲ? ಏಕೆ ಬಿಡ್‌ ದುರಸ್ತಿಗೆ ಗುತ್ತಿದಾರರನ್ನು ಆಹ್ವಾನಿಸಿಲ್ಲ?

Morbi Bridge Tragedy: ಗುಜರಾತ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್, ಉನ್ನತ ಅಧಿಕಾರಿಗಳನ್ನು ಯಾಕಿನ್ನೂ? ಬಂಧಿಸಿಲ್ಲ
Morbi Bridge
Follow us on

ಅಹಮದಾಬಾದ್: ಅಕ್ಟೋಬರ್ 30 ರಂದು ಗುಜರಾತ್​ನ ಮೋರ್ಬಿಯಲ್ಲಿ ತೂಗು ಸೇತುವೆ ಕುಸಿದು ಹಲವಾರು ಮಂದಿ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಸರ್ಕಾರವೇ ಹೊಣೆ ಎಂಬಂತೆ ಚರ್ಚೆಗಳು ನಡೆಯಿತು. ಇದೀಗ ಈ ಘಟನೆಯಿಂದ 130ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾದ ಮೋರ್ಬಿಯಲ್ಲಿ ಸೇತುವೆಯ ನವೀಕರಣಕ್ಕಾಗಿ ಗುತ್ತಿಗೆ ನೀಡಲಾದ ವಿಧಾನವನ್ನು ಗುಜರಾತ್ ಹೈಕೋರ್ಟ್ ಇಂದು ಖಂಡಿಸಿದೆ. ಸಾರ್ವಜನಿಕ ಸೇತುವೆಯ ದುರಸ್ತಿ ಕಾಮಗಾರಿಗೆ ಟೆಂಡರ್ ಏಕೆ ಕರೆಯಲಿಲ್ಲ? ಏಕೆ ಬಿಡ್‌ ದುರಸ್ತಿಗೆ ಗುತ್ತಿದಾರರನ್ನು ಆಹ್ವಾನಿಸಿಲ್ಲ? ಮಧ್ಯಾಹ್ನದ ಮೊದಲು ಆರಂಭವಾದ ವಿಚಾರಣೆಯ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರು ರಾಜ್ಯದ ಉನ್ನತ ಅಧಿಕಾರಿಯಾದ ಮುಖ್ಯ ಕಾರ್ಯದರ್ಶಿಗೆ ಈ ಪ್ರಶ್ನೆಗಳನ್ನು ಕೇಳಿದ್ದ್ದಾರೆ.

ಅಜಂತಾ ಬ್ರಾಂಡ್‌ಗೆ ಹೆಸರುವಾಸಿಯಾದ ಒರೆವಾ ಗ್ರೂಪ್‌ಗೆ ಮೊರ್ಬಿ ಪುರಸಭೆಯು 15 ವರ್ಷಗಳ ಗುತ್ತಿಗೆಯನ್ನು ನೀಡಿತ್ತು. ಸರ್ಕಾರಿ ಸಂಸ್ಥೆಯಾಗಿರುವ ಪುರಸಭೆಯು ಡೀಫಾಲ್ಟ್ ಮಾಡಿದೆ, ಇದು ಈಗ 135 ಜನರನ್ನು ಕೊಂದಿದೆ ಎಂದು ನ್ಯಾಯಾಲಯ ಹೇಳಿದೆ. ಇಂತಹ ಮಹತ್ವದ ಕೆಲಸದ ಅಗ್ರಿಮೆಂಟ್ ಕೇವಲ ಒಂದೂವರೆ ಪುಟಗಳಲ್ಲಿ ಹೇಗೆ ಪೂರ್ಣಗೊಂಡಿತು? ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದರು. ಯಾವುದೇ ಟೆಂಡರ್‌ ಕರೆಯದೇ ರಾಜ್ಯದ ದೊಡ್ಡ ಮೊತ್ತವನ್ನು ಅಜಂತಾ ಕಂಪನಿಗೆ ನೀಡಲಾಗಿದೆಯೇ? ಈ ಬಗ್ಗೆ ನ್ಯಾಯಾಲಯವು ಮತ್ತಷ್ಟು ವಿಚಾರಣೆಯನ್ನು ಮಾಡಿದೆ.

ಜೂನ್ 2017 ರ ನಂತರ [2008 ರಲ್ಲಿ ಸಹಿ ಮಾಡಿದ ಒಪ್ಪಂದ] 2017ರ ನಂತರ ನವೀಕರಿಸದಿದ್ದರೂ ಸಹ ಸೇತುವೆಯನ್ನು ಕಂಪನಿಯು ಯಾವ ಆಧಾರದ ಮೇಲೆ ನಿರ್ವಹಿಸುತ್ತಿದೆ ಎಂದು ಕೋರ್ಟ್ ಸ್ಪಷ್ಟವಾಗಿ ಕೇಳಿದೆ. ಈ ದುರಂತದ ಬಗ್ಗೆ ನ್ಯಾಯಾಲಯದ ಗಮನಕ್ಕೆ ಬಂದಿದೆ ಮತ್ತು ಆರು ಇಲಾಖೆಗಳಿಂದ ಈ ಬಗ್ಗೆ ಉತ್ತರವನ್ನು ಕೇಳಿದೆ. ಮುಖ್ಯ ನ್ಯಾಯಮೂರ್ತಿ ಅರವಿಂದ್ ಕುಮಾರ್ ಮತ್ತು ನ್ಯಾಯಮೂರ್ತಿ ಅಶುತೋಷ್ ಜೆ ಶಾಸ್ತ್ರಿ ಅವರು ಪ್ರಕರಣದ ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನು ಓದಿ:Morbi bridge collapse: ಕಳೆದ ವಾರವಷ್ಟೇ ನವೀಕರಿಸಲಾಗಿದ್ದ ಮೊರ್ಬಿ ಸೇತುವೆ ಕುಸಿತಕ್ಕೆ ಕಾರಣವೇನು?

ಇಲ್ಲಿಯವರೆಗೆ ಗುತ್ತಿಗೆ ಪಡೆದ ಕಂಪನಿಯ ಕೆಲ ಸಿಬ್ಬಂದಿಯನ್ನು ಮಾತ್ರ ಬಂಧಿಸಲಾಗಿದ್ದು, 7 ಕೋಟಿ ರೂ. ಒಪ್ಪಂದಕ್ಕೆ ಸಹಿ ಹಾಕಿರುವ ಉನ್ನತ ಆಡಳಿತ ಮಂಡಳಿ ಕ್ರಮಕ್ಕೆ ಮುಂದಾಗಿಲ್ಲ, ಸೇತುವೆಗ ದುರಂತಕ್ಕೆ ಯಾವುದೇ ಉನ್ನತ ಅಧಿಕಾರಿಗಳನ್ನು ಹೊಣೆ ಮಾಡಿಲ್ಲ. ನವೀಕರಣ ಮಾಡಿದ ದಿನಾಮಕ ಮೊದಲೇ ಈ ಸೇತುವೆಗೆ ಸಾರ್ವಜನಿಕ ಪ್ರವೇಶಕ್ಕೆ ಅನುಮತಿ ನೀಡಿದೆ ಎಂದು ಕೋರ್ಟ್ ಹೇಳಿದೆ. ಮೊದಲ ದಿನದಿಂದ ಒಪ್ಪಂದದ ಕಡತಗಳನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಲು ನ್ಯಾಯಾಲಯವು ಸರ್ಕಾರವನ್ನು ಕೇಳಿದೆ.

Published On - 12:45 pm, Tue, 15 November 22