Amit Shah: ಭಾರತ ಕೆಲವೇ ವರ್ಷಗಳಲ್ಲಿ 3ನೇ ಅತಿದೊಡ್ಡ ಆರ್ಥಿಕತೆ ದೇಶವಾಗಲಿದೆ: ಅಮಿತ್ ಶಾ
ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆ ಹೊಂದಿರುವ ದೇಶವಾಗಲಿದೆ ಮತ್ತು ಸಹಕಾರಿ ಕ್ಷೇತ್ರವು ದೇಶದ ಆರ್ಥಿಕ ಬೆಳವಣಿಗೆಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಲಿದೆ ಎಂದು ಶಾ ಹೇಳಿದ್ದಾರೆ.
ಇನ್ನು ಕೆಲವೇ ವರ್ಷಗಳಲ್ಲಿ ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆ ಹೊಂದಿರುವ ದೇಶವಾಗಲಿದೆ ಮತ್ತು ಸಹಕಾರಿ ಕ್ಷೇತ್ರವು ದೇಶದ ಆರ್ಥಿಕ ಬೆಳವಣಿಗೆಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಲಿದೆ ಎಂದು ಸಹಕಾರ ಸಚಿವ ಅಮಿತ್ ಶಾ ಸೋಮವಾರ ಹೇಳಿದ್ದಾರೆ. 2024ರ ಸಾರ್ವತ್ರಿಕ ಚುನಾವಣೆಗೂ ಮುನ್ನ ಗ್ರಾಮ ಮಟ್ಟದಲ್ಲಿ 2 ಲಕ್ಷ ಹೊಸ ಡೈರಿ ಸಹಕಾರಿ ಸಂಘಗಳನ್ನು ಸ್ಥಾಪಿಸಲು ಸರ್ಕಾರ ಸಹಾಯ ಮಾಡಲಿದೆ ಎಂದು ಗೃಹ ಸಚಿವರೂ ಆಗಿರುವ ಅಮಿತ್ ಶಾ ಘೋಷಿಸಿದರು.
ವೃತ್ತಿಪರತೆ, ಅತ್ಯಾಧುನಿಕ ತಂತ್ರಜ್ಞಾನ, ಗಣಕೀಕರಣ ಮತ್ತು ಡಿಜಿಟಲ್ ಪಾವತಿಯನ್ನು ದೊಡ್ಡ ರೀತಿಯಲ್ಲಿ ಅಳವಡಿಸಿಕೊಳ್ಳುವಂತೆ ಅವರು ಡೈರಿ ಉದ್ಯಮವನ್ನು ಕೇಳಿಕೊಂಡರು, ಇಲ್ಲದಿದ್ದರೆ ಮುಂದೆ ತೊಂದರೆಗಳನ್ನು ಎದುರಿಸಬೇಕಾಗುತ್ತದೆ.ಹೆಚ್ಚುತ್ತಿರುವ ದೇಶೀಯ ಬೇಡಿಕೆಯನ್ನು ಪೂರೈಸಲು ಮತ್ತು ಬಡ ರಾಷ್ಟ್ರಗಳಿಗೆ ಸರಬರಾಜು ಮಾಡಲು ಹಾಲು ಉತ್ಪಾದನೆಯನ್ನು ಹೆಚ್ಚಿಸಲು ಡೈರಿ ಉದ್ಯಮವನ್ನು ಸಚಿವರು ಹೇಳಿದ್ದಾರೆ. ಹಾಲು ಸಂಸ್ಕರಣೆಗೆ ಬಳಸುವ ಯಂತ್ರೋಪಕರಣಗಳ ತಯಾರಿಕೆಯಲ್ಲಿ ಉದ್ಯಮವು ಸ್ವಾವಲಂಬಿಯಾಗುವಂತೆ ಅವರು ಉತ್ತೇಜಿಸಿದರು.
ಸೆಪ್ಟೆಂಬರ್ 12-15ರ ಅವಧಿಯಲ್ಲಿ ಇಲ್ಲಿನ ಇಂಡಿಯಾ ಎಕ್ಸ್‌ಪೋ ಸೆಂಟರ್ ಮತ್ತು ಮಾರ್ಟ್‌ನಲ್ಲಿ ಆಯೋಜಿಸಲಾಗಿದ್ದ ಇಂಟರ್ನ್ಯಾಷನಲ್ ಡೈರಿ ಫೆಡರೇಶನ್ ವರ್ಲ್ಡ್ ಡೈರಿ ಶೃಂಗಸಭೆ (ಐಡಿಎಫ್ ಡಬ್ಲ್ಯುಡಿಎಸ್) 2022ರಲ್ಲಿ ಕಾರ್ಯಕ್ರಮದಲ್ಲಿ ಹೇಳಿದರು.2014ರಲ್ಲಿ ಭಾರತವು ವಿಶ್ವದ 11ನೇ ಅತಿದೊಡ್ಡ ಆರ್ಥಿಕತೆ ದೇಶವಾಗಲಿದೆ. ಈಗ ಭಾರತ ಐದನೇ ಅತಿದೊಡ್ಡ ಆರ್ಥಿಕತೆಯಾಗಿದೆ ಎಂದು ಸಚಿವರು ಹೇಳಿದರು. ಇನ್ನು ಕೆಲವೇ ವರ್ಷಗಳಲ್ಲಿ ನಾವು ಮೂರನೇ ಸ್ಥಾನಕ್ಕೇರುತ್ತೇವೆ ಎಂಬ ಸಂಪೂರ್ಣ ವಿಶ್ವಾಸ ನನಗಿದೆ ಎಂದು ಸಚಿವರು ಹೇಳಿದರು.
ದೇಶವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ಸಂದರ್ಭದಲ್ಲಿ ಸಹಕಾರ ಕ್ಷೇತ್ರದ ಕೊಡುಗೆಯ ಬಗ್ಗೆಯೂ ಚರ್ಚಿಸಲಾಗುವುದು ಎಂದು ಶಾ ವಿಶ್ವಾಸ ವ್ಯಕ್ತಪಡಿಸಿದರು. 48 ವರ್ಷಗಳ ನಂತರ ಶೃಂಗಸಭೆಯನ್ನು ಆಯೋಜಿಸಲಾಗಿದೆ ಎಂದು ಹೇಳಿದ ಶಾ, ದೇಶವು ಈಗ ಹಾಲು ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಿದೆ ಮತ್ತು ರಫ್ತುದಾರ ಮಾಡುವ ದೇಶವಾಗಿದೆ. ಮಹಿಳಾ ಸಬಲೀಕರಣದಲ್ಲಿ ಮತ್ತು ಅಪೌಷ್ಟಿಕತೆಯ ವಿರುದ್ಧ ಹೋರಾಡುವಲ್ಲಿ ಡೈರಿ ಸಹಕಾರ ಸಂಘಗಳು ದೊಡ್ಡ ಪಾತ್ರವನ್ನು ವಹಿಸಿವೆ ಎಂದು ಶಾ ಹೇಳಿದರು.
ಸಹಕಾರ ಕ್ಷೇತ್ರ ಮತ್ತು ಡೈರಿ ಸಹಕಾರಿ ಸಂಘಗಳು ಗ್ರಾಮೀಣಾಭಿವೃದ್ಧಿಯಲ್ಲಿ ಸಾಕಷ್ಟು ಕೆಲಸ ಮಾಡಿವೆ. ನೈಸರ್ಗಿಕ ಕೃಷಿಯನ್ನು ಜೀವನಾಡಿಯಾಗಿ ಮಾಡಿಕೊಳ್ಳಲು ಡೈರಿ ಉದ್ಯಮವನ್ನು ಶಾ ಕೇಳಿಕೊಂಡರು, ಇದು ಜನರ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ಆರ್ಥಿಕ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಸಾವಯವ ಕೃಷಿ ಮತ್ತು ರಫ್ತು ಉತ್ತೇಜಿಸಲು ಮೂರು ಬಹು ಸಹಕಾರಿ ಸಂಘಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಸಚಿವರು ಘೋಷಿಸಿದರು. ಈ ತಿಂಗಳ ಅಂತ್ಯದ ವೇಳೆಗೆ ಸಾವಯವ ಉತ್ಪನ್ನಗಳನ್ನು ಉತ್ತೇಜಿಸಲು ಅಮುಲ್ ರಫ್ತು ಕೇಂದ್ರವನ್ನು ಸ್ಥಾಪಿಸಲಿದೆ ಎಂದು ಶಾ ಹೇಳಿದರು.
ವಾರ್ಷಿಕ ವಹಿವಾಟು ಸುಮಾರು 60,000 ಕೋಟಿ ತಲುಪಿರುವ ಅಮುಲ್‌ನ ಯಶೋಗಾಥೆಯನ್ನು ಸಚಿವರು ಹಂಚಿಕೊಂಡರು. ಹಾಲಿನ ಚಿಲ್ಲರೆ ಬೆಲೆಯಲ್ಲಿ 77 ಪ್ರತಿಶತದಷ್ಟು ರೈತರಿಗೆ ರವಾನೆಯಾಗುತ್ತಿದೆ. ಆದರೆ ಪ್ರಪಂಚದಲ್ಲಿ 40-45 ಪ್ರತಿಶತದಷ್ಟಿದೆ ಎಂದು ಹೇಳಿದರು. ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿ ಮಾದರಿ ಉತ್ತಮ ಎಂದು ಸಚಿವರು ತಿಳಿಸಿದರು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಮ್ಮ ಭಾಷಣದಲ್ಲಿ, ರಾಜ್ಯದಲ್ಲಿ ಸಹಕಾರಿ ಕ್ಷೇತ್ರದ ಬೆಳವಣಿಗೆಗೆ ದೊಡ್ಡ ಅವಕಾಶವಿದೆ. ಉದ್ಯೋಗ ಸೃಷ್ಟಿ ಮತ್ತು ಗ್ರಾಮೀಣ ಏಳಿಗೆಗಾಗಿ ಸಹಕಾರಿ ಮತ್ತು ಹೈನುಗಾರಿಕೆ ಕ್ಷೇತ್ರಗಳನ್ನು ಉತ್ತೇಜಿಸುವ ಅಗತ್ಯವಿದೆ ಎಂದು ಅವರು ಹೇಳಿದರು. ಹೈನುಗಾರಿಕೆ ಕ್ಷೇತ್ರವು ರೈತರಿಗೆ ಜೀವನೋಪಾಯದ ಜೊತೆಗೆ ಪೌಷ್ಟಿಕಾಂಶವನ್ನು ಒದಗಿಸುತ್ತದೆ ಎಂದು ಯೋಗಿ ಆದಿತ್ಯನಾಥ್ ಹೇಳಿದರು.
Published On - 11:34 am, Tue, 13 September 22