Kohinoor Diamond: ಕೊಹಿನೂರ್ ವಜ್ರ ‘ಜಗನ್ನಾಥ’ನಿಗೆ ಸೇರಿದ್ದು, ಬ್ರಿಟನ್ನಿಂದ ತರಿಸಿಕೊಡುವಂತೆ ರಾಷ್ಟ್ರಪತಿಗೆ ಮನವಿ
ಕೊಹಿನೂರ್ ವಜ್ರವು ದೇವ ಜಗನ್ನಾಥನಿಗೆ ಸೇರಿದ್ದು, ಯುಕೆಯಿಂದ ತರಿಸಿಕೊಡಿ ಎಂದು ಒಡಿಶಾದ ಸಾಮಾಜಿಕ-ಸಾಂಸ್ಕೃತಿಕ ಸಂಸ್ಥೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಬಳಿ ಮನವಿ ಮಾಡಿದೆ.
ಕೊಹಿನೂರ್ ವಜ್ರವು ದೇವ ಜಗನ್ನಾಥನಿಗೆ ಸೇರಿದ್ದು, ಯುಕೆಯಿಂದ ತರಿಸಿಕೊಡಿ ಎಂದು ಒಡಿಶಾದ ಸಾಮಾಜಿಕ-ಸಾಂಸ್ಕೃತಿಕ ಸಂಸ್ಥೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಬಳಿ ಮನವಿ ಮಾಡಿದೆ.
ರಾಣಿ ಎಲಿಜಬೆತ್-2 (Queen Elizabeth II) ನಿಧನ ನಂತರ ಆಕೆಯ ಹಿರಿಯ ಪುತ್ರ ಪ್ರಿನ್ಸ್ ಚಾರ್ಲ್ಸ್ ಬ್ರಿಟನ್ ರಾಜನಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ನಿಯಮಗಳ ಪ್ರಕಾರ, 105 ಕ್ಯಾರೆಟ್ ವಜ್ರವಿರುವ ಕಿರೀಟವನ್ನು ಚಾರ್ಲ್ಸ್ ಪತ್ನಿ ಕಾರ್ನ್‌ವಾಲ್ ಕ್ಯಾಮಿಲ್ಲಾ ಅವರು ಧರಿಸಲಿದ್ದಾರೆ.
ಕೊಹಿನೂರ್ ಅನ್ನು ವಿಶ್ವದ ಅತ್ಯಂತ ಅಮೂಲ್ಯವಾದ ರತ್ನಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಕೊಹಿನೂರ್ 14 ನೇ ಶತಮಾನದಲ್ಲಿ ದಕ್ಷಿಣ ಭಾರತದ ಕೊಲ್ಲೂರು ಗಣಿಯಲ್ಲಿ ಕಲ್ಲಿದ್ದಲು ಗಣಿಗಾರಿಕೆಯ ಸಮಯದಲ್ಲಿ ಕಂಡುಬಂದಿದೆ.
ಈ 105.6-ಕ್ಯಾರೆಟ್ ವಜ್ರವು 1937 ರಿಂದ ಬ್ರಿಟಿಷ್ ಕ್ರೌನ್‌ನಲ್ಲಿದೆ. ಇದರ ತೂಕ 21.6 ಗ್ರಾಂ. ಇದನ್ನು ಒಂದು ಕಾಲದಲ್ಲಿ ವಿಶ್ವದ ಅತಿ ದೊಡ್ಡ ವಜ್ರವೆಂದು ಪರಿಗಣಿಸಲಾಗಿತ್ತು.
12ನೇ ಶತಮಾನದ ದೇಗುಲಕ್ಕೆ ಕೊಹಿನೂರ್ ವಜ್ರವನ್ನು ಮರಳಿ ತರುವ ಪ್ರಕ್ರಿಯೆಯನ್ನು ಸುಗಮಗೊಳಿಸಲು ಮಧ್ಯಸ್ಥಿಕೆ ವಹಿಸುವಂತೆ ಕೋರಿ ಪುರಿ ಮೂಲದ ಶ್ರೀ ಜಗನ್ನಾಥ ಸೇನೆಯು ರಾಷ್ಟ್ರಪತಿಗಳಿಗೆ ಜ್ಞಾಪಕ ಪತ್ರವನ್ನು ಸಲ್ಲಿಸಿತು.
ಕೊಹಿನೂರ್ ವಜ್ರವು ಶ್ರೀ ಜಗನ್ನಾಥ ದೇವರದ್ದು, ಅದು ಈಗ ಇಂಗ್ಲೆಂಡ್ ರಾಣಿ ಬಳಿ ಇದೆ. ಮಹಾರಾಜ ರಂಜಿತ್ ಸಿಂಗ್ ಅವರು ತಮ್ಮ ಇಚ್ಛೆಯ ಅನುಸಾರವಾಗಿ ಅದನ್ನು ಜಗನ್ನಾಥ ದೇವರಿಗೆ ದಾನ ಮಾಡಿದಂತೆ, ಅದನ್ನು ಭಾರತಕ್ಕೆ ತರಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಪ್ರಧಾನಿಯವರಲ್ಲೂ ಮನವಿ ಮಾಡುತ್ತೇವೆ ಎಂದು ಹೇಳಿದೆ.
ಪಂಜಾಬ್‌ನ ಮಹಾರಾಜ ರಂಜಿತ್ ಸಿಂಗ್ ಅವರು ಅಫ್ಘಾನಿಸ್ತಾನದ ನಾದಿರ್ ಶಾ ವಿರುದ್ಧದ ಯುದ್ಧದಲ್ಲಿ ಗೆದ್ದ ನಂತರ ಪುರಿ ಭಗವಂತನಿಗೆ ವಜ್ರವನ್ನು ದಾನ ಮಾಡಿದ್ದಾರೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ರಣಜಿತ್ ಸಿಂಗ್ 1839 ರಲ್ಲಿ ನಿಧನರಾದರು. 10 ವರ್ಷಗಳ ನಂತರ ಬ್ರಿಟಿಷರು ಕೊಹಿನೂರ್ ವಜ್ರವನ್ನು ರಣಜಿತ್ ಅವರ ಮಗ ದುಲೀಪ್ ಸಿಂಗ್‌ನಿಂದ ಕಿತ್ತುಕೊಂಡರು ಎಂದು ಇತಿಹಾಸಕಾರ ಮತ್ತು ಸಂಶೋಧಕ ಅನಿಲ್ ಧೀರ್ ಮಾಹಿತಿ ನೀಡಿದ್ದಾರೆ.
ಒಡಿಶಾದ ಆಡಳಿತಾರೂಢ ಬಿಜು ಜನತಾ ದಳ (ಬಿಜೆಡಿ) ಸಂಸದ ಭೂಪಿಂದರ್ ಸಿಂಗ್ 2016 ರಲ್ಲಿ ರಾಜ್ಯಸಭೆಯಲ್ಲಿ ವಜ್ರವನ್ನು ಮರಳಿ ತರುವ ವಿಷಯವನ್ನು ಪ್ರಸ್ತಾಪಿಸಿದರು.
ಪುರಿಯ ಬಿಜೆಪಿ ಶಾಸಕ ಜಯಂತ್ ಸಾರಂಗಿ ಕೂಡ ಒಡಿಶಾ ವಿಧಾನಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸುವುದಾಗಿ ಹೇಳಿದ್ದಾರೆ. ಕೊಹಿನೂರ್ ವಜ್ರವನ್ನು ಲಾಹೋರ್ ಮಹಾರಾಜರು ಆಗಿನ ಇಂಗ್ಲೆಂಡ್ ರಾಣಿಗೆ ಒಪ್ಪಿಸಿದರು.
ಅಂದರೆ ಸುಮಾರು 170 ವರ್ಷಗಳ ಹಿಂದೆ ಬ್ರಿಟಿಷರಿಗೆ ಹಸ್ತಾಂತರವಾಗಿರಲಿಲ್ಲ. ಆರ್ಕಿಯಲಾಜಿಕಲ್ ಸರ್ವೆ ಆಫ್ ಇಂಡಿಯಾ ಕೆಲವು ವರ್ಷಗಳ ಹಿಂದೆ ಆರ್‌ಟಿಐಗೆ ಪ್ರತಿಕ್ರಿಯೆಯಾಗಿ ಈ ಮಾಹಿತಿಯನ್ನು ನೀಡಿತ್ತು. ಅದೇನೆಂದರೆ, ವಜ್ರವನ್ನು ಕಿತ್ತುಕೊಳ್ಳಲಾಗಿದೆ, ಹಸ್ತಾಂತರಿಸಲಾಗಿಲ್ಲ ಎನ್ನುವ ಮಾಹಿತಿ ಬಹಿರಂಗಗೊಂಡಿತ್ತು.
ದೇಶದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ