ಮುಂಬೈ: ಭಾರತದ ಶ್ರೀಮಂತರ ಸಾಲಿನಲ್ಲಿ ಮೊದಲಿಗರಾಗಿರುವ ರಿಲಯನ್ಸ್ ಸಂಸ್ಥೆಯ ಒಡೆಯ ಮುಕೇಶ್ ಅಂಬಾನಿಗೆ Z+ ಭದ್ರತೆ ಒದಗಿಸಲಾಗುತ್ತಿದೆ. ವಿಶೇಷ ಎಂದರೆ, ಈಗ ಅವರ ಬೆಂಗಾವಲು ಪಡೆಗೆ ನಾಲ್ಕು ಮರ್ಸಿಡಿಸ್ ಬೆಂಜ್ ಜಿ63 ಎಎಂಜಿ ಎಸ್ಯುವಿ ಸೇರ್ಪಡೆ ಆಗಿದೆ.
ಹೌದು, ಮುಂಬೈ ರಸ್ತೆಯಲ್ಲಿ ಅಂಬಾನಿ ಸಂಚಾರ ಮಾಡಿದ್ದು, ಈ ವೇಳೆ ಹೊಸದಾಗಿ ಸೇರ್ಪಡೆ ಆಗಿರುವ ಬೆಂಜ್ ಜಿ63 ಎಎಂಜಿ ಕಾಣಿಸಿದೆ. ನಾಲ್ಕು ವಾಹನಗಳ ಮೌಲ್ಯ ಸುಮಾರು 12 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಅಂದರೆ, ಒಂದು ವಾಹನದ ಬೆಲೆ ಮೂರು ಕೋಟಿ ರೂಪಾಯಿ.
ಇದರ ಜೊತೆಗೆ ಸಾಕಷ್ಟು ಐಷಾರಾಮಿ ಕಾರುಗಳು ಅಂಬಾನಿ ಅವರ ಭದ್ರತಾ ಪಡೆಯಲ್ಲಿವೆ. ಲ್ಯಾಂಡ್ ರೋವರ್ ಡಿಸ್ಕವರಿ ಸ್ಪೋರ್ಟ್ಸ್, ಬಿಎಂಡಬ್ಲ್ಯು 5, ಫೋರ್ಡ್ ಎಂಡೀವರ್, ಟೊಯಾಟೋ ಫಾರ್ಚೂನರ್ ವಾಹನಗಳು ಅಂಬಾನಿಗೆ ಭದ್ರತೆ ನೀಡುತ್ತಿವೆ.
ಬೆಂಜ್ ಜಿ63 ಎಎಂಜಿ ಎಸ್ಯುವಿ ಐಷಾರಾಮಿ ಜೊತೆಗೆ ಸಾಕಷ್ಟು ಆಯ್ಕೆಗಳನ್ನು ಹೊಂದಿದೆ. 0-100 ಕಿಮೀ ವೇಗವನ್ನು ಕೇವಲ 4.5 ಸೆಕೆಂಡ್ನಲ್ಲಿ ತಲುಪುವ ಸಾಮರ್ಥ್ಯವನ್ನು ಈ ವಾಹನ ಹೊಂದಿದೆ. ಗರಿಷ್ಠ 220 ಕಿ.ಮೀ ವೇಗದಲ್ಲಿ ಸಂಚಾರ ಸಾಧ್ಯ. ಅಲ್ಲದೆ, ಸಾಕಷ್ಟು ಸುರಕ್ಷಿತ ವಾಹನಗಳ ಸಾಲಿನಲ್ಲಿ ಮರ್ಸಿಡಿಸ್ ಬೆಂಜ್ ಜಿ63 ಎಎಂಜಿ ಎಸ್ಯುವಿ ಕೂಡ ಇದೆ.
ಪ್ರತಿ ತಿಂಗಳು ಅಂಬಾನಿ ಭದ್ರತೆಗೆ 15-16 ಲಕ್ಷ ವೆಚ್ಚವಾಗಲಿದೆ. ಈ ಹಣವನ್ನು ಸರ್ಕಾರಕ್ಕೆ ಅಂಬಾನಿ ಪಾವತಿ ಮಾಡುತ್ತಾರೆ. ಹೀಗಾಗಿ, ಇಲ್ಲಿ ಭದ್ರತಾ ಸಿಬ್ಬಂದಿಗೆ ವಾಹನ ನೀಡಿದ್ದು ಕೂಡ ಅಂಬಾನಿಯೇ.
ಷೇರು ಬೆಲೆಯಲ್ಲಿ ಮೋಸ: ಮುಕೇಶ್ ಅಂಬಾನಿಗೂ ದಂಡ.. ರಿಲಯನ್ಸ್ ಸಮೂಹಕ್ಕೆ 70 ಕೋಟಿ ರೂ ದಂಡ ವಿಧಿಸಿದ ಸೆಬಿ
Published On - 1:37 pm, Sun, 17 January 21