ಬೆಂಗಳೂರಿನ ಇಂಟರ್​ನ್ಯಾಷನಲ್ ಶಾಲೆಯೊಂದರಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟ ಮಗುವಿನ ಕೊನೇ ಕ್ಷಣಗಳು ಸಿಸಿಟಿವಿಯಲ್ಲಿ ಸೆರೆ!

ಬೆಂಗಳೂರಿನ ಇಂಟರ್​ನ್ಯಾಷನಲ್ ಶಾಲೆಯೊಂದರಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟ ಮಗುವಿನ ಕೊನೇ ಕ್ಷಣಗಳು ಸಿಸಿಟಿವಿಯಲ್ಲಿ ಸೆರೆ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Nov 05, 2022 | 11:41 AM

ಈ ದೃಶ್ಯ ಮಗುವಿನ ಕೊನೆಯ ಕ್ಷಣಗಳು ಅಂತ ಹೇಳಬೇಕೋ ಅಥವಾ ಅದಾಗಲೇ ಅವಳು ಸತ್ತಿದ್ದಳೋ ಅಂತ ಹೇಳಬೇಕೋ ಅಂತ ಆರ್ಥವಾಗುತ್ತಿಲ್ಲ. ಯಾಕೆಂದರೆ, ಅಸ್ಪತ್ರೆಯ ವೈದ್ಯರು ಬಾಲಕಿಯನ್ನು ‘ಬ್ರಾಟ್ ಡೆಡ್’ ಅಂತ ಹೇಳಿದ್ದರು

ಬೆಂಗಳೂರಿನ ರಾಮಚಂದ್ರಪುರದಲ್ಲಿರುವ ಖಾಸಗಿ ಇಂಟರ್ ನ್ಯಾಷನಲ್ ಶಾಲೆಯೊಂದರ (international school) 11-ವರ್ಷ ವಯಸ್ಸಿನ ವಿದ್ಯಾರ್ಥಿನಿ ಶುಕ್ರವಾರದಂದು ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಸುದ್ದಿಯನ್ನು ನಾವು ನಿನ್ನೆಯೇ ವರದಿ ಮಾಡಿದ್ದೇವೆ. ಇಂದು (ಶನಿವಾರ) ಸದರಿ ಶಾಲೆಯ ಆವರಣದ ಹೊರಗೆ ಅಳವಡಿಸಲಾಗಿರುವ ಸಿಸಿಟಿವಿಯಲ್ಲಿ ಮಗುವಿನ ಪೋಷಕರು (parents) ಮತ್ತು ಶಾಲಾ ಸಿಬ್ಬಂದಿ (school staff) ಮಗುವನ್ನು ಆಸ್ಪತ್ರೆಗೆ ಒಯ್ಯುತ್ತಿರುವ ಫುಟೇಜ್ ನಮಗೆ ಸಿಕ್ಕಿದೆ. ಈ ದೃಶ್ಯ ಮಗುವಿನ ಕೊನೆಯ ಕ್ಷಣಗಳು ಅಂತ ಹೇಳಬೇಕೋ ಅಥವಾ ಅದಾಗಲೇ ಅವಳು ಸತ್ತಿದ್ದಳೋ ಅಂತ ಹೇಳಬೇಕೋ ಅಂತ ಆರ್ಥವಾಗುತ್ತಿಲ್ಲ. ಯಾಕೆಂದರೆ, ಅಸ್ಪತ್ರೆಯ ವೈದ್ಯರು ಬಾಲಕಿಯನ್ನು ‘ಬ್ರಾಟ್ ಡೆಡ್’ ಅಂತ ಹೇಳಿದ್ದರು.