AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mukul Rohatgi: ಮುಕುಲ್ ರೋಹಟಗಿ ಭಾರತದ ಮುಂದಿನ ಅಟಾರ್ನಿ ಜನರಲ್

ಮುಕುಲ್ ರೋಹಟಗಿ ಅವರನ್ನು ಭಾರತದ ಅಟಾರ್ನಿ ಜನರಲ್ ಆಗಿ ನೇಮಕ ಮಾಡಲಾಗಿದೆ. ಅವರು ಅಕ್ಟೋಬರ್ 1 ರಿಂದ ತಮ್ಮ ಎರಡನೇ ಅವಧಿಯನ್ನು ಪ್ರಾರಂಭಿಸಲಿದ್ದಾರೆ.

Mukul Rohatgi: ಮುಕುಲ್ ರೋಹಟಗಿ ಭಾರತದ ಮುಂದಿನ ಅಟಾರ್ನಿ ಜನರಲ್
Mukul Rohatgi
Follow us
TV9 Web
| Updated By: ನಯನಾ ರಾಜೀವ್

Updated on: Sep 13, 2022 | 10:44 AM

ಮುಕುಲ್ ರೋಹಟಗಿ ಅವರನ್ನು ಭಾರತದ ಅಟಾರ್ನಿ ಜನರಲ್ ಆಗಿ ನೇಮಕ ಮಾಡಲಾಗಿದೆ. ಅವರು ಅಕ್ಟೋಬರ್ 1 ರಿಂದ ತಮ್ಮ ಎರಡನೇ ಅವಧಿಯನ್ನು ಪ್ರಾರಂಭಿಸಲಿದ್ದಾರೆ. ಕೆಕೆ ವೇಣುಗೋಪಾಲ್ ಅವರ ಅಧಿಕಾರಾವಧಿಯು ಸೆಪ್ಟೆಂಬರ್ 30 ಕ್ಕೆ ಕೊನೆಗೊಳ್ಳಲಿದ್ದು, ಅವರ ಸ್ಥಾನವನ್ನು ರೋಹಟಗಿ ವಹಿಸಲಿದ್ದಾರೆ.

ರೋಹಟಗಿ ಅವರು ಈ ಹಿಂದೆ ಜೂನ್ 2014 ರಲ್ಲಿ ಅಟಾರ್ನಿ ಜನರಲ್ ಆಗಿ ನೇಮಕಗೊಂಡರು ಮತ್ತು ಜೂನ್ 2017 ರವರೆಗೆ ಸೇವೆ ಸಲ್ಲಿಸಿದರು. ಅವರ ಎರಡನೇ ಬಾರಿಗೆ ಈ ನೇಮಕ ಮಾಡಲಾಗುತ್ತಿದೆ. ಪ್ರಸ್ತುತ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಅವರ ಸೇವೆ ಜೂನ್ 30 ರಂದು ಕೊನೆಗೊಳ್ಳುತ್ತಿದೆ, ಆದರೆ ಅವರ ಸೇವೆಯನ್ನು ವಿಸ್ತರಿಸಲಾಗಿದೆ.

ಮುಕುಲ್ ರೋಹಟಗಿ ಅವರು ಅಕ್ಟೋಬರ್ 1, 2022 ರಿಂದ ಅಟಾರ್ನಿ ಜನರಲ್ ಆಗಿ ತಮ್ಮ ಎರಡನೇ ಅವಧಿಯನ್ನು ಪ್ರಾರಂಭಿಸಲಿದ್ದಾರೆ. ವೇಣುಗೋಪಾಲ್ ಅವರು ಇತ್ತೀಚೆಗೆ ಸುಪ್ರೀಂ ಕೋರ್ಟ್‌ಗೆ ಸೆಪ್ಟೆಂಬರ್ 30 ರ ನಂತರ ಅಧಿಕಾರದಲ್ಲಿ ಇರುವುದಿಲ್ಲ ಎಂದು ಸೂಚಿಸಿದ್ದರು.

ವೇಣುಗೋಪಾಲ್ ಅವರ ಅಧಿಕಾರಾವಧಿಯನ್ನು ಈ ವರ್ಷದ ಜೂನ್ ಅಂತ್ಯದಲ್ಲಿ ಮೂರು ತಿಂಗಳು ವಿಸ್ತರಿಸಲಾಯಿತು. ವಿಸ್ತರಣೆಯನ್ನು ಪಡೆದ ನಂತರ, ಅಟಾರ್ನಿ ಜನರಲ್ ಅವರ ಅಧಿಕಾರಾವಧಿಯು 30 ಸೆಪ್ಟೆಂಬರ್ 2022 ರಂದು ಕೊನೆಗೊಳ್ಳಲಿದೆ.

ಕೆಕೆ ವೇಣುಗೋಪಾಲ್ ಅವರು ಇನ್ನೂ 3 ತಿಂಗಳು ಅಟಾರ್ನಿ ಜನರಲ್ ಆಗಿ ಮುಂದುವರಿಯಲಿದ್ದಾರೆ ಎಂದು ಕೇಂದ್ರ ಹೇಳಿದೆ.

ಎರಡನೇ ಬಾರಿಗೆ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ ಕೆ.ಕೆ.ವೇಣುಗೋಪಾಲ್ ಅವರ ಅಧಿಕಾರಾವಧಿ ಜೂನ್ 30ಕ್ಕೆ ಮುಕ್ತಾಯವಾಗುತ್ತಿದ್ದು, ಈ ಹುದ್ದೆಗೆ ನೇಮಕಾತಿ ಅಗತ್ಯವಿದೆ ಎಂದು ಕೆಲ ತಿಂಗಳ ಹಿಂದೆ ಕಾನೂನು ಸಚಿವಾಲಯ ಸರ್ಕಾರಕ್ಕೆ ಮಾಹಿತಿ ನೀಡಿತ್ತು.

ವೇಣುಗೋಪಾಲ್ ಅವರು ಮೊದಲು 1 ಜುಲೈ 2017 ರಂದು ಕೇಂದ್ರ ಸರ್ಕಾರದ ಉನ್ನತ ಕಾನೂನು ಅಧಿಕಾರಿಯಾಗಿ ಅಟಾರ್ನಿ ಜನರಲ್ ಆಗಿ ಅಧಿಕಾರ ವಹಿಸಿಕೊಂಡರು.

ಸೇವೆ ಮುಗಿದ ನಂತರ, ಅವರಿಗೆ 3 ತಿಂಗಳ ವಿಸ್ತರಣೆಯನ್ನು ನೀಡಲಾಯಿತು. ವೇಣುಗೋಪಾಲ್ ಅವರು ಯಾವುದೇ ಹೆಚ್ಚಿನ ವಿಸ್ತರಣೆಯನ್ನು ತೆಗೆದುಕೊಳ್ಳಲು ನಿರಾಕರಿಸಿದರು, ಆದ್ದರಿಂದ ಸರ್ಕಾರವು ಹೊಸ ಅಟಾರ್ನಿ ಜನರಲ್ ಅನ್ನು ನೇಮಿಸಲು ನಿರ್ಧರಿಸಿತು ಎಂದು ಹೇಳಲಾಗುತ್ತಿದೆ.

ದೇಶದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ