ಮುಂಬೈನ ಬಾಂದ್ರಾದಲ್ಲಿ 5 ಅಂತಸ್ತಿನ ಕಟ್ಟಡ ಕುಸಿತ; ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ

| Updated By: ಸುಷ್ಮಾ ಚಕ್ರೆ

Updated on: Jan 26, 2022 | 6:52 PM

ಇಂದು ಸಂಜೆ 4 ಗಂಟೆ ಸುಮಾರಿಗೆ ಬಾಂದ್ರಾದ ಬೆಹ್ರಾಂ ನಗರದಲ್ಲಿ 5 ಮಹಡಿಯ ಕಟ್ಟಡ ಕುಸಿತವಾಗಿದ್ದು, ಸದ್ಯಕ್ಕೆ ಯಾವುದೇ ಪ್ರಾಣಾಪಾಯವಾದ ಬಗ್ಗೆ ವರದಿಯಾಗಿಲ್ಲ.

ಮುಂಬೈನ ಬಾಂದ್ರಾದಲ್ಲಿ 5 ಅಂತಸ್ತಿನ ಕಟ್ಟಡ ಕುಸಿತ; ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ
ಬಾಂದ್ರಾದಲ್ಲಿ 5 ಅಂತಸ್ತಿನ ಕಟ್ಟಡ ಕುಸಿತ
Follow us on

ಮುಂಬೈ: ಮಹಾರಾಷ್ಟ್ರದ ಮುಂಬೈನ (Mumbai) ಬಾಂದ್ರಾ ಪೂರ್ವ ಭಾಗದ ಬೆಹ್ರಾಂ ನಗರದಲ್ಲಿ 5 ಅಂತಸ್ತಿನ ಬೃಹತ್ ಕಟ್ಟಡ ಕುಸಿದಿದೆ. ಈ ಘಟನೆಯಲ್ಲಿ ಕನಿಷ್ಠ ಐವರು ಕಟ್ಟಡದ ಅವಶೇಷಗಳಡಿ ಸಿಲುಕಿರುವ ಅನುಮಾನ ವ್ಯಕ್ತವಾಗಿದೆ. ಈಗಾಗಲೇ ರಕ್ಷಣಾ ತಂಡಗಳು ಕಟ್ಟಡ ಕುಸಿತವಾದ ಸ್ಥಳಕ್ಕೆ ಭೇಟಿ ನೀಡಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ.

ಇಂದು ಸಂಜೆ 4 ಗಂಟೆ ಸುಮಾರಿಗೆ ಬೆಹ್ರಾಂ ನಗರದಲ್ಲಿ 5 ಮಹಡಿಯ ಕಟ್ಟಡ ಕುಸಿತವಾಗಿದ್ದು, ಸದ್ಯಕ್ಕೆ ಯಾವುದೇ ಪ್ರಾಣಾಪಾಯವಾದ ಬಗ್ಗೆ ವರದಿಯಾಗಿಲ್ಲ. ಘಟನೆ ನಡೆದ ಸ್ಥಳಕ್ಕೆ 6 ಆ್ಯಂಬುಲೆನ್ಸ್​ಗಳು ಆಗಮಿಸಿವೆ ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ.

ಈಗಾಗಲೇ ಅವಶೇಷಗಳಡಿ ಸಿಲುಕಿರುವವರ ರಕ್ಷಣೆಗೆ ಐದು ಅಗ್ನಿಶಾಮಕ ವಾಹನಗಳು, ಒಂದು ರಕ್ಷಣಾ ವ್ಯಾನ್ ಮತ್ತು ಆರು ಆಂಬ್ಯುಲೆನ್ಸ್‌ಗಳನ್ನು ಸ್ಥಳಕ್ಕೆ ಕಳುಹಿಸಲಾಗಿದೆ ಎಂದು ಮುಂಬೈನ ಮುನ್ಸಿಪಲ್ ಕಾರ್ಪೊರೇಶನ್ (ಬಿಎಂಸಿ) ಅಧಿಕಾರಿಗಳು ತಿಳಿಸಿದ್ದಾರೆ.

ಈ ಘಟನೆ ಕುರಿತು ಹೆಚ್ಚಿನ ಮಾಹಿತಿ ಇನ್ನೂ ಲಭ್ಯವಾಗಬೇಕಾಗಿದೆ.

ಇದನ್ನೂ ಓದಿ: ಮುಂಬೈನಲ್ಲಿ ದಾಖಲಾಗುತ್ತಿರುವ ಹೊಸ ಕೊವಿಡ್​ 19 ಕೇಸ್​ಗಳಲ್ಲಿ ಶೇ.89ರಷ್ಟು ಒಮಿಕ್ರಾನ್​ ಪ್ರಕರಣಗಳು; ಸಮೀಕ್ಷೆ ವರದಿ

ಮುಂಬೈ: ಕಮಲಾ ಬಿಲ್ಡಿಂಗ್ ಅಗ್ನಿ ದುರಂತದ ತನಿಖೆಗೆ 4 ಸದಸ್ಯರ ಸಮಿತಿ; 15 ದಿನಗಳಲ್ಲಿ ವರದಿ ಸಲ್ಲಿಸಲು ಸೂಚನೆ