ಹೆಚ್ಚಿನ ಸಮಯವನ್ನು ಬಳ್ಳಾರಿ ಜನತೆ ಜೊತೆ ಕಳೆಯಲೆಂದೇ ನಾನು ಹೆಲಿಕಾಪ್ಟರ್ ಖರೀದಿಸಿದ್ದು: ಗಾಲಿ ಜನಾರ್ಧನ ರೆಡ್ಡಿ
ತಮ್ಮನ್ನು ವಿಧಾನ ಸಭೆಗೆ ಆರಿಸಿ ಕಳಿಸಿದ ಜನರಿಗೆ ಹೆಚ್ಚಿನ ಸಮಯ ನೀಡುವ ಉದ್ದೇಶದಿಂದ ಚಾಪರ್ ಖರೀದಿಸಿದ್ದು ಅಂತ ಜನಾರ್ಧನ ರೆಡ್ಡಿ ಹೇಳಿದರು.
ಬಳ್ಳಾರಿ: ಮಾಜಿ ಸಚಿವ ಮತ್ತು ಗಣಿಧಣಿ ಗಾಲಿ ಜನಾರ್ಧನ ರೆಡ್ಡಿ (Gali Janardhan Reddy) ರಾಜಕೀಯದಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರುಮಾಡುವ ಇಚ್ಛೆ ಆಗಾಗ ವ್ಯಕ್ತಪಡಿಸುತ್ತಿರುತ್ತಾರೆ. ಆದರೆ ಬಿಜೆಪಿಯ ಹೈಕಮಾಂಡ್ (high command) ಅವರಿಗೆ ಅದು ಬೇಕಿಲ್ಲ. ಬಳ್ಳಾರಿಯಲ್ಲಿ ಶನಿವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮಾತಾಡಿದ ಅವರು, ಸಚಿವನಾಗಿದ್ದಾಗ ಹೆಲಿಕಾಪ್ಟರ್ (helicopter) ಯಾಕೆ ಖರೀದಿಸಿದ್ದು ಅನ್ನೋದನ್ನು ವಿವರಿಸಿದರು. ಆಗ ಅವರಿಗೆ ಬಳ್ಳಾರಿ ಜನತೆಯೊಂದಿಗೆ ಹೆಚ್ಚಿನ ಸಮಯ ಕಳೆಯಬೇಕು ಅಂತ ಅನಿಸುತ್ತಿತ್ತಂತೆ. ಆದರೆ ಬೆಂಗಳೂರಿಂದ ಕಾರಲ್ಲಿ ಹೊರಟರೆ 5-6 ಗಂಟೆಗಳ ಸಮಯ ಹಿಡಿಯುತಿತ್ತು, ಅದೇ ಸಮಯವನ್ನು ತಮ್ಮನ್ನು ವಿಧಾನ ಸಭೆಗೆ ಆರಿಸಿ ಕಳಿಸಿದ ಜನರಿಗೆ ನೀಡುವ ಉದ್ದೇಶದಿಂದ ಚಾಪರ್ ಖರೀದಿಸಿದ್ದು ಅಂತ ಜನಾರ್ಧನ ರೆಡ್ಡಿ ಹೇಳಿದರು.
Latest Videos