Droupadi Murmu: ಸಿಕ್ಕಿಂನಲ್ಲಿ ಕಲಾವಿದರೊಂದಿಗೆ ಸಾಂಪ್ರದಾಯಿಕ ನೃತ್ಯ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು
ರಾಷ್ಟ್ರಪತಿ ಮುರ್ಮು ಜತೆ ಸಿಕ್ಕಿಂ ಮುಖ್ಯಮಂತ್ರಿಗಳ ಪತ್ನಿ ಕೃಷ್ಣಾ ರೈ ಕೂಡಾ ಡ್ಯಾನ್ಸ್ ಮಾಡಿದ್ದಾರೆ. ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲು ಸಿಕ್ಕಿಂಗೆ ಆಗಮಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು ವಿಶೇಷ ನೃತ್ಯದ ಮೂಲಕ ಗಮನಸೆಳೆದಿದ್ದಾರೆ.
ಸಿಕ್ಕಿಂ, ಮಿಜೋರಾಂ, ನಾಗಾಲ್ಯಾಂಡ್ ಮುಂತಾದ ಈಶಾನ್ಯ ರಾಜ್ಯಗಳ ಪ್ರವಾಸದಲ್ಲಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಸಿಕ್ಕಿಂನ ಗ್ಯಾಂಗ್‌ಟಕ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ಥಳೀಯ ಕಲಾವಿದರೊಂದಿಗೆ ತಾವೂ ನೃತ್ಯ ಮಾಡಿದ್ದಾರೆ. ಇಂಟಿಗ್ರೇಶನ್ ಡ್ಯಾನ್ಸ್ ಹೆಸರಿನ ಈ ನೃತ್ಯದಲ್ಲಿ ಪಾಲ್ಗೊಂಡ ರಾಷ್ಟ್ರಪತಿ ಮುರ್ಮು ಜತೆ ಸಿಕ್ಕಿಂ ಮುಖ್ಯಮಂತ್ರಿಗಳ ಪತ್ನಿ ಕೃಷ್ಣಾ ರೈ ಕೂಡಾ ಡ್ಯಾನ್ಸ್ ಮಾಡಿದ್ದಾರೆ. ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲು ಸಿಕ್ಕಿಂಗೆ ಆಗಮಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು ವಿಶೇಷ ನೃತ್ಯದ ಮೂಲಕ ಗಮನಸೆಳೆದಿದ್ದಾರೆ. ಸ್ಥಳೀಯ ಸಂಸ್ಕೃತಿಯನ್ನು ಬಿಂಬಿಸುವ ನೃತ್ಯ ಕಲಾವಿದರ ಜೊತೆ ದ್ರೌಪದಿ ಮುರ್ಮು ಹೆಜ್ಜೆ ಹಾಕಿದ್ದಾರೆ. 4 ದಿನಗಳ ಕಾಲ ರಾಷ್ಟ್ರಪತಿ ದ್ರೌಪದಿ ಮುರ್ಮು ಈಶಾನ್ಯ ರಾಜ್ಯಗಳ ಪ್ರವಾಸದಲ್ಲಿದ್ದಾರೆ.
Latest Videos