ಸಂಸದೆ ಸ್ವಾತಿ ಮಲಿವಾಲ್ ಮೇಲೆ ಹಲ್ಲೆ ಪ್ರಕರಣ: ಸಿಎಂ ಕೇಜ್ರಿವಾಲ್ ಆಪ್ತ ಕಾರ್ಯದರ್ಶಿ ವಿಭವ್ ಕುಮಾರ್ ಬಂಧನ

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಿವಾಸದಲ್ಲಿ ಕೇಜ್ರಿವಾಲ್ ಆಪ್ತ ಕಾರ್ಯದರ್ಶಿ ವಿಭವ್ ಕುಮಾರ್ ತಮ್ಮ ಜತೆ ಅನುಚಿತವಾಗಿ ನಡೆದುಕೊಂಡಿರುವ ಬಗ್ಗೆ ಸ್ವಾತಿ ಮಲಿವಾಲ್ ಗಂಭೀರ ಆರೋಪ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಭವ್ ಕುಮಾರ್ ಎಫ್​​​ಐಆರ್​ ಕೂಡ ದಾಖಲಾಗಿತ್ತು. ಇದೀಗ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಸಂಸದೆ ಸ್ವಾತಿ ಮಲಿವಾಲ್ ಮೇಲೆ ಹಲ್ಲೆ ಪ್ರಕರಣ: ಸಿಎಂ ಕೇಜ್ರಿವಾಲ್ ಆಪ್ತ ಕಾರ್ಯದರ್ಶಿ ವಿಭವ್ ಕುಮಾರ್ ಬಂಧನ

Updated on: May 18, 2024 | 1:20 PM

ದೆಹಲಿ, ಮೇ.18: ಎಎಪಿ ಸಂಸದೆ ಸ್ವಾತಿ ಮಲಿವಾಲ್ (MP Swati Maliwal) ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಆಪ್ತ ಕಾರ್ಯದರ್ಶಿ ವಿಭವ್ ಕುಮಾರ್ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.ಮೇ 13ರಂದು ಸ್ವಾತಿ ಮಲಿವಾಲ್ ಅರವಿಂದ್ ಕೇಜ್ರಿವಾಲ್​ರನ್ನು ಭೇಟಿಯಾಗಲು ನಿವಾಸಕ್ಕೆ ಬಂದಿದ್ದರು. ಡ್ರಾಯಿಂಗ್​ ರೂಮ್​ನಲ್ಲಿ ಕಾಯುತ್ತಿರುವಾಗ ವಿಭವ್ ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಸ್ವಾತಿ ದೂರಿನಲ್ಲಿ ಹೇಳಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಹಿಳಾ ಆಯೋಗವು ದೆಹಲಿ ಪೊಲೀಸರಿಗೆ ನೋಟಿಸ್ ನೀಡಿದೆ. ಮೂರು ದಿನಗಳಲ್ಲಿ ಕ್ರಮ ಕೈಗೊಂಡ ವರದಿಯನ್ನು ನೀಡುವಂತೆ ಹೇಳಿದೆ. ವರದಿಯನ್ನು ಸಿದ್ಧಪಡಿಸುವಂತೆ ಸಂಬಂಧ ಹೆಚ್ಚುವರಿ ಪೊಲೀಸ್​ ಆಯುಕ್ತ ಪಿಎಸ್​ ಕುಶ್ವಾಹ ನೇತೃತ್ವದ ದ್ವಿಸದಸ್ಯರ ತಂಡ ದೆಹಲಿಯಲ್ಲಿರುವ ಸ್ವಾತಿ ಮಲಿವಾಲ್ ನಿವಾಸಕ್ಕೆ ಭೇಟಿ ನೀಡಿದ್ದು, ಮೇ 13ರಂದು ನಡೆದ ಘಟನೆಯನ್ನು ಸಂಪೂರ್ಣವಾಗಿ ಸ್ವಾತಿ ಪಡೆದುಕೊಂಡಿತ್ತು. ಅವರ ಹೇಳಿಕೆ ಆಧಾರದ ಮೇಲೆ ಅರವಿಂದ್​​​ ಆಪ್ತ ಕಾರ್ಯದರ್ಶಿ ವಿಭವ್ ಅವರನ್ನು ಬಂಧಿಸಲಾಗಿದೆ.

7-8 ಬಾರಿ ಕಪಾಳಮೋಕ್ಷ, ಎದೆ, ಹೊಟ್ಟೆಗೆ ಒದೆದಿದ್ದಾನೆ

ತನ್ನ ಮೇಲೆ ಹಲ್ಲೆ ಮಾಡಿದ ಬಗ್ಗೆ ದೆಹಲಿ ಪೊಲೀಸರಿಗೆ ವಿಸ್ತಾರವಾಗಿ ವಿವರಿಸಿದ್ದಾರೆ. ನನ್ನ ಮೇಲೆ 7-8 ಬಾರಿ ಕಪಾಳಮೋಕ್ಷ ಮಾಡಿದ್ದಾನೆ, ನನ್ನನ್ನು ಎಳೆದೊಯ್ದು ಎದೆಗೆ ಒದೆದಿದ್ದಾನೆ ಎಂದು ಸ್ವಾತಿ ಮಲಿವಾಲ್ ಗಂಭೀರ ಆರೋಪ ಮಾಡಿದ್ದಾರೆ. ಸಿಎಂ ಮನೆ ಭೇಟಿ ನೀಡಿದಾಗ ನನ್ನನ್ನೂ ರೂಮ್​​ ಒಂದರಲ್ಲಿ ಕಾಯುವಂತೆ ಹೇಳಿದ್ದಾರೆ. ಈ ವೇಳೆ ವಿಭವ್ ಕುಮಾರ್​​ ಬಂದು ಕೆಟ್ಟದಾಗಿ ಬೈದು ಏಳೆಂಟು ಬಾರಿ ಕಪಾಳಮೋಕ್ಷ ಮಾಡಿದ್ದಾನೆ. ನನ್ನ ಎದೆ, ಹೊಟ್ಟೆ ಮತ್ತು ಸೂಕ್ಷ್ಮ ಭಾಗಗಳಿಗೆ ಹೊಡೆದಿದ್ದಾನೆ ಎಂದು ಹೇಳಿದ್ದಾರೆ.

 

ಈ ಸಮಯದಲ್ಲಿ ನನ್ನನ್ನೂ ಬಿಡುವಂತೆ ಬೇಡಿಕೊಂಡಿದ್ದೇನೆ. ಅದರ ಆತ ನನ್ನನ್ನೂ ಬಿಡದೆ ನಿರಂತರವಾಗಿ ನನ್ನ ಮೇಲೆ ದಾಳಿ ನಡೆಸಿದ್ದಾನೆ. ನಾನು ನಿನ್ನನ್ನೂ ಸುಮ್ಮನೆ ಬಿಡುವುದಿಲ್ಲ ಎಂದೆಲ್ಲ ಬೆದರಿಕೆ ಹಾಕಿದ್ದಾನೆ ಎಂದು ಹೇಳಲಾಗಿದೆ. ಆತನ ಕಾಲಿಗೆ ಬಿದ್ದು ಬಿಡುವಂತೆ ಕೇಳಿಕೊಂಡರು ನನಗೆ ಥಳಿಸಿದ್ದಾನೆ ಎಂದು ಪೊಲೀಸ್​​​ ದೂರಿನಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ನನ್ನ ಜತೆ ನಡೆದಿದ್ದು ತುಂಬಾ ಕೆಟ್ಟ ಘಟನೆ, ಕಳೆದ ಕೆಲ ದಿನಗಳು ತುಂಬಾ ಕಷ್ಟಕರವಾಗಿತ್ತು: ಸಂಸದೆ ಸ್ವಾತಿ ಮಲಿವಾಲ್

ಕೇಜ್ರಿವಾಲ್ ನಿವಾಸದಲ್ಲಿ ಸ್ವಾತಿ ಮಲಿವಾಲ್ ಜಗಳದ ವಿಡಿಯೊ ವೈರಲ್​​:

ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಡಿಯೋವೊಂದು ವೈರಲ್​​ ಆಗಿದೆ. ಸಿಎಂ ಅರವಿಂದ್​​ ಕೇಜ್ರಿವಾಲ್​​​ ಮನೆಗೆ ಭೇಟಿ ನೀಡಿದಾಗ ನಡೆದ ಜಗಳದ ಬಗ್ಗೆ ಒಂದು ವಿಡಿಯೋವೊಂದು ವೈರಲ್​​ ಆಗಿದೆ. ಈ ವಿಡಿಯೊದಲ್ಲಿ ಸ್ವಾತಿ ಮಲಿವಾಲ್ ಅವರನ್ನು ಅಲ್ಲಿದ್ದ ಭದ್ರತಾ ಸಿಬ್ಬಂದಿಗಳು ಅವರನ್ನು ಒತ್ತಾಯಿಸುತ್ತಾರೆ. ಸ್ವಾತಿ ಮಲಿವಾಲ್ ಮತ್ತು ಅವರ ಮಧ್ಯೆ ಜಗಳಗಳು ನಡೆಯುತ್ತದೆ. ಭದ್ರತಾ ಸಿಬ್ಬಂದಿ ನೀವು ಇಲ್ಲಿಂದ ಹೊರಗೆ ಹೋಗಿ ಎಂದು ಹೇಳಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದು, ಇದಕ್ಕೆ ಪ್ರತಿಕ್ರಿಯಿಸಿದ ಸ್ವಾತಿ ಮಲಿವಾಲ್ ನಾನು ಹೋಗುವುದಿಲ್ಲ ಎಂದು ಕೋಪದಲ್ಲಿ ಹೇಳುತ್ತಾರೆ. ನನ್ನ ಮೇಲೆ ನೀವು ದರ್ಪ ತೋರಿಸುತ್ತಿದ್ದೀರಾ ನಾನು ಪೊಲೀಸರಿಗೆ ದೂರು ನೀಡುವೇ, ನಾನು ಬಂದಿರುವ ಕೆಲಸವನ್ನು ಮುಗಿಸಿ ಹೋಗುವುದು. ಇದನ್ನು ಜನರಿಗೆ ತಿಳಿಸುತ್ತೇನೆ ಎಂದು ಹೇಳುತ್ತಾರೆ. ಈ ಎಲ್ಲ ನಾಟಕ ಇಲ್ಲಿ ನಡೆಯುವುದಿಲ್ಲ, ಈಗ ನಮ್ಮ ಜತೆಗೆ ಬನ್ನಿ ಎಂದು ಭದ್ರತಾ ಸಿಬ್ಬಂದಿ ಹೇಳುತ್ತಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:54 pm, Sat, 18 May 24