ನಿಯತ್ತಿಲ್ಲದ ಕಳ್ಳರು ಸಾವಿನ ಮನೆಯಲ್ಲೂ ತಮ್ಮ ಕಸುಬು ನಿಲ್ಲಿಸಲಿಲ್ಲ, ಚಂದ್ರಶೇಖರ ಅಂತಿಮ ದರ್ಶನಕ್ಕೆ ಬಂದವರ ಹಣ ಹಾರಿಸಿದ ಪಿಕ್ ಪಾಕೆಟ್ಗಳು!
ಚಂದ್ರಶೇಖರ್ ಅವರ ಅಂತಿಮ ದರ್ಶನ ಪಡೆಯಲು ಆಗಮಿಸಿದ ಜನರ ನಡುವೆ ನುಸುಳಿರುವ ಪಿಕ್ ಪಾಕೆಟ್ ಗಳು ಒಬ್ಬರಿಂದ ರೂ. 60,000 ಮತ್ತೊಬ್ಬರಿಂದ ರೂ. 8,000, ಮತ್ತು ಮೊಬೈಲ್ ಫೋನ್ ಹಾರಿಸಿದ್ದಾರೆ.
ದಾವಣಗೆರೆ: ಕಳ್ಳರಲ್ಲಿ ನಿಯತ್ತನ್ನು, ಸಂವೇದನೆಶೀಲತೆಯನ್ನು ನಿರೀಕ್ಷಿಸುವುದು ಮೂರ್ಖತನ ಮಾರಾಯ್ರೇ. ಸಾವಿನ ಮನೆಯಲ್ಲೂ ಅವರು ತಮ್ಮ ಕಸುಬನ್ನು ನಡೆಸಿದ್ದಾರೆ. ಹೊನ್ನಾಳಿಯಲ್ಲಿ (Honnali) ಚಂದ್ರಶೇಖರ್ ಅವರ ಅಂತಿಮ ದರ್ಶನ ಪಡೆಯಲು ಆಗಮಿಸಿದ ಜನರ ನಡುವೆ ನುಸುಳಿರುವ ಪಿಕ್ ಪಾಕೆಟ್ ಗಳು (pick pockets) ಒಬ್ಬರಿಂದ ರೂ. 60,000 ಮತ್ತೊಬ್ಬರಿಂದ ರೂ. 8,000, ಮೂರನೇಯವರಿಂದ ಒಂದು ಮೊಬೈಲ್ ಫೋನ್ (mobile phone) ಹಾರಿಸಿದ್ದಾರೆ. ಅಂತಿಮ ದರ್ಶನಕ್ಕೆ ಆಗಮಿಸಿರುವ ಜನ ತಮ್ಮ ಹಣ, ಮೊಬೈಲ್ ಫೋನ್ ಮತ್ತು ಇತರ ವಸ್ತುಗಳ ಬಗ್ಗೆ ಜಾಗ್ರತೆವಹಿಸಬೇಕೆಂದು ಮೈಕ್ ಮೂಲಕ ಒಬ್ಬ ವ್ಯಕ್ತಿ ಸಾರಿ ಹೇಳುತ್ತಿದ್ದಾರೆ.
Latest Videos