ಮೃತ ಚಂದ್ರಶೇಖರ್ಗೆ ಅಂತಿಮ ನಮನ ಸಲ್ಲಿಸಿ ರೇಣುಕಾಚಾರ್ಯ ಕುಟುಂಬಸ್ಥರನ್ನು ಸಂತೈಸಿದ ಬಿಎಸ್ ಯಡಿಯೂರಪ್ಪ
ಚಂದ್ರಶೇಖರ್ ರಾಜಕೀಯದಲ್ಲೂ ತಮ್ಮನ್ನು ತೊಡಗಿಸಿಕೊಂಡು ತನ್ನ ದೊಡ್ಡಪ್ಪನ (ರೇಣುಕಾಚಾರ್ಯ) ಬಲಗೈ ಬಂಟನಂತಿದ್ದರು ಎಂದು ಯಡಿಯೂರಪ್ಪ ಹೇಳಿದರು.
ದಾವಣಗೆರೆ: ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಶುಕ್ರವಾರ ಹೊನ್ನಾಳಿಗೆ ತೆರಳಿ ದಾರುಣ ಸಾವನ್ನಪ್ಪಿರುವ ಪಕ್ಷದ ನಾಯಕ ಎಮ್ ಪಿ ರೇಣುಕಾಚಾರ್ಯ ಸಹೋದರನ ಮಗ ಚಂದ್ರಶೇಖರ್ ದೇಹಕ್ಕೆ ಅಂತಿಮ ನಮನ ಸಲ್ಲಿಸಿ ದುಃಖತಪ್ತ ಕುಟುಂಬಸ್ಥರನ್ನು ಸಂತೈಸಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತಾಡಿದ ಯಡಿಯೂರಪ್ಪ ಕೇವಲ 24-25 ವರ್ಷದ ತರುಣನಿಗೆ ಇಂಥ ಸಾವು ಬರಬಾರದಿತ್ತು. ಅವರು ರಾಜಕೀಯದಲ್ಲಿ ತಮ್ಮನ್ನು ತೊಡಗಿಸಿಕೊಂಡು ತನ್ನ ದೊಡ್ಡಪ್ಪನ (ರೇಣುಕಾಚಾರ್ಯ) ಬಲಗೈ ಬಂಟನಂತಿದ್ದರು ಎಂದು ಹೇಳಿದರು.
Latest Videos