ಫೋರ್ಬ್ಸ್ ನಿಯತಕಾಲಿಕ ಬಿಡುಗಡೆ ಮಾಡಿರುವ ಶ್ರೀಮಂತರ ಪಟ್ಟಿಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಮೊದಲ ಸ್ಥಾನವನ್ನು ಪಡೆದಿದ್ದಾರೆ. ಹಾಗೇ ಅದಾನಿ ಗ್ರೂಪ್ನ ಚೇರ್ಮನ್ ಗೌತಮ್ ಅದಾನಿ ಎರಡನೇ ಸ್ಥಾನದಲ್ಲಿದ್ದಾರೆ. ಪೋರ್ಬ್ಸ್ ಪತ್ರಿಕೆ 2021ರ 10 ಜನ ಶ್ರೀಮಂತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, 84.5 ಬಿಲಿಯನ್ ಡಾಲರ್ ಮೌಲ್ಯದ ಆಸ್ತಿ ಹೊಂದಿರುವ ಮುಕೇಶ್ ಅಂಬಾನಿ ಈ ವರ್ಷವೂ ಮೊದಲ ಸ್ಥಾನ ಕಾಯ್ದುಕೊಂಡಿದ್ದಾರೆ. ಎರಡನೇ ಸ್ಥಾನದಲ್ಲಿರುವ ಅದಾನಿಯವರ ಆಸ್ತಿ ಮೌಲ್ಯ 50.5 ಬಿಲಿಯನ್ ಡಾಲರ್. ಹಾಗೇ, ಮೂರನೇ ಸ್ಥಾನದಲ್ಲಿ ಎಚ್ಸಿಎಲ್ ಸಂಸ್ಥಾಪಕ ಶಿವ ನಾದರ್ ಇದ್ದಾರೆ.
ದೇಶದಲ್ಲಿ ಕೊರೊನಾ ಬಿಕ್ಕಟ್ಟಿದ್ದರೂ ಸ್ಟಾಕ್ ಮಾರ್ಕೆಟ್ನಲ್ಲಿ ಈ ಶ್ರೀಮಂತರ ಆಸ್ತಿ ಮೌಲ್ಯ ಊಹೆಗೂ ನಿಲುಕದಷ್ಟು ಏರಿಕೆಯಾಗಿದೆ. ಕಳೆದ ವರ್ಷ 102 ಇದ್ದ ಬಿಲಿಯನೇರ್ಗಳ ಸಂಖ್ಯೆ ಈ ಬಾರಿ 140ಕ್ಕೆ ಏರಿದೆ ಎಂದು ಪೋರ್ಬ್ಸ್ ತಿಳಿಸಿದೆ. ಇನ್ನು ಮುಕೇಶ್ ಅಂಬಾನಿ ಇಡೀ ಏಷ್ಯಾದಲ್ಲೇ ನಂ.1 ಶ್ರೀಮಂತ. ತೈಲೋದ್ಯಮದಿಂದ-ಟೆಲಿಕಾಂ ಕ್ಷೇತ್ರದವರೆಗೆ ಅವರ ಗಳಿಕೆ ಇದೆ. ಈ ಕಾರಣಕ್ಕೆ ಅವರು ಅನೇಕ ವರ್ಷಗಳಿಂದಲೂ ಶ್ರೀಮಂತರ ಪಟ್ಟಿಯಲ್ಲಿ ನಂಬರ್ 1ರ ಸ್ಥಾನದಲ್ಲೇ ಇದ್ದಾರೆ. ಡಿ-ಮಾರ್ಟ್ ಸಂಸ್ಥಾಪಕ ರಾಧಾಕೃಷ್ಣನ್ ದಮಾನಿ ಈ ಹಿಂದೆ ಎರಡನೇ ಸ್ಥಾನದಲ್ಲಿದ್ದು, ಇದೀಗ ನಾಲ್ಕನೇ ಸ್ಥಾನಕ್ಕೆ ಇಳಿದಿದ್ದಾರೆ. ಎರಡನೇ ಸ್ಥಾನಕ್ಕೆ ಅದಾನಿ ಏರಿದ್ದಾರೆ. ಅದಾನಿಯವರ ಆಸ್ತಿ ಮೌಲ್ಯ ಒಂದೇ ವರ್ಷದಲ್ಲಿ 5ಪಟ್ಟು ಹೆಚ್ಚಾಗಿದೆ ಎಂದು ಪೋರ್ಬ್ಸ್ ತಿಳಿಸಿದೆ.
ಇಲ್ಲಿದೆ ನೋಡಿ ಪೋರ್ಬ್ಸ್ ಪಟ್ಟಿ ಮಾಡಿದ ಭಾರತದ 10 ಜನ ಶ್ರೀಮಂತರ ಹೆಸರು ಮತ್ತು ಅವರ ಆಸ್ತಿ ಮೌಲ್ಯ:
ಮುಕೇಶ್ ಅಂಬಾನಿ (ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ): 84.5 ಬಿಲಿಯನ್ ಡಾಲರ್
ಗೌತಮ್ ಅದಾನಿ (ಅದಾನಿ ಗ್ರೂಪ್ ಚೇರ್ಮೆನ್)-50.5 ಬಿಲಿಯನ್ ಡಾಲರ್
ಶಿವ್ ನಾದರ್ (ಎಚ್ಸಿಎಲ್ ಟೆಕ್ನಾಲಜೀಸ್ನ ಸಂಸ್ಥಾಪಕ, ಚೇರ್ಮೆನ್)-23.5 ಬಿಲಿಯನ್ ಡಾಲರ್
ರಾಧಾಕೃಷ್ಣನ್ ದಮಾನಿ (ಡಿ-ಮಾರ್ಟ್ ಸಂಸ್ಥಾಪಕ)-16.5 ಬಿಲಿಯನ್ ಡಾಲರ್
ಉದಯ್ ಕೋಟಾಕ್ ( ಕೋಟಾಕ್ ಮಹೀಂದ್ರಾದ ಕಾರ್ಯನಿರ್ವಾಹಕ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ)- 15.9 ಬಿಲಿಯನ್ ಡಾಲರ್
ಲಕ್ಷ್ಮೀ ಮಿತ್ತಲ್(ವಿಶ್ವದ ಅತಿದೊಡ್ಡ ಉಕ್ಕುತಯಾರಿಕಾ ಕಂಪನಿ ಆರ್ಸೆಲರ್ ಮಿತ್ತಲ್ನ ಅಧ್ಯಕ್ಷ, ಸಿಇಒ)- 14.9 ಬಿಲಿಯನ್ ಡಾಲರ್
ಕುಮಾರ್ ಬಿರ್ಲಾ( ಆದಿತ್ಯ ಬಿರ್ಲಾ ಚೇರ್ಮೆನ್)-12.8 ಬಿಲಿಯನ್ ಡಾಲರ್
ಸೈರಸ್ ಪೂನವಾಲಾ (ಪೂನಾವಾಲಾ ಗ್ರೂಪ್ನ ಅಧ್ಯಕ್ಷ)-12.7 ಬಿಲಿಯನ್ ಡಾಲರ್
ದಿಲೀಪ್ ಸಾಂಘ್ವಿ (ಸನ್ ಫಾರ್ಮಾಸ್ಯುಟಿಕಲ್ಸ್ ಸ್ಥಾಪಕ)-10.9 ಬಿಲಿಯನ್ ಡಾಲರ್
ಸುನೀಲ್ ಮಿತ್ತಲ್ ಮತ್ತು ಕುಟುಂಬ (ಭಾರತಿ ಎಂಟರ್ಪ್ರೈಸಸ್ ಸ್ಥಾಪಕ-ಚೇರ್ಮೆನ್)-10.5 ಬಿಲಿಯನ್ ಡಾಲರ್
(Mukesh Ambani Indias richest Person according to Forbes list)
Published On - 1:37 pm, Wed, 7 April 21