ರಸಗೊಬ್ಬರದಲ್ಲಿ ಆತ್ಮನಿರ್ಭರ ಭಾರತ, ನ.12ರಂದು ತೆಲಂಗಾಣದಲ್ಲಿ ಯೂರಿಯಾ ಉತ್ಪಾದನಾ ಘಟಕ ಉದ್ಘಾಟಿಸಲಿರುವ ಮೋದಿ

| Updated By: ರಮೇಶ್ ಬಿ. ಜವಳಗೇರಾ

Updated on: Nov 09, 2022 | 9:47 PM

ಭಾರತ ಎಲ್ಲಾ ಕ್ಷೇತ್ರದಲ್ಲಿ ಸ್ವಾವಲಂಬಿಯಾಗಬೇಕು. ಇತರ ದೇಶಗಳ ಅವಲಂಬನೆಯಿಂದ ಹೊರಬರಬೇಕು ಎನ್ನುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಆತ್ಮನಿರ್ಬರ್ ಭಾರತ್ ಯೋಜನೆ ಜಾರಿಗೆ ತಂದಿದ್ದು, ಇದೀಗ ಕೃಷಿ ರಸಗೊಬ್ಬರ ಉತ್ಪಾದನೆಯಲ್ಲಿ ಭಾರತ ಸ್ವಾವಲಂಬಿಯಾ ಸ್ವಾವಲಂಬಿಯಾಗಿದೆ.

ರಸಗೊಬ್ಬರದಲ್ಲಿ ಆತ್ಮನಿರ್ಭರ ಭಾರತ, ನ.12ರಂದು ತೆಲಂಗಾಣದಲ್ಲಿ ಯೂರಿಯಾ ಉತ್ಪಾದನಾ ಘಟಕ ಉದ್ಘಾಟಿಸಲಿರುವ ಮೋದಿ
ಕನ್ನಡಿಗನನ್ನು ಶ್ಲಾಘಿಸುತ್ತಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ
Follow us on

ನವದೆಹಲಿ(ನ.09): ರೈತರಿಗೆ ಸೂಕ್ತ ಕಾಲದಲ್ಲಿ ರಸಗೊಬ್ಬರ (Fertilizer )ಪೂರೈಕೆ ಮಾಡವು ನಿಟ್ಟಿನಲ್ಲಿ ಪ್ರಧಾನಿ ಮೋದಿ (Narendra Modi) ಭಾರತದಲ್ಲೇ ರಸಗೊಬ್ಬರ ಉತ್ಪಾದನೆಗೆ ಯೋಜನೆ ರೂಪಿಸಿ ಹಂತ-ಹಂತವಾಗಿ ಕಾರ್ಯರೂಪಗೊಳಿಸಿಸುತ್ತಿದ್ದಾರೆ. ಮಹತ್ವಾಂಕ್ಷಿ ಯೋಜನೆಗಳಿಂದ ಭಾರತ ಇದೀಗ ಒಂದೊಂದೇ ಕ್ಷೇತ್ರದಲ್ಲಿ ಆತ್ಮನಿರ್ಭರತೆ ಸಾಧಿಸುತ್ತಿದೆ. ಇದೀಗ ರಸಗೊಬ್ಬರ ಕ್ಷೇತ್ರದಲ್ಲೂ ಭಾರತ ಆತ್ಮನಿರ್ಭರ್ ಭಾರತವಾಗುತ್ತಿದ್ದು, ಇದೇ ನವೆಂಬರ್ 12 ರಂದು ತೆಲಂಗಾಣದ ರಾಮಗುಂಡನಲ್ಲಿನ ನೂತನ ರಸಗೊಬ್ಬರ ಉತ್ಪಾದಕ ಘಟಕವನ್ನು (Ramagundam Fertilizer plant) ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ.

ರಾಮಗುಂಡಂ ರಸಗೊಬ್ಬರ ಘಟಕ ಯೋಜನೆಗೆ ಪ್ರಧಾನಿ ಮೋದಿ, 2016ರ ಆಗಸ್ಟ್ 7 ರಂದು ಶಂಕುಸ್ಥಾಪನೆ ಮಾಡಿದ್ದರು. ಇದೀಗ ಭಾರತ ಸ್ವಾವಲಂಬಿಯಾಗಿ ಯೂರಿಯೂ ಉತ್ಪಾದನೆ ಮಾಡಲಾಗಿದೆ. ಇದರಿಂದ ವಿದೇಶಗಳಿಂದ ಆಮದು ಮಾಡುವ ಪರಿಪಾಠ ತಪ್ಪಲಿದೆ. ಈ ಮೂಲಕ ಯೂರಿಯೂ ಸೇರಿದಂತೆ ಕೃಷಿ ರಸಗೊಬ್ಬರ ಉತ್ಪಾದನೆಯಲ್ಲಿ ಭಾರತ ಸ್ವಾವಲಂಬಿಯಾಗಬೇಕೆಂಬ ಉದ್ದೇಶ ಇಟ್ಟಿದ್ದರು. ಈ ಪ್ರಯತ್ನಕ್ಕೆ ಇದೀಗ ಮತ್ತೊಂದು ಯಶಸ್ಸು ಸಿಕ್ಕಿದೆ.

ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಪ್ರತಿ ಕ್ಷೇತ್ರದಲ್ಲಿ ಭಾರತ ಆತ್ಮನಿರ್ಭರತೆ ಸಾಧಿಸಲು ಪ್ರಯತ್ನಿಸುತ್ತಿದ್ದಾರೆ. 2014ರ ಬಳಿಕ ಮೋದಿ ಮುಚ್ಚಿ ಹೋಗಿದ್ದ ಹಲವು ರಸಗೊಬ್ಬರ ಘಟಕಗಳನ್ನು ಪುನರುಜ್ಜೀವನ ಗೊಳಿಸುತ್ತಿದ್ದಾರೆ. ಈ ಮೂಲಕ ಯೂರಿಯೂ ಸೇರಿದಂತೆ ಕೃಷಿ ರಸಗೊಬ್ಬರ ಉತ್ಪಾದನೆಯಲ್ಲಿ ಭಾರತ ಸ್ವಾವಲಂಬಿಯಾಗಬೇಕೆಂಬ ಉದ್ದೇಶ ಇಟ್ಟಿದ್ದರು. ಈ ಪ್ರಯತ್ನಕ್ಕೆ ಇದೀಗ ಮತ್ತೊಂದು ಯಶಸ್ಸು ಸಿಕ್ಕಿದೆ. 2021ರಲ್ಲಿ ಪ್ರಧಾನಿ ಮೋದಿ ಉತ್ತರ ಪ್ರದೇಶದ ಗೋರಖ್‌ಪುರದ ರಸಗೊಬ್ಬರ ಸ್ಥಾವರನ್ನು ರಾಷ್ಟ್ರಕ್ಕೆ ಸಮರ್ಪಿಸಿದ್ದರು. ಬರೋಬ್ಬರಿ 30 ವರ್ಷಗಳ ಕಾಲ ಮುಚ್ಚಿದ್ದ ಈ ಘಟಕಕ್ಕೆ ಮರು ಜೀವ ನೀಡಿದ್ದರು. ಆ ಯೋಜನೆಗೆ 2016ರ ಜುಲೈ ತಿಂಗಳಲ್ಲಿ ಮೋದಿ ಅಡಿಪಾಯ ಹಾಕಿದ್ದರು. 8,600 ಕೋಟಿ ರೂಪಾಯಿ ವೆಚ್ಚದಲ್ಲಿ ಗೋರಖಪುರ ರಸಗೊಬ್ಬರ ಕಾರ್ಖಾನೆಯನ್ನು ಪುನರ್ ನಿರ್ಮಾಣ ಮಾಡಿದ್ದರು.

ಹಿಂದೂಸ್ಥಾನ್ ಉರ್ವಾರಕ್ ಹಾಗೂ ರಾಸಾಯನ್ ಲಿಮಿಟೆಡ್ ಬರೌನಿ ಯೂರಿಯಾ ಉತ್ಪಾದನಾ ಘಟಕ ಕಳೆದ ತಿಂಗಳು ಉತ್ಪಾದನೆ ಆರಂಭಿಸಿದ್ದು, 8,300 ಕೋಟಿ ರೂ. ಅಧಿಕ ವೆಚ್ಚದಲ್ಲಿ ಈ ಘಟಕ ಕಾರ್ಯಾರಂಭಿಸಲಾಗಿದೆ. ಈ ಘಟಕ 12.7 LMTPA ಯೂರಿಯಾ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇನ್ನು 2018ರಲ್ಲಿ ಪ್ರಧಾನಿ ನರೇಂದ್ರ ಮೋದಿ HURLನ ಸಿಂದ್ರಿ ರಸಗೊಬ್ಬರ ಘಟಕ ಯೋಜನೆಗೆ ಅಡಿಪಾಯ ಹಾಕಿದ್ದು, ಈ ಯೋಜನೆ ಕೆಲಸ ಬಹುತೇಕ ಪೂರ್ಣಗೊಂಡಿದೆ. ಶೀಘ್ರದಲ್ಲೇ ಈ ಘಟಕವೂ ಕಾರ್ಯಾರಂಭಿಸಲಿದೆ. 2018ರ ಸೆಪ್ಟೆಂಬರ್ ತಿಂಗಳಲ್ಲಿ ತಾಲ್ಚರ್ ರಸಗೊಬ್ಬರ ಯೋಜನೆಗೆ ಅಡಿಪಾಯ ಹಾಕಿದ್ದು, ಈ ಘಟಕ 2024ರಲ್ಲಿ ಕಾರ್ಯಾರಂಭ ಮಾಡಲಿದೆ.

ನವೆಂಬರ್ 12 ರಂದು ಉದ್ಘಾಟಿಸಲಿರುವ ರಾಮಗುಂಡ ಘಟಕ, ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಗೋರಖಪುರ ಘಟಕ, ಶೀಘ್ರದಲ್ಲೇ ಕಾರ್ಯಾರಂಭಿಸಲಿರುವ ಸಿಂದ್ರಿ, ಬರೌನಿ ಹಾಗೂ ತಾಲ್ಚೆರ್ ಘಟಕಗಳು ಯೂರಿಯೂ ಉತ್ಪಾದನೆ ಆರಂಭಿಸಿದರೆ, ವಾರ್ಷಿಕವಾಗಿ 63.5 LMT ಯೂರಿಯಾವನ್ನು ಭಾರತ ಉತ್ಪಾದಿಸಲಿದೆ. ಇದರಿಂದ ವಿದೇಶಗಳಿಂದ ಯೂರಿಯಾ ಆಮದು ಮಾಡಿಕೊಳ್ಳುವ ಅವಶ್ಯತೆ ಇರುವುದಿಲ್ಲ. ಈ ಮೂಲಕ ಯೂರಿಯೂ ಉತ್ಪಾದನೆ ಹಾಗೂ ಬಳಕೆಯಲ್ಲಿ ಭಾರತ ಸಂಪೂರ್ಣವಾಗಿ ಸ್ವಾಲಂಬಿಯಾಗಲಿದೆ.

2014 ರಲ್ಲಿ ಅಧಿಕಾರ ವಹಿಸಿಕೊಂಡ ನಂತರ, ಪಿಎಂ ಮೋದಿ ಸ್ಥಳೀಯ ರಸಗೊಬ್ಬರ ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ರೈತರಿಗೆ ಸಕಾಲಿಕ ರಸಗೊಬ್ಬರ ಪೂರೈಕೆಗೆ ವಿಶೇಷ ಗಮನ ಹರಿಸಿದ್ದಾರೆ. ಸ್ಥಳೀಯ ಯೂರಿಯಾ ಉತ್ಪಾದನೆಯನ್ನು ಹೆಚ್ಚಿಸುವ ಉದ್ದೇಶದಿಂದ ಅಸ್ತಿತ್ವದಲ್ಲಿರುವ 25 ಅನಿಲ ಆಧಾರಿತ ಯೂರಿಯಾ ಘಟಕಗಳಿಗೆ ಹೊಸ ಯೂರಿಯಾ ನೀತಿ, 2015ರಲ್ಲಿ ಮೋದಿ ಸರ್ಕಾರ ಅಧಿಸೂಚಿಸಿತು.

ಯೂರಿಯಾ ಉತ್ಪಾದನೆಯಲ್ಲಿ ಶಕ್ತಿಯ ದಕ್ಷತೆಯನ್ನು ಉತ್ತೇಜಿಸುವುದು ಮತ್ತು ಸರ್ಕಾರದ ಮೇಲಿನ ಸಬ್ಸಿಡಿ ಹೊರೆಯನ್ನು ತರ್ಕಬದ್ಧಗೊಳಿಸುವುದು. NUP-2015 ರ ಅನುಷ್ಠಾನವು ಅಸ್ತಿತ್ವದಲ್ಲಿರುವ ಅನಿಲ ಆಧಾರಿತ ಯೂರಿಯಾ ಘಟಕಗಳಿಂದ ಹೆಚ್ಚುವರಿ ಉತ್ಪಾದನೆಗೆ ಕಾರಣವಾಗಿದೆ. ಇದರಿಂದಾಗಿ ಯೂರಿಯಾದ ಉತ್ಪಾದನೆಯು ಗಣನೀಯವಾಗಿ ಹೆಚ್ಚಾಗಿದೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:42 pm, Wed, 9 November 22