ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ (82)ಕೊನೆಯುಸಿರಿಳೆದಿದ್ದಾರೆ.
ಮುಲಾಯಂ ಸಿಂಗ್ ಯಾದವ್ ಅವರನ್ನು ಗುರುಗ್ರಾಮ್‌ನ ಮೇದಾಂತ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಕ್ಟೋಬರ್ 2 ರಂದು ತೀವ್ರ ಅನಾರೋಗ್ಯದ ಕಾರಣ ಮುಲಾಯಂ ಸಿಂಗ್ ಅವರನ್ನು ಐಸಿಯುಗೆ ಸ್ಥಳಾಂತರಿಸಲಾಯಿತು.
ಮುಲಾಯಂ ಸಿಂಗ್ ಯಾದವ್ ಅವರು ಆಗಸ್ಟ್ 22 ರಿಂದ ಮೇದಾಂತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಭಾನುವಾರ (ಅಕ್ಟೋಬರ್ 2) ಅವರ ಆರೋಗ್ಯ ಹದಗೆಟ್ಟ ನಂತರ ವೈದ್ಯರು ಅವರನ್ನು ಐಸಿಯುಗೆ ಸ್ಥಳಾಂತರಿಸಲಾಗಿತ್ತು. ರಾತ್ರಿಯ ವೇಳೆಯಲ್ಲಿಯೇ ಅವರನ್ನು ಜೀವರಕ್ಷಕ ವ್ಯವಸ್ಥೆಯಲ್ಲಿ ಅಂದರೆ ವೆಂಟಿಲೇಟರ್‌ನಲ್ಲಿ ಇರಿಸಲಾಗಿತ್ತು.
In a tweet, Samajwadi Party chief Akhilesh Yadav announces the passing away of his father and party supremo Mulayam Singh Yadav pic.twitter.com/P7EaxdJfPB
— ANI (@ANI) October 10, 2022
ಕಳೆದ 8 ದಿನಗಳಿಂದ ಮುಲಾಯಂ ಸ್ಥಿತಿಯಲ್ಲಿ ಯಾವುದೇ ಸುಧಾರಣೆಯಾಗಿರಲಿಲ್ಲ. ಮೇದಾಂತ ಆಸ್ಪತ್ರೆ ಗುರುವಾರ ಹೊರಡಿಸಿದ ಬುಲೆಟಿನ್‌ನಲ್ಲಿ, ಮುಲಾಯಂ ಸಿಂಗ್ ಅವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿತ್ತು.
Published On - 9:45 am, Mon, 10 October 22