‘200 ರೂಪಾಯಿಗೆ ಇಡೀ ಕಾಶಿ ತೋರ್ಸಿದೀಯಾ ಅಂದ್ರು’; ‘ಬನಾರಸ್’ಗೆ ಜನರ ವಿಮರ್ಶೆ ತಿಳಿಸಿದ ಜಯತೀರ್ಥ

‘200 ರೂಪಾಯಿಗೆ ಇಡೀ ಕಾಶಿ ತೋರ್ಸಿದೀಯಾ ಅಂದ್ರು’; ‘ಬನಾರಸ್’ಗೆ ಜನರ ವಿಮರ್ಶೆ ತಿಳಿಸಿದ ಜಯತೀರ್ಥ

TV9 Web
| Updated By: ರಾಜೇಶ್ ದುಗ್ಗುಮನೆ

Updated on: Nov 04, 2022 | 3:45 PM

ನಿರ್ದೇಶಕ ಜಯತೀರ್ಥ ಅವರು ‘ಬನಾರಸ್​’ಗೆ ಜನರು ಹೇಗೆ ಪ್ರತಿಕ್ರಿಯಿಸಿದ್ದಾರೆ ಎಂಬದನ್ನು ಹೇಳಿದ್ದಾರೆ. ‘200 ರೂಪಾಯಿಗೆ ಇಡೀ ಕಾಶಿ ತೋರ್ಸಿದೀಯಾ ಅಂದ್ರು’ ಎಂದು ಜಯತೀರ್ಥ ಮಾಹಿತಿ ಹಂಚಿಕೊಂಡಿದ್ದಾರೆ.

ಜಯತೀರ್ಥ (Jayatheertha) ಅವರ ನಿರ್ದೇಶನದ, ಝೈದ್ ಖಾನ್ (Zaid Khan)​ ಹಾಗೂ ಸೋನಲ್ ನಟನೆಯ ‘ಬನಾರಸ್’ ಚಿತ್ರ ಇಂದು (ನವೆಂಬರ್ 4) ರಿಲೀಸ್ ಆಗಿದೆ. ಚಿತ್ರಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಈ ಚಿತ್ರದಲ್ಲಿ ಟೈಮ್​ಲೂಪ್ ವಿಚಾರ ಹೇಳಲಾಗಿದೆ. ಸಿನಿಮಾದ ಬಹುತೇಕ ಕಥೆ ಬನಾರಸ್​ನಲ್ಲಿ ಸಾಗುತ್ತದೆ. ಚಿತ್ರ ನೋಡಿದ ಅನೇಕರು ತಮ್ಮ ವಿಮರ್ಶೆ ತಿಳಿಸಿದ್ದಾರೆ. ನಿರ್ದೇಶಕ ಜಯತೀರ್ಥ ಅವರು ‘ಬನಾರಸ್​’ಗೆ ಜನರು ಹೇಗೆ ಪ್ರತಿಕ್ರಿಯಿಸಿದ್ದಾರೆ ಎಂಬದನ್ನು ಹೇಳಿದ್ದಾರೆ. ‘200 ರೂಪಾಯಿಗೆ ಇಡೀ ಕಾಶಿ ತೋರ್ಸಿದೀಯಾ ಅಂದ್ರು’ ಎಂದು ಜಯತೀರ್ಥ ಮಾಹಿತಿ ಹಂಚಿಕೊಂಡಿದ್ದಾರೆ.