ರಸ್ತೆಯಲ್ಲೇ ಕುಳಿತು ಕೆಆರ್​​ ನಗರದ ಜನರ ನಿದ್ರೆಗೆಡಿಸಿದ್ದ ಭಯಾನಕ ಚಿರತೆ ಕೊನೆಗೂ ಸೆರೆ; ಇಲ್ಲಿದೆ ವಿಡಿಯೋ

ರಸ್ತೆಯಲ್ಲೇ ಕುಳಿತು ಕೆಆರ್​​ ನಗರದ ಜನರ ನಿದ್ರೆಗೆಡಿಸಿದ್ದ ಭಯಾನಕ ಚಿರತೆ ಕೊನೆಗೂ ಸೆರೆ; ಇಲ್ಲಿದೆ ವಿಡಿಯೋ

TV9 Web
| Updated By: ಸುಷ್ಮಾ ಚಕ್ರೆ

Updated on:Nov 04, 2022 | 3:04 PM

ಗುರುವಾರ ರಾತ್ರಿಯೇ ಕೆ.ಆರ್ ನಗರ ಪಟ್ಟಣಕ್ಕೆ ಬಂದಿದ್ದ ಚಿರತೆ ರಸ್ತೆಯಲ್ಲಿ ಓಡಾಡಿತ್ತು. ರಸ್ತೆ ಮಧ್ಯೆ ಕುಳಿತಿರುವ ಚಿರತೆಯನ್ನು ಕಂಡು ಭಯಭೀತರಾದ ಜನರು ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದರು.

ಮೈಸೂರು: ಮೈಸೂರು ಜಿಲ್ಲೆಯ ಕೆ.ಆರ್ ನಗರದಲ್ಲಿ ಜನರ ನಿದ್ದೆಗೆಡಿಸಿದ್ದ ಚಿರತೆಯನ್ನು ಕೊನೆಗೂ ಸೆರೆಹಿಡಿಯಲಾಗಿದೆ. ಇಂದು ಬೆಳಗ್ಗೆ ಕೆ.ಆರ್ ನಗರದಿಂದ (KR Nagar) ಮುಳ್ಳೂರಿಗೆ ಹೋಗುವ ರಸ್ತೆಯಲ್ಲಿ ಕಾಣಿಸಿಕೊಂಡಿದ್ದ ಚಿರತೆ, ರಸ್ತೆಯಲ್ಲಿ ಸಿಕ್ಕ ಸಿಕ್ಕವರ ಮೇಲೆ ದಾಳಿ ನಡೆಸಿ ಜನರಲ್ಲಿ ಆತಂಕ ಮೂಡಿಸಿತ್ತು. ಚಿರತೆ (Leopard) ದಾಳಿಯಿಂದ ಬೆಚ್ಚಿ ಬಿದ್ದಿರುವ ಕೆ ಆರ್ ನಗರ ಪಟ್ಟಣ ನಿವಾಸಿಗಳು ಮನೆಯಿಂದ ಆಚೆ ಬರಲು ಹೆದರುವ ಪರಿಸ್ಥಿತಿ ಉಂಟಾಗಿತ್ತು. ಗುರುವಾರ ರಾತ್ರಿಯೇ ಕೆ.ಆರ್ ನಗರ ಪಟ್ಟಣಕ್ಕೆ ಬಂದಿದ್ದ ಚಿರತೆ ರಸ್ತೆಯಲ್ಲಿ ಓಡಾಡಿತ್ತು. ರಸ್ತೆ ಮಧ್ಯೆ ಕುಳಿತಿರುವ ಚಿರತೆಯನ್ನು ಕಂಡು ಭಯಭೀತರಾದ ಜನರು ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದರು. 2 ಗಂಟೆಯ ಕಾರ್ಯಾಚರಣೆ ಬಳಿಕ ಆ ಚಿರತೆಗೆ ಅರವಳಿಕೆ ಮದ್ದು ನೀಡಿ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಯನ್ನು ಸೆರೆ ಹಿಡಿದಿದ್ದಾರೆ.

Published on: Nov 04, 2022 03:03 PM