ಪೊಲೀಸರಿಗೆ ನನ್ನ ಮಗನನ್ನು ಹುಡುಕಲಾಗಲಿಲ್ಲ, ಪಕ್ಷದ ಕಾರ್ಯಕರ್ತರು ದೇಹವನ್ನು ಪತ್ತೆ ಮಾಡಿದರು: ಎಮ್ ಪಿ ರೇಣುಕಾಚಾರ್ಯ

ಪೊಲೀಸರಿಗೆ ನನ್ನ ಮಗನನ್ನು ಹುಡುಕಲಾಗಲಿಲ್ಲ, ಪಕ್ಷದ ಕಾರ್ಯಕರ್ತರು ದೇಹವನ್ನು ಪತ್ತೆ ಮಾಡಿದರು: ಎಮ್ ಪಿ ರೇಣುಕಾಚಾರ್ಯ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Nov 05, 2022 | 12:56 PM

ತಮ್ಮ ಪಕ್ಷದ ಶಾಸಕರೇ ಚಂದ್ರುನ ಕಾರನ್ನು ಪತ್ತೆ ಮಾಡಿದ್ದು, ಜನ ತೋರಿರುವ ಪ್ರೀತಿ, ಅಂತಃಕರಣ ಅಸಾಧಾರಣವಾದದ್ದು ಎಂದು ರೇಣುಕಾಚಾರ್ಯ ಹೇಳಿದರು.

ದಾವಣಗೆರೆ: ಹೊನ್ನಾಳಿ ಶಾಸಕ ಎಮ್ ಪಿ ರೇಣುಕಾಚಾರ್ಯ (MP Renukacharya) ಅವರ ಮನಸ್ಸು ಮತ್ತು ಹೃದಯದಲ್ಲಿ ದುಃಖ ಮಡುಗಟ್ಟಿದೆ. ತಮ್ಮ ಉತ್ತರಾಧಿಕಾರಿಯಂತಿದ್ದ ಮಗ ಚಂದ್ರಶೇಖರ್ ನನ್ನು (Chandrashekar) ಕಳೆದುಕೊಂಡ ನೋವು ಅವರನ್ನು ಕೊನೇವರೆಗೆ ಬಾಧಿಸಲಿದೆ. ಆಡಳಿತ ಪಕ್ಷದ ಶಾಸಕರಾಗಿರುವ (MLA) ಅವರೇ ಪೊಲೀಸರ ಕಾರ್ಯಕ್ಷಮತೆ ಮತ್ತು ಕರ್ತವ್ಯದೆಡೆಗಿನ ಬದ್ಧತೆಯ ಬಗ್ಗೆ ಬಹಳ ಬೇಸರದಿಂದ ಮಾತಾಡಿದ್ದಾರೆ. ತಮ್ಮ ಪಕ್ಷದ ಶಾಸಕರೇ ಚಂದ್ರುನ ಕಾರನ್ನು ಪತ್ತೆ ಮಾಡಿದ್ದು, ಜನ ತೋರಿರುವ ಪ್ರೀತಿ, ಅಂತಃಕರಣ ಅಸಾಧಾರಣವಾದದ್ದು ಎಂದು ರೇಣುಕಾಚಾರ್ಯ ಹೇಳಿದರು.