ನವದೆಹಲಿ: ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಇಂದಿನಿಂದ (ನವೆಂಬರ್ 10) ನವೆಂಬರ್ 11ರವರೆಗೆ ಒಡಿಶಾ ಪ್ರವಾಸ ಕೈಗೊಳ್ಳಲಿದ್ದಾರೆ. ಭಾರತದ ರಾಷ್ಟ್ರಪತಿಯಾಗಿ (President of India) ಪ್ರಮಾಣ ವಚನ ಸ್ವೀಕರಿಸಿದ ನಂತರ ಒಡಿಶಾ (Odisha) ರಾಜ್ಯಕ್ಕೆ ಇದು ಅವರ ಮೊದಲ ಭೇಟಿಯಾಗಿದೆ.
ರಾಷ್ಟ್ರಪತಿ ಭವನದ ಪ್ರಕಾರ, ರಾಷ್ಟ್ರಪತಿ ದ್ರೌಪದಿ ಮುರ್ಮು ಇಂದು ಪುರಿಯ ಶ್ರೀ ಜಗನ್ನಾಥ ದೇವಾಲಯದಲ್ಲಿ ಭಗವಾನ್ ಜಗನ್ನಾಥನಿಗೆ ಪ್ರಾರ್ಥನೆ ಸಲ್ಲಿಸಲಿದ್ದಾರೆ. ನಂತರ, ಅವರು ಭುವನೇಶ್ವರಕ್ಕೆ ತೆರಳುತ್ತಾರೆ. ಅಲ್ಲಿ ಅವರು ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರು ಮತ್ತು ನಾಯಕರ ಪ್ರತಿಮೆಗಳ ಮುಂದೆ ಗೌರವ ಸಲ್ಲಿಸುತ್ತಾರೆ.
Odisha | All government offices, schools & colleges (government & private) coming under the Bhubaneswar Municipal Corporation will remain closed after 1 PM on 10.11.2022 in view of the visit of President Droupadi Murmu to Odisha.
— ANI (@ANI) November 9, 2022
ಇಂದು ಸಂಜೆ ಭುವನೇಶ್ವರದ ರಾಜಭವನದಲ್ಲಿ ಅವರ ಗೌರವಾರ್ಥವಾಗಿ ಆಯೋಜಿಸಲಾಗುವ ನಾಗರಿಕ ಸ್ವಾಗತ ಸಮಾರಂಭದಲ್ಲಿ ರಾಷ್ಟ್ರಪತಿಗಳು ಭಾಗವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: Droupadi Murmu: ಸಿಕ್ಕಿಂನಲ್ಲಿ ಕಲಾವಿದರೊಂದಿಗೆ ಸಾಂಪ್ರದಾಯಿಕ ನೃತ್ಯ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು
ನವೆಂಬರ್ 11ರಂದು ರಾಷ್ಟ್ರಪತಿಗಳು ಭುವನೇಶ್ವರದಲ್ಲಿರುವ ತಪೋಬನ್ ಹೈಸ್ಕೂಲ್, ಸರ್ಕಾರಿ ಬಾಲಕಿಯರ ಪ್ರೌಢಶಾಲಾ ಘಟಕ-II ಮತ್ತು ಕುಂತಲ ಕುಮಾರಿ ಸಬತ್ ಆದಿವಾಸಿ ಬಾಲಕಿಯರ ಹಾಸ್ಟೆಲ್ ಘಟಕ-IIಗೆ ಭೇಟಿ ನೀಡುತ್ತಾರೆ. ಅಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರೊಂದಿಗೆ ಸಂವಾದ ನಡೆಸಲಿದ್ದಾರೆ. ಬಳಿಕ, ನಾಳೆ ಭುವನೇಶ್ವರದ ಜಯದೇವ್ ಭವನದಲ್ಲಿ ಕೇಂದ್ರ ಶಿಕ್ಷಣ ಸಚಿವಾಲಯದ ವಿವಿಧ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.